For Quick Alerts
ALLOW NOTIFICATIONS  
For Daily Alerts

5000 ರು.ಗಿಂತ ಹೆಚ್ಚು ಎಟಿಎಂ ಡ್ರಾ ಮಾಡಿದರೆ ಶುಲ್ಕ; ಬಯಲಾಗದ ನಿಯಮ

|

ಗ್ರಾಹಕರು 5000 ರುಪಾಯಿಗಿಂತ ಹೆಚ್ಚು ಹಣವನ್ನು ಎಟಿಎಂನಿಂದ ವಿಥ್ ಡ್ರಾ ಮಾಡುವ ಪ್ರತಿ ಸಲವೂ ಶುಲ್ಕ ವಿಧಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಮಿತಿಯು ಶಿಫಾರಸು ಮಾಡಿದೆ. ಇನ್ನೂ ಬಿಡುಗಡೆ ಆಗದ ವರದಿಯೊಂದರ ಮಾಹಿತಿಯು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಯಿಂದ ತಿಳಿದುಬಂದಿದೆ.

ಎಟಿಎಂನಿಂದ ಐದು ಸಾವಿರದ ತನಕ (ಮತ್ತು ಒಳಗೊಂಡಂತೆ) ಮಾತ್ರ ಉಚಿತವಾಗಿ ವಿಥ್ ಡ್ರಾ ಮಾಡುವುದಕ್ಕೆ ಉಚಿತವಾಗಿ ಅವಕಾಶ ನೀಡಬೇಕು. 5,000 ರುಪಾಯಿ ಮೇಲ್ಪಟ್ಟ ಪ್ರತಿ ವ್ಯವಹಾರಕ್ಕೂ ಶುಲ್ಕ ವಿಧಿಸಲಾಗುತ್ತದೆ. ಎಂದು ವರದಿಯಲ್ಲಿ ಹೇಳಲಾಗಿದೆ. ಅಮ್ದ ಹಾಗೆ ಆರ್ ಬಿಐ ಸಮಿತಿಯ ನೇತೃತ್ವ ವಹಿಸಿದ್ದವರು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮುಖ್ಯ ಅಧಿಕಾರಿ ಆಗಿದ್ದ ವಿ.ಜಿ. ಕಣ್ಣನ್.

ಎಟಿಎಂ ಶುಲ್ಕದ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ

ಎಟಿಎಂ ಶುಲ್ಕದ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ

ಈ ವರದಿಯನ್ನು ಅಕ್ಟೋಬರ್ 22, 2019ರಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸಲ್ಲಿಸಿದ್ದಾರೆ. ಆದರೆ ಆ ವರದಿ ಬಿಡುಗಡೆಯೇ ಆಗಿಲ್ಲ. ಮೊದಲಿಗೆ ವರದಿ ಬಗ್ಗೆ ಕೇಳಿರುವುದಕ್ಕೆ ಆರ್ ಟಿಐ ಅಡಿಯಲ್ಲಿ ಅದನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಆ ನಂತರ ಎಟಿಎಂ ಶುಲ್ಕದ ಬಗೆಗಿನ ಮಾಹಿತಿಗಾಗಿ ಅರ್ಜಿ ಹಾಕಿದ ಮೇಲೆ ಸಿಕ್ಕಿದ್ದು, ಅರ್ಜಿದಾರ ಶ್ರೀಕಾಂತ್ ಈ ಮಾಹಿತಿ ಸಾರ್ವಜನಿಕರಿಗೂ ದೊರೆಯುವಂತೆ ಮಾಡಿದ್ದಾರೆ.

ಕಾರ್ಯ ನಿರ್ವಹಣೆ ಶುಲ್ಕ ಹೆಚ್ಚಾಗಿದೆ

ಕಾರ್ಯ ನಿರ್ವಹಣೆ ಶುಲ್ಕ ಹೆಚ್ಚಾಗಿದೆ

ವರದಿಯಲ್ಲಿ ಹೇಳಿರುವ ಪ್ರಕಾರ, ಎಟಿಎಂ ಕಾರ್ಯ ನಿರ್ವಹಣೆ ವೆಚ್ಚವು ಹೆಚ್ಚಳವಾಗಿದೆ. ಬೇರೆ ಎಟಿಎಂಗಳಲ್ಲಿ ಹಣ ವಿಥ್ ಡ್ರಾ ಮಾಡಿದರೆ ಅದರ ಶುಲ್ಕ 2012ರಿಂದ ಹಾಗೂ ಎಟಿಎಂ ಬಳಕೆಯ ಶುಲ್ಕವನ್ನು 2008ರಿಂದ ಏರಿಕೆ ಮಾಡಿಲ್ಲ. ಇನ್ನು ಅರೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಎಟಿಎಂ ಆರಂಭ ಮಾಡದ ಬಗ್ಗೆ ಸಮಿತಿಯು ಆತಂಕ ವ್ಯಕ್ತಪಡಿಸಿದ್ದಾರೆ.

ಜನಸಂಖ್ಯೆಯೇ ಮಾನದಂಡ
 

ಜನಸಂಖ್ಯೆಯೇ ಮಾನದಂಡ

ಜನಸಂಖ್ಯೆಯನ್ನು ಮಾನದಂಡವಾಗಿ ಇಟ್ಟುಕೊಂಡು ಎಟಿಎಂ ಶುಲ್ಕ ವಿಧಿಸುವಂತೆ ಶಿಫಾರಸು ಮಾಡಲಾಗಿದೆ. ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಕಡೆ ಸದ್ಯಕ್ಕೆ ಇರುವ ಐದು ಉಚಿತ ವ್ಯವಹಾರದ ಬದಲಿಗೆ ಆರಕ್ಕೆ ಹೆಚ್ಚಿಸಲು ಚಿಂತನೆ ನಡೆದಿದೆ. ಇನ್ನು ಜನಸಂಖ್ಯೆ ಹೆಚ್ಚಿರುವ ಕಡೆ ಎಟಿಎಂ ವಿಥ್ ಡ್ರಾ ಮಿತಿಯನ್ನು ಮೂರಕ್ಕೆ ನಿಗದಿ ಮಾಡಲು ಶಿಫಾರಸು ಮಾಡಲಾಗಿದೆ.

ಶುಲ್ಕದಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ

ಶುಲ್ಕದಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ

ಕಳೆದ ಒಂದು ವರ್ಷದಿಂದ ಎಟಿಎಂ ಬಳಕೆ ಹೆಚ್ಚಾಗಿದೆ. ಆದರೆ ಎಟಿಎಂ ಕಾರ್ಯ ನಿರ್ವಹಣೆ ವೆಚ್ಚ ಹೆಚ್ಚಾಗುವುದರಿಂದ ಹೊಸನ್ನು ಆರಂಭಿಸುತ್ತಿಲ್ಲ. ಆಯಾ ಬ್ಕಾಂಕ್ ಬಿಟ್ಟು ಬೇರೆ ಬ್ಯಾಂಕ್ ಎಟಿಎಂನಲ್ಲಿ ವಿಥ್ ಡ್ರಾ ಮಾಡಿದರೆ, ನಿಗದಿತ ಮಿತಿಗಿಂತ ಹೆಚ್ಚು ಡ್ರಾ ಮಾಡಿದರೆ ವಿಧಿಸುವ ಶುಲ್ಕದಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಿಲ್ಲ.

English summary

ATM Withdrawal More Than 5000 will Attract Fee: Report

An answer to RTI said that, recommendation to impose fee for every transaction of 5,000 and above in ATM.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X