For Quick Alerts
ALLOW NOTIFICATIONS  
For Daily Alerts

ಹಬ್ಬಕ್ಕೂ ಮುನ್ನ ಹಾಲಿನ ದರ 2 ರೂಪಾಯಿ ಹೆಚ್ಚಿಸಿದ ಅಮುಲ್

|

ಈ ತಿಂಗಳು ಹಬ್ಬದ ತಿಂಗಳಿನಂತಾಗಿದೆ. ಈಗಾಗಲೇ ನವರಾತ್ರಿ ಕಳೆದಿದೆ. ಈಗ ದೀಪಾವಳಿಗಾಗಿ ಎಲ್ಲ ತಯಾರಿಯಲ್ಲಿ ಜನರು ತೊಡಗಿದ್ದಾರೆ. ಈ ನಡುವೆ ಗುಜರಾತ್ ಕಾಪೋರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (ಜಿಸಿಎಂಎಂಎಫ್) ತನ್ನ ಅಮುಲ್ ಬ್ರಾಂಡ್‌ನ ಹಾಲಿನ ದರವನ್ನು ಎರಡು ರೂಪಾಯಿ ಹೆಚ್ಚಳ ಮಾಡಿದೆ.

ಈ ವರ್ಷದಲ್ಲಿ ಇದು ಮೂರನೇ ಬಾರಿಗೆ ಅಮುಲ್ ಹಾಲಿನ ದರವನ್ನು ಏರಿಕೆ ಮಾಡಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿದ ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್‌ನ ಎಂಡಿ ಆರ್‌ಎಸ್‌ ಸೋಧಿ, "ಅಮುಲ್ ಪೂರ್ಣ ಕ್ರೀಮ್ ಹಾಲಿನ ದರ ಹಾಗೂ ಎಮ್ಮೆ ಹಾಲಿನ ದರವನ್ನು ಎರಡು ರೂಪಾಯಿ ಏರಿಕೆ ಮಾಡಿದೆ. ಗುಜರಾತ್ ಹೊರತುಪಡಿಸಿ ದೇಶದ ಉಳಿದ ಎಲ್ಲ ಭಾಗಗಳಲ್ಲಿ ಅಮುಲ್ ಹಾಲಿನ ದರ ಹೆಚ್ಚಳವಾಗುತ್ತದೆ," ಎಂದು ಮಾಹಿತಿ ನೀಡಿದ್ದಾರೆ.

ಹಾಲಿನ ದರ ಮತ್ತೆ ಹೆಚ್ಚಿಸಿದ ಮದರ್ ಡೈರಿ, ಅಮುಲ್ ಮಿಲ್ಕ್, ಎಷ್ಟು ಹೆಚ್ಚಳ?ಹಾಲಿನ ದರ ಮತ್ತೆ ಹೆಚ್ಚಿಸಿದ ಮದರ್ ಡೈರಿ, ಅಮುಲ್ ಮಿಲ್ಕ್, ಎಷ್ಟು ಹೆಚ್ಚಳ?

ಅಮುಲ್ ಪೂರ್ಣ ಕ್ರೀಮ್ ಹಾಲಿನ ದರವು ಪ್ರತಿ ಲೀಟರ್‌ಗೆ 63 ರೂಪಾಯಿಯಿಂದ 61 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಅಮುಲ್ ಆಗಸ್ಟ್ ತಿಂಗಳಿನಲ್ಲಿ ಅಮುಲ್ ಗೋಲ್ಡ್, ಶಕ್ತಿ ಹಾಗೂ ತಾಜಾ ಹಾಲಿನ ದರವನ್ನು 2 ರೂಪಾಯಿ ಏರಿಕೆ ಮಾಡಿದೆ.

ಇನ್ನು ಅಮುಲ್ ತನ್ನ ಹಾಲಿನ ದರವನ್ನು ಹೆಚ್ಚಳ ಮಾಡಿ ಘೋಷಿಸಿದ ಬಳಿಕವೇ ಹಲವಾರು ಡೈರಿಗಳು ತಮ್ಮ ಹಾಲಿನ ದರವನ್ನು ಹೆಚ್ಚಿಸಿದೆ. ಮದರ್ ಡೈರಿ, ಆನಂದ ಎರಡು ಸಂಸ್ಥೆಗಳು ಹಾಲಿನ ದರವನ್ನು ಈ ಹಿಂದೆ ಹೆಚ್ಚಳ ಮಾಡಿದೆ. ಅಧಿಕ ಹಣದುಬ್ಬರ ಹಾಗೂ ಅಧಿಕ ಜಿಎಸ್‌ಟಿಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಡೈರಿಗಳು ಹಾಲಿನ ಬೆಲೆ ಏರಿಕೆ ಮಾಡಿದೆ.

ಹಬ್ಬಕ್ಕೂ ಮುನ್ನ ಹಾಲಿನ ದರ 2 ರೂಪಾಯಿ ಹೆಚ್ಚಿಸಿದ ಅಮುಲ್

ಈ ಹಿಂದೆ ಹಾಲಿನ ದರ ಹೆಚ್ಚಿಸಿದ್ದ ಡೈರಿಗಳು

ಗುಜರಾತ್ ಕಾಪೋರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (ಜಿಸಿಎಂಎಂಎಫ್) ಮುಖ್ಯವಾಗಿ ದೆಹಲಿ -ಎನ್‌ಸಿಆರ್, ಪಶ್ಚಿಮ ಬಂಗಾಳ, ಗುಜರಾತ್, ಮುಂಬೈನಲ್ಲಿ ತನ್ನ ಹಾಲಿನ ಕೇಂದ್ರವನ್ನು ಹೊಂದಿದೆ. ಇನ್ನು ಜಿಸಿಎಂಎಂಎಫ್ ಪ್ರತಿ ದಿನ 150 ಲಕ್ಷ ಲೀಟರ್ ಹಾಲಿನ ಮಾರಾಟ ನಡೆಸುತ್ತಿದೆ. ದೆಹಲಿ-ಎನ್‌ಆರ್‌ಸಿಯಲ್ಲಿಯೇ ಪ್ರತಿ ದಿನ 40 ಲಕ್ಷ ಲೀಟರ್ ಹಾಲಿನ ಮಾರಾಟ ನಡೆಸುತ್ತದೆ.

ಅಮುಲ್ ಬ್ರ್ಯಾಂಡ್ ನಿಂದ 52,000 ಕೋಟಿಗೂ ಹೆಚ್ಚು ಸಮಗ್ರ ವಹಿವಾಟುಅಮುಲ್ ಬ್ರ್ಯಾಂಡ್ ನಿಂದ 52,000 ಕೋಟಿಗೂ ಹೆಚ್ಚು ಸಮಗ್ರ ವಹಿವಾಟು

"ಅಮುಲ್‌ ಬ್ರಾಂಡ್‌ನಲ್ಲಿ ಹಾಲಿನ ಮಾರಾಟ ಮಾಡುವ ಹಾಲು ಹಾಗೂ ಹಾಲಿನ ಉತ್ಪನ್ನಗಳ ಸಂಸ್ಥೆ ಗುಜರಾತ್ ಕೋಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ (ಜಿಸಿಎಂಎಂಎಫ್) ಹಾಲಿನ ದರ ಎರಡು ರೂಪಾಯಿ ಏರಿಕೆ ಮಾಡಲು ಆಗಸ್ಟ್‌ನಲ್ಲಿ ನಿರ್ಧಾರ ಮಾಡಿತ್ತು. ಈ ಪರಿಷ್ಕೃತ ದರವು ಆಗಸ್ಟ್ 17ರಿಂದ ಜಾರಿಗೆ ಬಂದಿತ್ತು. ಈಗ ಮತ್ತೆ ಅಕ್ಟೋಬರ್‌ನಲ್ಲಿ ದರ ಏರಿಕೆ ಮಾಡಲಾಗಿದೆ.

ಅಹಮದಾಬಾದ್, ಗುಜರಾತ್‌ನ ಸೌರಾಷ್ಟ್ರ, ದೆಹಲಿ ಎನ್‌ಸಿಆರ್, ಪಶ್ಚಿಮ ಬಂಗಾಳ, ಮುಂಬೈ ಸೇರಿದಂತೆ ಎಲ್ಲ ಪ್ರದೇಶದಲ್ಲಿ ಅಮುಲ್ ಹಾಲಿನ ಬೆಲೆ ಎರಡು ರೂಪಾಯಿ ಹೆಚ್ಚಳವಾಗಲಿದೆ," ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿತ್ತು. ಇನ್ನು ದೆಹಲಿ ಎನ್‌ಆರ್‌ಸಿಯಲ್ಲಿ ಮದರ್ ಡೈರಿ ಕೂಡಾ ಹಾಲಿನ ದರ ಹೆಚ್ಚಳವನ್ನು ಘೋಷಣೆ ಮಾಡಿತ್ತು. "ಆಗಸ್ಟ್ 17ರಿಂದ ಜಾರಿಗೆ ಬರುವಂತೆ ಮದರ್ ಡೈರಿ ಹಾಲಿನ ದರದಲ್ಲಿ ಎರಡು ರೂಪಾಯಿ ಹೆಚ್ಚಳ ಮಾಡಿದೆ. ಎಲ್ಲ ಪ್ರದೇಶದಲ್ಲಿ ಈ ದರ ಹೆಚ್ಚಳ ಅನ್ವಯವಾಗಲಿದೆ," ಎಂದು ಹೇಳಿತ್ತು. ಆದರೆ ರಿಟೇಲ್ ಹಾಲಿನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದರವು ಸ್ಥಿರವಾಗಿದೆ.

ಹಾಲಿನ ದರ ಏರಿಕೆ ಯಾಕಾಗಿ?

ಉತ್ಪದನಾ ದರ ಹೆಚ್ಚಳವಾಗಿರುವ ಕಾರಣದಿಂದಾಗಿ ಹಾಲಿನ ದರವನ್ನು ಅಧಿಕ ಮಾಡಲಾಗುತ್ತಿದೆ ಎಂದು ಸಂಸ್ಥೆಗಳು ಹೇಳಿದೆ. ಹಾಲು ಉತ್ಪಾದನಾ ವೆಚ್ಚ ಅಧಿಕವಾಗಿರುವ ಕಾರಣದಿಂದಾಗಿ ಹಾಲಿನ ದರವನ್ನು ಏರಿಕೆ ಮಾಡಲಾಗಿದೆ. ಪಶುಗಳಿಗೆ ಮೇವು ಹಾಕುವ ವೆಚ್ಚವೇ ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡ 20ರಷ್ಟು ಅಧಿಕವಾಗಿದೆ. ಮೇವಿನ ವೆಚ್ಚ ಅಧಿಕವಾದ ಕಾರಣದಿಂದಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದೆ.

English summary

Amul Hikes Milk Prices by Rs.2 per Litre Except Gujarat

Ahead of the festive season, the Gujarat Cooperative Milk Marketing Federation (GCMMF), which sells milk and milk products under the brand name ‘Amul’ increased the price of milk by ₹2 per litre.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X