For Quick Alerts
ALLOW NOTIFICATIONS  
For Daily Alerts

ಅಮುಲ್ ಬ್ರ್ಯಾಂಡ್ ನಿಂದ 52,000 ಕೋಟಿಗೂ ಹೆಚ್ಚು ಸಮಗ್ರ ವಹಿವಾಟು

|

ಅಮುಲ್ ಬ್ರ್ಯಾಂಡ್ ಎಲ್ಲ ಉತ್ಪನ್ನಗಳೂ ಸೇರಿ 2019- 20ನೇ ಸಾಲಿನಲ್ಲಿ 52,000 ಕೋಟಿ ರುಪಾಯಿಗೂ ಹೆಚ್ಚು ಮೊತ್ತದ ಸಮಗ್ರ ವಹಿವಾಟು ನಡೆಸಿದೆ. ಗುಜರಾತ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (GCMMF) ಅಮುಲ್ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟ ಮಾಡುತ್ತದೆ. ಇದು ಶನಿವಾರ ಹೊರಬಿದ್ದಿರುವ ಮಾಹಿತಿ.

 

ಮೋದಿ ಅಚ್ಚುಮೆಚ್ಚಿನಾ 'ಒಂಟೆ ಹಾಲು' ಮಾರಾಟಕ್ಕೆ ಮುಂದಾದ ಅಮುಲ್ಮೋದಿ ಅಚ್ಚುಮೆಚ್ಚಿನಾ 'ಒಂಟೆ ಹಾಲು' ಮಾರಾಟಕ್ಕೆ ಮುಂದಾದ ಅಮುಲ್

ಫೆಡರೇಷನ್ ನಿಂದ 2024- 25ರ ಹೊತ್ತಿಗೆ 1 ಲಕ್ಷ ಕೋಟಿ ರುಪಾಯಿ ವಹಿವಾಟು ತಲುಪುವುದಕ್ಕೆ ಗುರಿ ಇರಿಸಿಕೊಳ್ಳಲಾಗಿದೆ. GCMMF ಗ್ರೂಪ್ ನ ಎಲ್ಲ ವಹಿವಾಟು ಸೇರಿ 52 ಸಾವಿರ ಕೋಟಿ ಮೀರಿದೆ ಎಂದು ಆನಂದ್ ನಲ್ಲಿ ನಡೆದ 42ನೇ AGMನಲ್ಲಿ ತಿಳಿಸಿದೆ. GCMMF ಹೇಳಿರುವ ಪ್ರಕಾರ, 2019- 20ನೇ ಸಾಲಿಗೆ ನೋಂದಾಯಿತು ಮಾರಾಟ ವಹಿವಾಟ 38,452 ಕೋಟಿ ಆಗಿದ್ದು, ಹಿಂದಿನ ಆರ್ಥಿಕ ವರ್ಷಕ್ಕಿಂತ 17 ಪರ್ಸೆಂಟ್ ಹೆಚ್ಚಿದೆ.

2009- 10ರಲ್ಲಿ 8,005 ಕೋಟಿ ವಹಿವಾಟು

2009- 10ರಲ್ಲಿ 8,005 ಕೋಟಿ ವಹಿವಾಟು

2009- 10ರಲ್ಲಿ ಅಮುಲ್ ವಹಿವಾಟು 8,005 ಕೋಟಿ ರುಪಾಯಿ ಇದ್ದಿದ್ದು 5 ಪಟ್ಟು ಹೆಚ್ಚಳವಾಗಿದೆ. 2019- 20ರಲ್ಲಿ ನಿತ್ಯವೂ 215.96 ಲಕ್ಷ ಲೀಟರ್ ಹಾಲನ್ನು ಖರೀದಿ ಮಾಡಿದೆ. ಇನ್ನು ಉಳಿದ ಖಾಸಗಿ ಹಾಲಿನ ಮಾರಾಟ ಸಂಸ್ಥೆಗಳು ಲಾಕ್ ಡೌನ್ ಇದ್ದುದರಿಂದ ರೈತರಿಂದ ಹಾಲು ಖರೀದಿ ನಿಲ್ಲಿಸಿದ್ದವು. ಈ ವೇಳೆ ಗುಜರಾತ್ ಹಾಲಿನ ಒಕ್ಕೂಟವು ಹೆಚ್ಚುವರಿಯಾಗಿ ದಿನಕ್ಕೆ 35 ಲಕ್ಷ ಲೀಟರ್ ಹಾಲಿ ಖರೀದಿಸಿದ್ದು, ಗ್ರಾಮೀಣ ಭಾಗದ ರೈತರಿಗೆ 800 ಕೋಟಿ ಪಾವತಿಸಲಾಗಿದೆ.

ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ

ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ

ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ ಭಾರತ. ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ 5.5 ಪರ್ಸೆಂಟ್ ವಾರ್ಷಿಕ ಬೆಳವಣಿಗೆಯೊಂದಿಗೆ ಪ್ರಮುಖ ಸ್ಥಾನದಲ್ಲಿದೆ ಭಾರತ. ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ದರ 2 ಪರ್ಸೆಂಟ್ ಇದೆ. ಕೇಂದ್ರ ಸರ್ಕಾರವು ಡೇರಿ ಮೂಲಸೌಕರ್ಯ ನಿಧಿ ಘೋಷಿಸಿದ್ದು, ಇದರಿಂದ ಭಾರತದ ಡೇರಿ ವಲಯದ ಉತ್ಪಾದನೆ ಸಾಮರ್ಥ್ಯ 4ರಿಂದ 5 ಕೋಟಿ ಲೀಟರ್ ಹೆಚ್ಚಳ ಆಗುತ್ತದೆ. ಭಾರತದ ಗ್ರಾಮೀಣ ಭಾಗದ 30 ಲಕ್ಷ ರೈತರಿಗೆ ನೆರವಾಗುತ್ತದೆ ಎನ್ನುತ್ತಾರೆ GCMMF ಅಧಿಕಾರಿಗಳು.

ಗುಜರಾತ್ ಹಾಲು ಒಕ್ಕೂಟದಿಂದ ಧನ್ಯವಾದ
 

ಗುಜರಾತ್ ಹಾಲು ಒಕ್ಕೂಟದಿಂದ ಧನ್ಯವಾದ

ಈ ಸಮಯಕ್ಕೆ ಇದು ಬೇಕಾಗಿದೆ. ಸಾವಿರಾರು ಮಂದಿ ವಲಸಿಗ ಕಾರ್ಮಿಕರು ಹಳ್ಳಿಗಳಿಗೆ ಹಾಗೂ ಪಟ್ಟಣ ಕೇಂದ್ರಗಳಿಗೆ ವಾಪಸಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜನರಿಗೆ ಆದಾಯಕ್ಕೆ ದಾರಿ ಮಾಡಿಕೊಡುವುದಕ್ಕೆ ಅಗತ್ಯ. ಕೇಂದ್ರ ಸರ್ಕಾರವು ಡೇರಿ ವಲಯದ ಉತ್ತೇಜನಕ್ಕೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಗುಜರಾತ್ ಹಾಲು ಒಕ್ಕೂಟದಿಂದ ಧನ್ಯವಾದ ಹೇಳಲಾಗಿದೆ.

English summary

Amul Brand Turnover Crossed 52000 Crore In 2019- 20

Amul brand dairy products sales turnover crossed 52,000 crore in 2019- 20.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X