For Quick Alerts
ALLOW NOTIFICATIONS  
For Daily Alerts

ಕೊರೊನಾ ಎಫೆಕ್ಟ್‌: ಏಪ್ರಿಲ್‌ನಲ್ಲಿ ಮಹೀಂದ್ರಾ, ಟಾಟಾ, ಹ್ಯುಂಡೈ ಕಾರುಗಳ ಮಾರಾಟ ಇಳಿಕೆ

|

ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೇಶದಲ್ಲಿ ಅನೇಕ ರಾಜ್ಯಗಳು ಲಾಕ್‌ಡೌನ್‌ನಲ್ಲಿವೆ. ಏಪ್ರಿಲ್‌ನಲ್ಲಿ ಕೋವಿಡ್‌ ನಿರ್ಬಂಧವು ಬಹುತೇಕ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಇದರಿಂದ ಮೋಟಾರು ವಾಹನಗಳು ತಯಾರಕರು ಹೊರತಾಗಿಲ್ಲ.

 

ದೇಶದ ಅತಿದೊಡ್ಡ ಕಾರು ತಯಾರಕರಾದ ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್ ಮಾರಾಟವು ಕಡಿಮೆಯಾದರೆ, ಮತ್ತೊಂದೆಡೆ ಮಹೀಂದ್ರಾ ಮಾರಾಟ ಹೆಚ್ಚಾಗಿದೆ. ಮೊದಲನೆಯದಾಗಿ, ಮಾರುತಿ ಸುಜುಕಿ ಮಾರ್ಚ್ 2021 ರಲ್ಲಿ ಒಟ್ಟು 1,59,491 ಯುನಿಟ್ ಮಾರಾಟವನ್ನು ಹೊಂದಿದ್ದು, ಕಳೆದ ತಿಂಗಳು 4.3% ರಷ್ಟು ಕುಸಿತ ಕಂಡಿದೆ.

ಟಾಟಾ ಕಾರುಗಳ ಮಾರಾಟ ಇಳಿಕೆ

ಟಾಟಾ ಕಾರುಗಳ ಮಾರಾಟ ಇಳಿಕೆ

ಕಳೆದ ವರ್ಷ ಏಪ್ರಿಲ್‌ನಲ್ಲಿ ದೇಶಾದ್ಯಂತ ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದಾಗಿ ಕಾರು ಕಂಪನಿಗಳ ಮಾರಾಟ ಶೂನ್ಯವಾಗಿತ್ತು. ಆದ್ದರಿಂದ, ಕಾರು ಕಂಪನಿಗಳ ಮಾರಾಟವನ್ನು ಕಳೆದ ವರ್ಷದ ಏಪ್ರಿಲ್‌ಗೆ ಹೋಲಿಸಲಾಗುವುದಿಲ್ಲ. ಟಾಟಾ ಮೋಟಾರ್ಸ್‌ನ ಪ್ರಯಾಣಿಕರ ವಾಹನಗಳ ಮಾರಾಟವು ಮಾರ್ಚ್‌ಗೆ ಹೋಲಿಸಿದರೆ ಏಪ್ರಿಲ್‌ನಲ್ಲಿ 15% ರಷ್ಟು ಇಳಿದು 25,095 ಕ್ಕೆ ತಲುಪಿದೆ. ಕಂಪನಿಯ ಒಟ್ಟು ದೇಶೀಯ ಮಾರಾಟವು ಶೇಕಡಾ 41 ರಷ್ಟು ಕುಸಿದು 39530 ಕ್ಕೆ ತಲುಪಿದೆ ಮತ್ತು ಅದರಲ್ಲಿ ರಫ್ತು ಶೇಕಡಾ 59 ರಷ್ಟು ಇಳಿದು 2209 ಯುನಿಟ್‌ಗಳಿಗೆ ತಲುಪಿದೆ.

ಮಾರುತಿ ಸುಜುಕಿ

ಮಾರುತಿ ಸುಜುಕಿ

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್) ಏಪ್ರಿಲ್ 2021 ರಲ್ಲಿ 1,59,691 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಒಟ್ಟು ದೇಶೀಯ ದಾಖಲೆಯನ್ನು ಹೊಂದಿದೆ. ಇದು ದೇಶೀಯ 1,37,151 ಯುನಿಟ್ ಮಾರಾಟವನ್ನು ಒಳಗೊಂಡಿದೆ

ಮಿನಿ ವಿಭಾಗದಲ್ಲಿ, ಆಲ್ಟೊ ಮತ್ತು ಎಸ್-ಪ್ರೆಸ್ಸೊಗಳ ಒಟ್ಟು ಸಂಖ್ಯೆಗಳು 25,041 ಯುನಿಟ್‌ಗಳಾಗಿವೆ. ವ್ಯಾಗನ್ ಆರ್, ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಲೆನೊ, ಡಿಜೈರ್ ಮತ್ತು ಟೂರ್ ಎಸ್ ಕಳೆದ ತಿಂಗಳು ಒಟ್ಟು 72,318 ಯುನಿಟ್ ಮಾರಾಟವಾಗುವಲ್ಲಿ ಯಶಸ್ವಿಯಾಗಿದೆ. ಸಿಯಾಜ್ ಮಧ್ಯಮ ಗಾತ್ರದ ಸೆಡಾನ್ 1,567 ಯುನಿಟ್‌ಗಳನ್ನು ಮಾರಿದ್ದು, ಜಿಪ್ಸಿ, ಎರ್ಟಿಗಾ, ಎಸ್-ಕ್ರಾಸ್, ವಿಟಾರಾ ಬ್ರೀಜಾ ಮತ್ತು ಎಕ್ಸ್‌ಎಲ್ 6 ಒಳಗೊಂಡ ಯುಟಿಲಿಟಿ ಶ್ರೇಣಿಯು 25,484 ಯುನಿಟ್‌ಗಳನ್ನು ನೋಂದಾಯಿಸಿದೆ.

 ಮಹೀಂದ್ರಾ ಮತ್ತು ಮಹೀಂದ್ರಾ
 

ಮಹೀಂದ್ರಾ ಮತ್ತು ಮಹೀಂದ್ರಾ

ಮಾರ್ಚ್‌ಗೆ ಹೋಲಿಸಿದರೆ ಮಹೀಂದ್ರಾ ಮತ್ತು ಮಹೀಂದ್ರಾ ಪ್ರಯಾಣಿಕರ ವಾಹನಗಳ ಮಾರಾಟವು ಶೇಕಡಾ 9.5 ರಷ್ಟು ಏರಿಕೆಯಾಗಿ 18,285 ಕ್ಕೆ ತಲುಪಿದೆ. ಆದರೆ ಅದರ ಒಟ್ಟು ವಾಹನ ಮಾರಾಟವು ಶೇಕಡಾ 9.8 ರಷ್ಟು ಕುಸಿದು 36,437 ಯುನಿಟ್‌ಗಳಿಗೆ ತಲುಪಿದೆ. ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳು ಸೇರಿದಂತೆ ಕಂಪನಿಯ ವಾಣಿಜ್ಯ ವಾಹನ ವಿಭಾಗದ ಮಾರಾಟವು 16,147 ಯುನಿಟ್‌ಗಳಲ್ಲಿತ್ತು.

ಮಹೀಂದ್ರಾ ಕೃಷಿ ಉಪಕರಣಗಳ ವಿಭಾಗದ ಮಾರಾಟವು ಏಪ್ರಿಲ್‌ನಲ್ಲಿ 11% ಕುಸಿದು 27,523 ಕ್ಕೆ ತಲುಪಿದೆ. ಕಳೆದ ತಿಂಗಳು ಅದು 30,970 ಕೃಷಿ ಉಪಕರಣಗಳನ್ನು ಮಾರಾಟ ಮಾಡಿತು. ದೇಶೀಯ ಟ್ರಾಕ್ಟರ್ ಮಾರಾಟವು ಹಿಂದಿನ ತಿಂಗಳಿಗಿಂತ 12.3% ರಷ್ಟು ಇಳಿದು 26,130 ಕ್ಕೆ ತಲುಪಿದೆ, ಆದರೆ ರಫ್ತು ಹಿಂದಿನ ತಿಂಗಳಿಗಿಂತ ಏಳು ಪಟ್ಟು ಹೆಚ್ಚಳವಾಗಿ 1,393 ಕ್ಕೆ ತಲುಪಿದೆ.

ಹ್ಯುಂಡೈ ಮೋಟಾರ್ ಇಂಡಿಯಾ

ಹ್ಯುಂಡೈ ಮೋಟಾರ್ ಇಂಡಿಯಾ

ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಏಪ್ರಿಲ್ 2021 ರಲ್ಲಿ 59,203 ಯುನಿಟ್ ಮಾರಾಟ ಮಾಡಿದೆ. ಇದರ ದೇಶೀಯ ಮಾರಾಟ 49,222 ಯುನಿಟ್‌ಗಳಷ್ಟಿತ್ತು. ಕಂಪನಿಯು ಕಳೆದ ತಿಂಗಳು 10,201 ಯುನಿಟ್‌ಗಳನ್ನು ರಫ್ತು ಮಾಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯ ಮಾರಾಟವು ಮಾರ್ಚ್‌ಗೆ ಹೋಲಿಸಿದರೆ ಶೇ 6.84 ರಷ್ಟು ಕುಸಿದಿದೆ. ಇದು ಮಾರ್ಚ್‌ನಲ್ಲಿ 52,600 ವಾಹನಗಳನ್ನು ಮಾರಾಟ ಮಾಡಿತು.

ಹೀರೋ ಮೊಟೊಕಾರ್ಪ್

ಹೀರೋ ಮೊಟೊಕಾರ್ಪ್

ಹೀರೋ ಮೊಟೊಕಾರ್ಪ್ ಮಾರಾಟದ ಭಾರಿ ನಷ್ಟವನ್ನು ಅನುಭವಿಸಿತು. ಕಂಪನಿಯು ಏಪ್ರಿಲ್‌ನಲ್ಲಿ ಒಟ್ಟು 372,285 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕೊರೊನಾದಿಂದಾಗಿ ಸ್ಥಾವರವನ್ನು ಮುಚ್ಚಿದ ಕಾರಣ ಮಾರ್ಚ್ ತಿಂಗಳಿಗೆ ಹೋಲಿಸಿದರೆ ಹೀರೋ ಮೊಟೊಕಾರ್ಪ್ ಮಾರಾಟ 35.4% ಕುಸಿದಿದೆ. ಕಳೆದ ತಿಂಗಳು 5,24,608 ಯುನಿಟ್‌ಗಳಿಂದ ಅದರ ಮೋಟಾರ್‌ಸೈಕಲ್‌ಗಳ ಮಾರಾಟ 3,39,329 ಯುನಿಟ್‌ಗಳಿಗೆ ಇಳಿದಿದೆ. ಮಾರ್ಚ್‌ನಲ್ಲಿ 52,349 ಯುನಿಟ್‌ಗಳಿಂದ ಸ್ಕೂಟರ್ ಮಾರಾಟವೂ ಏಪ್ರಿಲ್‌ನಲ್ಲಿ 32,956 ಕ್ಕೆ ಇಳಿದಿದೆ.

English summary

April 2021 Auto Sales: Maruti Suzuki Remains Top Seller

Maruti Suzuki, India’s largest car maker, recorded sales of 137,151 units during April. Tata, mahindra and Hyundai faced loss
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X