For Quick Alerts
ALLOW NOTIFICATIONS  
For Daily Alerts

ಮುಂದಿನ ತಿಂಗಳು ಎಟಿಎಂನಲ್ಲಿ ಹಣ ವಿತ್‌ಡ್ರಾ ಶುಲ್ಕ ದುಬಾರಿ: ಹೊಸ ದರ ಪರಿಶೀಲಿಸಿ

|

ಮುಂಬರುವ ತಿಂಗಳಿನಿಂದ ಅಂದರೆ ಬರುವ ವರ್ಷದಿಂದ ಎಟಿಎಂನ ವಿತ್‌ಡ್ರಾ ಶುಲ್ಕವು ದುಬಾರಿ ಆಗಲಿದೆ. 2022 ರಿಂದ ಎಟಿಎಂಗಳಿಂದ ನಗದು ಹಿಂಪಡೆಯುವುದು ಹೆಚ್ಚು ದುಬಾರಿಯಾಗಲಿದೆ. ಮುಂದಿನ ತಿಂಗಳಿನಿಂದ ಎಟಿಎಂ ಬಳಕೆದಾರರು ಉಚಿತ ಎಟಿಎಂ ವಹಿವಾಟಿನ ಮಿತಿಯನ್ನು ಮೀರಿದರೆ ಹೆಚ್ಚಿನ ಶುಲ್ಕವನ್ನು ಪಾವತಿ ಮಾಡಬೇಕಾಗು‌ತ್ತದೆ.

 

ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳ ಪ್ರಕಾರ, ಆಕ್ಸಿಸ್ ಬ್ಯಾಂಕ್ ಅಥವಾ ಇತರ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಉಚಿತ ಮಿತಿಗಿಂತ ಹೆಚ್ಚಿನ ಹಣಕಾಸು ವಹಿವಾಟುಗಳಿಗೆ ಶುಲ್ಕ 21 ರೂ ಮತ್ತು ಜಿಎಸ್‌ಟಿ ಇರಲಿದೆ ಎಂದು ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ. ಈ ಪರಿಷ್ಕೃತ ದರಗಳು ಜನವರಿ 1, 2022 ರಿಂದ ಜಾರಿಗೆ ಬರುತ್ತವೆ.

 

ಡೇಟಾ ಕಳ್ಳತನದ ಭೀತಿ ಸೃಷ್ಟಿಸಿದೆ ಜನರು ಗೌಪ್ಯ ಮಾಹಿತಿ, ಪಾಸ್‌ವರ್ಡ್ ಸಂಗ್ರಹ ಮಾಡುವ ರೀತಿಡೇಟಾ ಕಳ್ಳತನದ ಭೀತಿ ಸೃಷ್ಟಿಸಿದೆ ಜನರು ಗೌಪ್ಯ ಮಾಹಿತಿ, ಪಾಸ್‌ವರ್ಡ್ ಸಂಗ್ರಹ ಮಾಡುವ ರೀತಿ

ಈವರೆಗೆ ಉಚಿತ ವಹಿವಾಟಿನ ಮಾಸಿಕ ಮಿತಿಯನ್ನು ದಾಟಿದ ಗ್ರಾಹಕರು ರೂಪಾಯಿ 20 ಶುಲ್ಕವನ್ನು ಪಾವತಿ ಮಾಡಬೇಕಾಗಿತ್ತು. ಉಚಿತ ವಹಿವಾಟಿನ ಮಾಸಿಕ ಮಿತಿಯನ್ನು ದಾಟಿದ ಬಳಿಕ ಪ್ರತಿ ವಹಿವಾಟಿಗೆ ಇನ್ನು ಮುಂದೆ 21 ರೂ. ಜೊತೆ ಜಿಎಸ್‌ಟಿ ಕೂಡಾ ಪಾವತಿ ಮಾಡಬೇಕಾಗು‌ತ್ತದೆ.

ಮುಂದಿನ ತಿಂಗಳು ಎಟಿಎಂ ವಿತ್‌ಡ್ರಾ ದುಬಾರಿ: ಹೊಸ ದರ ಪರಿಶೀಲಿಸಿ

ಆರ್‌ಬಿಐ ಸುತ್ತೋಲೆಯ ಅಡಿಯಲ್ಲಿ ಬ್ಯಾಂಕುಗಳಿಗೆ ಹೆಚ್ಚಿನ ವಿನಿಮಯ ಶುಲ್ಕವನ್ನು ಸರಿದೂಗಿಸಲು ಈಗ ಎಟಿಎಂ ಶುಲ್ಕವನ್ನು ಅಧಿಕ ಮಾಡಿದೆ. ಪ್ರತಿ ವಹಿವಾಟಿಗೆ ಶುಲ್ಕವನ್ನು 21 ರೂ.ಗೆ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಅವಕಾಶ ನೀಡಲಾಗಿದೆ. ಬ್ಯಾಂಕುಗಳು ಪ್ರಸ್ತುತ ಗ್ರಾಹಕರಿಗೆ ತಿಂಗಳಿಗೆ ಎಂಟು ಉಚಿತ ವಹಿವಾಟುಗಳನ್ನು ನೀಡುತ್ತವೆ. ಗ್ರಾಹಕರು ಖಾತೆ ಹೊಂದಿರುವ ಬ್ಯಾಂಕ್‌ನ ಎಟಿಎಂನಿಂದ ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳು ಮಾಡಲು ಅವಕಾಶವಿದೆ. ಮೆಟ್ರೋ ನಗರಗಳಲ್ಲಿ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ ಮೂರು ಬಾರಿ ಉಚಿತ ವಹಿವಾಟುಗಳನ್ನು ಮಾಡಲು ಮತ್ತು ಮೆಟ್ರೋ ಅಲ್ಲದ ಕೇಂದ್ರಗಳಲ್ಲಿ 5 ಬಾರಿ ಉಚಿತ ವಹಿವಾಟನ್ನು ಮಾಡಲು ಗ್ರಾಹರಕರಿಗೆ ಅವಕಾಶ ನೀಡಲಾಗಿದೆ. ಇದು ಹಣಕಾಸು ಮತ್ತು ಹಣಕಾಸೇತರ ವಹಿವಾಟನ್ನು ಒಳಗೊಂಡಿದೆ.

ಇಂಟರ್ ಚೇಂಜ್ ಶುಲ್ಕ ಹೆಚ್ಚಳಕ್ಕೆ ಆರ್‌ಬಿಐ ಅನುಮೋದನೆ

ಈ ನಡುವೆ ಪ್ರತಿ ವಹಿವಾಟಿಗೆ ಇಂಟರ್ ಚೇಂಜ್ ಶುಲ್ಕವನ್ನು ಹೆಚ್ಚಿಸಲು ಆರ್ ಬಿಐ ಅನುಮೋದನೆ ನೀಡಿದೆ. ಹಣಕಾಸು ವಹಿವಾಟಿನ ಶುಲ್ಕವನ್ನು 15 ರೂ.ನಿಂದ 17 ರೂ.ಗೆ ಹೆಚ್ಚಿಸಲಾಗಿದೆ. ಹಣಕಾಸಿಲ್ಲದ ವಹಿವಾಟಿಗೆ ಇಂಟರ್ ಚೇಂಜ್ ಶುಲ್ಕವನ್ನು 5 ರೂ.ನಿಂದ 6 ರೂ.ಗೆ ಹೆಚ್ಚಿಸಲಾಗಿದೆ. ಇದು 1 ಆಗಸ್ಟ್ 2021 ರಿಂದ ಜಾರಿಗೆ ಬಂದಿದೆ.

ಯಾವ ಬ್ಯಾಂಕ್‌ನ ATMನಲ್ಲಿ ಎಷ್ಟು ಹಣ ವಿತ್‌ಡ್ರಾ ಮಾಡಬಹುದು?ಯಾವ ಬ್ಯಾಂಕ್‌ನ ATMನಲ್ಲಿ ಎಷ್ಟು ಹಣ ವಿತ್‌ಡ್ರಾ ಮಾಡಬಹುದು?

ಯಾವ ಬ್ಯಾಂಕಿನಿಂದ ಎಷ್ಟು ಹಣ ವಿತ್‌ಡ್ರಾ ಮಾಡಬಹುದು?

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನಲ್ಲಿ ಒಂದು ದಿನದಲ್ಲಿ 20,000 ರೂಗಳನ್ನು ಹಿಂಪಡೆಯಲು ಅವಕಾಶ ಇದೆ. ಕನಿಷ್ಠ 100 ರೂಪಾಯಿಗಳನ್ನು ಹಿಂಪಡೆಯಬಹುದು. ಐಸಿಐಸಿಐ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಪ್ಲಾಟಿನಂ ಚಿಪ್ ಡೆಬಿಟ್ ಕಾರ್ಡ್ ಹೊಂದಿರುವ ಬ್ಯಾಂಕ್ ಗ್ರಾಹಕರು ಒಂದು ದಿನದಲ್ಲಿ ಎಟಿಎಮ್‌ಗಳಿಂದ 1 ಲಕ್ಷ ರೂ., ವೀಸಾ ಸಿಗ್ನೇಚರ್ ಡೆಬಿಟ್ ಕಾರ್ಡ್ ಮೂಲಕ ಒಂದೇ ದಿನದಲ್ಲಿ 1.5 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು. ವೀಸಾ ಸಿಗ್ನೇಚರ್ ಡೆಬಿಟ್ ಕಾರ್ಡ್‌ನಲ್ಲಿ ನೀವು 50,000 ರೂಪಾಯಿ ಹೆಚ್ಚುವರಿ ನಗದು ಹಿಂಪಡೆಯುವ ಮಿತಿಯನ್ನು ಪಡೆಯುತ್ತೀರಿ. HDFC ಬ್ಯಾಂಕ್ ಭಾರತದ ಎರಡನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿದೆ. ನೀವು ಅದರ ಪ್ಲಾಟಿನಂ ಚಿಪ್ ಡೆಬಿಟ್ ಕಾರ್ಡ್ ಹೊಂದಿದ್ದರೆ, ಅದರ ಸಹಾಯದಿಂದ ನೀವು ಪ್ರತಿದಿನ ಎಟಿಎಂನಿಂದ 1 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು. ಈ ಮಾಹಿತಿಯನ್ನು ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ

English summary

ATM withdrawals to get expensive from January month 2022, check new rates

ATM withdrawals to get expensive from next month, check new rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X