ಆಪಲ್ ಕಂಪೆನಿಯವರು ತಮ್ಮ ಪ್ರಾಡಕ್ಟ್ ಗಳಿಗೆ ನಿಗದಿ ಮಾಡುವ ಬೆಲೆ ಕೇಳಿದರೆ ಹೆಚ್ಚಿನ ಜನ, ಭಾರೀ ಆಯಿತು ಅಂತ ತಲೆ ಕೊಡವಿಕೊಳ್ಳುತ್ತಾರೆ. ಆದರೆ ಮಂಗಳವಾರ ಮಾರಾಟ ಆರಂಭ ಮಾಡಿರುವ Mac Pro ಡೆಸ್ಕ್ ಟಾಪ್ ನ ಬೆಲೆ ಕೇಳಿದರೆ ಹೌಹಾರುವಂತಿದೆ. ಅದೆಷ್ಟು ಬೆಲೆ ಅಂತೀರಾ? $ 50,000, ಭಾರತದ ರುಪಾಯಿ ಮೌಲ್ಯದಲ್ಲಿ 36 ಲಕ್ಷ ರುಪಾಯಿ.
ಟ್ರಂಪ್ ಆಡಳಿತದಿಂದ ಟಾರಿಫ್ ನ ವಿನಾಯಿತಿ ಸಿಕ್ಕ ಮೇಲೆ ಆಸ್ಟಿನ್ ಹಾಗೂ ಟೆಕ್ಸಾಸ್ ನಲ್ಲಿ ಈ ಹೊಸ ಯಂತ್ರವನ್ನು ಆಪಲ್ ಉತ್ಪಾದಿಸಿದೆ. ಏನೇನೂ ಕೆಲಸಕ್ಕೆ ಬರಲ್ಲ ಎಂದು ಪ್ರೋಗ್ರಾಮರ್ಸ್, ವಿಡಿಯೋ ಎಡಿಟರ್ ಗಳು ಮತ್ತು ಫೋಟೋಗ್ರಾಫರ್ ಗಳು ಹೇಳುವ ಸ್ಪೆಸಿಫಿಕೇಷನ್ ಇರುವುದರ ಬೆಲೆಯೇ $ 5,999 ಆಗುತ್ತದೆ.
ಆದರೆ, ಫುಲ್ ಲೋಡೆಡ್ ಕಂಪ್ಯೂಟರ್ ನ ಬೆಲೆ $ 52,000 ಆಗುತ್ತದೆ. ಅದು ಚಲಿಸಲು ಅನುಕೂಲವಾಗುವಂತೆ ವ್ಹೀಲ್ಸ್ ಕೂಡ ಇರಬೇಕು ಅಂದರೆ $ 400 (28 ಸಾವಿರ ರುಪಾಯಿ) ಹೆಚ್ಚಿಗೆ ನೀಡಬೇಕು. ಕೆಲವು ವೃತ್ತಿಪರ ಬಳಕೆದಾರರಿಗೆ ಆಪಲ್ ನ ಈ ಹೊಸ ಕಂಪ್ಯೂಟರ್ ನ ಬೆಲೆ ತಮ್ಮ ವ್ಯಾಪಾರದ ಭಾಗ. ಆದರೆ ಹಲವು ಗ್ರಾಹಕರಿಗೆ ಆಪಲ್ ನ ಈ ಬೆಲೆ ಗಾಬರಿ ಹುಟ್ಟಿಸಿದೆ.

ಇದು ಜಗತ್ತಿನ ಅತ್ಯಂತ ದುಬಾರಿ ಪರ್ಸನಲ್ ಕಂಪ್ಯೂಟರ್ ಗಳಲ್ಲಿ ಒಂದು. ಹಲವರು ಈ ಕಂಪ್ಯೂಟರ್ ನ ಬೆಲೆಯನ್ನು ಔಡಿ ಕಾರಿನ ಜತೆಗೆ ಹೋಲಿಕೆ ಮಾಡುತ್ತಿದ್ದಾರೆ. ಬೇಸ್ ಪ್ರಾಡಕ್ಟ್ ನಲ್ಲಿ 256 ಜಿ.ಬಿ. ಸ್ಟೋರೇಜ್ ಇರುತ್ತದೆ. ಈ ಬೆಲೆಗೆ ವೃತ್ತಿಪರ ಕಂಪ್ಯೂಟರ್ ಗಳಿಗೆ ಬಹಳ ಕಡಿಮೆ. 4 TB ಹೆಚ್ಚು ಬೇಕು ಅಂದರೆ ಅದಕ್ಕೆ $ 1,400 ಹೆಚ್ಚಿಗೆ ಆಗುತ್ತದೆ. ಇನ್ನು 8 TBಯದು ಮುಂದೆ ಬರಲಿದೆ. ಆದರೆ ಅದರ ಬೆಲೆ ಬಹಿರಂಗ ಮಾಡಿಲ್ಲ.
ಇನ್ನು ಕಂಪ್ಯೂಟರ್ RAM 32 GBಯಿಂದ 1.5 TBಗೆ ಹೆಚ್ಚಿಸಬೇಕು ಅಂದರೆ ಅದಕ್ಕೆ $ 25,000 ಹೆಚ್ಚುವರಿಯಾಗಿ ಹಣ ನೀಡಬೇಕು. ಬೆಲೆ $ 52,000 ದಾಟುವುದಕ್ಕೆ ಇದೇ ಕಾರಣ. ಡೇಟಾ ಸೆಂಟರ್ ಗಳಿಗೆ ಸೂಕ್ತವಾಗುವಂಥ ರಚನೆ ಆಗಿರುವ Mac Proಗೆ ಹೆಚ್ಚುವರಿಯಾಗಿ $ 500 ನೀಡಬೇಕು. ಅದನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಈ ಮ್ಯಾಕ್ ಪ್ರೋನಲ್ಲಿ ಡಿಸ್ ಪ್ಲೇ ಒಳಗೊಂಡಿಲ್ಲ. ಪ್ರೋ ಡಿಸ್ ಪ್ಲೇ XDR ಮಂಗಳವಾರದಂದು $ 4,999ಕ್ಕೆ ಮಾರಾಟ ಆಗುತ್ತಿದೆ. ಮ್ಯಾಕ್ ಪ್ರೋ ಬೆಲೆ ಬಗ್ಗೆ ಮೊದಲ ಬಾರಿ ಗಮನ ಸೆಳೆದಿದ್ದು ಕಳೆದ ಜೂನ್ ನಲ್ಲಿ. ಆಗಲೇ ಕಂಪೆನಿಯಿಂದ ಪ್ರಾಡಕ್ಟ್ ಘೋಷಿಸಲಾಯಿತು. ಹೊಸ ಮಾನಿಟರ್ ಗೆ ಹೆಚ್ಚುವರಿಯಾಗಿ $ 999 ಆಗುತ್ತದೆ.


Click it and Unblock the Notifications