For Quick Alerts
ALLOW NOTIFICATIONS  
For Daily Alerts

ಆಗಸ್ಟ್ ಚಿಲ್ಲರೆ ಹಣದುಬ್ಬರ ಸ್ವಲ್ಪ ಮಟ್ಟಿಗೆ ಇಳಿಕೆ: ಆರ್ ಬಿಐ ಗುರಿಗಿಂತ ಏರಿಕೆ

|

ರಾಷ್ಟ್ರೀಯ ಸಾಂಖ್ಯಿಕ ಇಲಾಖೆ (NSO) ಸೋಮವಾರ ಬಿಡುಗಡೆ ಮಾಡಿರುವ ದತ್ತಾಂಶದಲ್ಲಿ ಆಗಸ್ಟ್ ತಿಂಗಳ ಚಿಲ್ಲರೆ ಹಣದುಬ್ಬರ ದರವು 6.69%ನಷ್ಟು ಇದೆ ಎಂದು ತಿಳಿದುಬಂದಿದೆ. ಅದರ ಹಿಂದಿನ ತಿಂಗಳಾದ ಜುಲೈನಲ್ಲಿ 6.73% ಇತ್ತು. ಗ್ರಾಹಕ ದರ ಸೂಚ್ಯಂಕದ (ಸಿಪಿಐ) ಮುಖ್ಯ ಹಣದುಬ್ಬರ ದರವು 5.8% ಇದ್ದು, ಜುಲೈನಲ್ಲಿ 5.7% ದಾಖಲಾಗಿತ್ತು.

ಆಗಸ್ಟ್ ನಲ್ಲಿ ಆಹಾರ ಹಣದುಬ್ಬರ ದರವು 9.05%ಗೆ ಇಳಿದಿದೆ. ಜುಲೈನಲ್ಲಿ ಇದು 9.27% ಇತ್ತು. ಭಾರತದ ನಗರ ಪ್ರದೇಶಗಳಲ್ಲಿ ಹಣದುಬ್ಬರವು 6.8% ಇದ್ದರೆ, ಗ್ರಾಮೀಣ ಭಾಗದಲ್ಲಿ 6.66% ದಾಖಲಾಗಿದೆ. ಮಾರ್ಚ್ ನಲ್ಲಿ ಲಾಕ್ ಡೌನ್ ಘೋಷಣೆ ಆದ ಮೇಲೆ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದ ಹಣದುಬ್ಬರವು ಹೆಚ್ಚಾಗಿತ್ತು.

ಹೆಚ್ಚುತ್ತಿರುವ ಆಹಾರ ಪದಾರ್ಥಗಳ ಬೆಲೆಯ ಕಾರಣಕ್ಕೆ ಜುಲೈನಲ್ಲಿ ಹಣದುಬ್ಬರವು 6.9% ತಲುಪಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಹಣದುಬ್ಬರವನ್ನು 2ರಿಂದ 6% ಮಧ್ಯೆ ಇರುವಂತೆ ನೋಡಿಕೊಳ್ಳಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಆದರೆ ಹಣದುಬ್ಬರ ದರವು ಗುರಿ ಹಾಕಿಕೊಂಡಿದ್ದಕ್ಕಿಂತ ಆಚೆ ದಾಟಿ ಹೋಗಿದೆ.

ಆಗಸ್ಟ್ ಚಿಲ್ಲರೆ ಹಣದುಬ್ಬರ ಸ್ವಲ್ಪ  ಇಳಿಕೆ: RBI ಗುರಿಗಿಂತ ಏರಿಕೆ

ತರಕಾರಿಗಳ ಹಣದುಬ್ಬರವು 11.41%ರಿಂದ 11.29%ಗೆ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದ್ದರೆ, ತೈಲ ಹಾಗೂ ವಿದ್ಯುತ್ ಕ್ರಮವಾಗಿ 3.10% ಹಾಗೂ 2.80%ಗೆ ಹೆಚ್ಚಳವಾಗಿದೆ.

English summary

August Retail Inflation Eases, But Above RBI's Target

Retail inflation eases in August compared to July 2020. But this is above RBI's tolerance.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X