ಸಿನಿಮಾಗಳ ವಿಲನ್ ಬಳಸಬಾರದಂತೆ ಆಪಲ್ ಮೊಬೈಲ್ ಫೋನ್

ಆಪಲ್ ಕಂಪೆನಿಯ ಫೋನ್ ಬಗ್ಗೆ ಚಿತ್ರಕರ್ಮಿ ರಿಯಾನ್ ಜಾನ್ಸನ್ ಆಸಕ್ತಿಕರ ಸಂಗತಿಯೊಂದನ್ನು ಬಹಿರಂಗ ಪಡಿಸಿದ್ದಾರೆ. ಕೇಳುವುದಕ್ಕೆ ಇದೊಂಥರಾ ತಮಾಷೆ ಅನಿಸಬಹುದು. ಆದರೆ ಹೀಗೊಂದು ನಿಯಮವನ್ನು ಆಪಲ್ ಕಂಪೆನಿ ಮಾಡಿದೆಯಂತೆ. ಯಾವುದಾದರೂ ಸಿನಿಮಾದಲ್ಲಿ ವಿಲನ್ ಅಥವಾ ಕೆಟ್ಟ ಪಾತ್ರಗಳು ಐಫೋನ್ ಬಳಸಬಾರದು ಎಂದು ಆಪಲ್ ಕಡ್ಡಾಯ ಮಾಡಿದೆಯಂತೆ.

ವಿಡಿಯೋ ಸಂದರ್ಶನವೊಂದರಲ್ಲಿ ವ್ಯಾನಿಟಿ ಫೇರ್ ಜತೆಗೆ ಮಾತನಾಡಿರುವ ಜಾನ್ಸನ್, ಈಚೆಗಿನ ತಮ್ಮ ಸಿನಿಮಾ 'Knives Out' ದೃಶ್ಯವೊಂದರ ಬಗ್ಗೆ ಹೇಳಿಕೊಂಡಿದ್ದಾರೆ. ಒಂದು ದೃಶ್ಯದಲ್ಲಿ ಕುಟುಂಬ ಸದಸ್ಯರೆಲ್ಲರ ಬಳಿಯೂ ಆಪಲ್ ಐಫೋನ್ ಇರುತ್ತದೆ. ಆದರೆ ಸಿನಿಮಾದ ಅಂತಿಮ ದೃಶ್ಯದಲ್ಲಿ ಕೊಲೆಗಾರ ಯಾರು ಎಂದು ಗೊತ್ತಾಗುವ ಪಾತ್ರದ ಕೈಲಿ ಮಾತ್ರ ಐಫೋನ್ ಇರುವುದಿಲ್ಲ.

ಈ ಬಗ್ಗೆ ಇನ್ನಷ್ಟು ಮಾತನಾಡಿರುವ ಜಾನ್ಸನ್, ಇದನ್ನು ಹೇಳಬೇಕೋ ಬೇಡವೋ ನನಗೆ ಗೊತ್ತಿಲ್ಲ. ಇದು ಪ್ರಚೋದನಾಕಾರಿ ಅಥವಾ ಬೇರೇನೋ ಅಂತಲ್ಲ. ಮುಂದೆ ನಾನು ಬರೆಯುವ ಮಿಸ್ಟರಿ ಸಿನಿಮಾಗೆ ಇದರಿಂದ ತೊಂದರೆ ಆಗಬಹುದು ಎಂದು ಹೇಳಿಕೊಂಡಿದ್ದಾರೆ.

ಸಿನಿಮಾಗಳ ವಿಲನ್ ಬಳಸಬಾರದಂತೆ ಆಪಲ್ ಮೊಬೈಲ್ ಫೋನ್

ಆದರೆ, ಇದೆಲ್ಲ ಮರೆತು ಬಿಡಿ. ಆಪಲ್ ನವರು ತಮ್ಮ ಐಫೋನ್ ಅನ್ನು ಸಿನಿಮಾದಲ್ಲಿ ಬಳಸಲು ಬಿಡುತ್ತಾರೆ. ಆದರೆ ಮಿಸ್ಟರಿ ಸಿನಿಮಾ ನೋಡುವಾಗ ಗಮನಿಸಿ, ಕೆಟ್ಟ ಪಾತ್ರ ಅಥವಾ ದುಷ್ಟ ಸ್ವಭಾವದ ವ್ಯಕ್ತಿಗಳು ಕ್ಯಾಮೆರಾದ ಎದುರು ಐಫೋನ್ ಬಳಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ ಜಾನ್ಸನ್.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+