For Quick Alerts
ALLOW NOTIFICATIONS  
For Daily Alerts

22ಸಾವಿರದಿಂದ 2ಸಾವಿರ: ಪಾತಾಳಕ್ಕಿಳಿದ ಈರುಳ್ಳಿ ಬೆಲೆಯ ಹಿಂದಿನ ಅಸಲಿ ಕಹಾನಿ

|

ಕಳೆದ ಕೆಲವು ತಿಂಗಳಿನಿಂದ ಗ್ರಾಹಕರಿಗೆ ಕಣ್ಣೀರು ತರಿಸುತ್ತಿದ್ದ ಈರುಳ್ಲಿ ಬೆಲೆ ಗಣನೀಯವಾಗಿ ಇಲ್ಲದಿದ್ದರೂ, ತಕ್ಕ ಮಟ್ಟಿಗೆ ಕಮ್ಮಿಯಾಗಿದೆ. ಕೆಜಿಯೊಂದಕ್ಕೆ 120-150ರೂಪಾಯಿಗೆ ಮಾರಾಟವಾಗುತ್ತಿದ್ದ ಈರುಳ್ಳಿ ಸದ್ಯ ಕೆಜಿಗೆ 50-60 ರೂಪಾಯಿಗೆ ಸಿಗುತ್ತಿದೆ.

ದೇಶದ ವಿವಿಧ ಎಪಿಎಂಸಿ ಮಾರುಕಟ್ಟೆಯಲ್ಲಿ ಬಂದು ಬೀಳುತ್ತಿರುವ ಈರುಳ್ಳಿಯ ಪ್ರಮಾಣದ ಆಧಾರದಲ್ಲಿ ಬೆಲೆ ಇನ್ನೂ ಕಮ್ಮಿಯಾಗ ಬೇಕಾಗಿದ್ದರೂ, ಗ್ರಾಹಕರಿಗೆ ಇದರ ಲಾಭ ಸಿಗುತ್ತಿಲ್ಲ, ಜೊತೆಗೆ, ರೈತರಿಗೆ ಕೂಡಾ..

ಈರುಳ್ಳಿ ಬೆಲೆಯಲ್ಲಿ ಮತ್ತಷ್ಟು ಇಳಿಕೆ ನಿರೀಕ್ಷೆ, ಹೆಚ್ಚಾಗಲಿದೆ ಉತ್ಪಾದನೆ!ಈರುಳ್ಳಿ ಬೆಲೆಯಲ್ಲಿ ಮತ್ತಷ್ಟು ಇಳಿಕೆ ನಿರೀಕ್ಷೆ, ಹೆಚ್ಚಾಗಲಿದೆ ಉತ್ಪಾದನೆ!

ಎಲ್ಲೋ ಕೆಲವೊಂದು ಅಪವಾದಗಳನ್ನು ಬಿಟ್ಟರೆ, ರೈತರಿಗೆ ಬೆಲೆ ಏರಿಕೆಯ ಲಾಭ ಸಿಕ್ಕ ಉದಾಹರಣೆಗಳು ಕಮ್ಮಿ. ಮಧ್ಯವರ್ತಿಗಳೇ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೇ ಬಳಸಿಕೊಳ್ಳುವುದು ಜಾಸ್ತಿ.

ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್: ನಿತಿನ್ ಗಡ್ಕರಿಯಿಂದ 3ವರ್ಷಕ್ಕೆ ನಿಷೇಧಗೊಂಡ 8 ಸಂಸ್ಥೆಗಳ ಪಟ್ಟಿರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್: ನಿತಿನ್ ಗಡ್ಕರಿಯಿಂದ 3ವರ್ಷಕ್ಕೆ ನಿಷೇಧಗೊಂಡ 8 ಸಂಸ್ಥೆಗಳ ಪಟ್ಟಿ

ಕೆಲವು ತಿಂಗಳಿನಿಂದ ಕ್ವಿಂಟಾಲ್ ಒಂದಕ್ಕೆ ಇಪ್ಪತ್ತು ಸಾವಿರಕ್ಕೂ ಅಧಿಕ ಇದ್ದ ಈರುಳ್ಳಿ ಬೆಲೆ, ಎಪಿಎಂಸಿ ಮಾರುಕಟ್ಟೆಯಲ್ಲಿ 2-3ಸಾವಿರ ರೂಪಾಯಿವರೆಗೆ ಇಳಿದು ಹೋಗಿದೆ. ಇದಕ್ಕೆ ಕಾರಣ?

ಟರ್ಕಿಯಿಂದ 11,000 ಟನ್‌ ಈರುಳ್ಳಿ

ಟರ್ಕಿಯಿಂದ 11,000 ಟನ್‌ ಈರುಳ್ಳಿ

ದಿನೇ ದಿನೇ ಗಗನಕ್ಕೇರುತ್ತಿದ್ದ ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ, ಟರ್ಕಿಯಿಂದ 11,000 ಟನ್‌ ಈರುಳ್ಳಿಯನ್ನು ಆಮದು ಮಾಡಿಕೊಂಡಿತ್ತು. ಈರುಳ್ಳಿ ಆಮದು ಮಾಡಿಕೊಳ್ಳಲು ಸರ್ಕಾರಿ ಸ್ವಾಮ್ಯದ ಎಂಎಂಟಿಸಿಗೆ ಆದೇಶ ನೀಡಿತ್ತು. ಆದರೂ, ಬೆಲೆಯಲ್ಲಿ ಹೆಚ್ಚಿನ ಸುಧಾರಣೆ ಕಂಡು ಬಂದಿರಲಿಲ್ಲ. ಈಗ, ಏಕಾಏಕಿ ಬೆಲೆಯಲ್ಲಿ ಕುಸಿತ ಕಾಣಬಹುದಾಗಿದೆ.

ಅತಿದೊಡ್ಡ ಈರುಳ್ಳಿ ಎಪಿಎಂಸಿ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ನಾಸಿಕ್

ಅತಿದೊಡ್ಡ ಈರುಳ್ಳಿ ಎಪಿಎಂಸಿ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ನಾಸಿಕ್

ದೇಶದ ಅತಿದೊಡ್ಡ ಈರುಳ್ಳಿ ಎಪಿಎಂಸಿ ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ನಾಸಿಕ್ ನಲ್ಲಿ ಒಂದೇ ಸಮನೆ ಈರುಳ್ಳಿ ಬಂದು ಬೀಳುತ್ತಿದೆ. ಇಲ್ಲಿನ ಲಾಸಲ್ಗಾಂವ್ ಮಂಡಿಗೆ ಹಲವು ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಫಸಲು ನೀಡಿದ್ದರಿಂದ, ಹೇರಳ ಪ್ರಮಾಣದ ಈರುಳ್ಳಿಗಳು ನಾಸಿಕ್ ಮಂಡಿಯಲ್ಲಿ ಶೇಖರಣೆಗೊಂಡಿದೆ.

ಈರುಳ್ಳಿ ಬೆಲೆ ಒಂದೇ ಸಮನೆ 2,300 ರೂಪಾಯಿಗೆ ಕುಸಿದಿದೆ

ಈರುಳ್ಳಿ ಬೆಲೆ ಒಂದೇ ಸಮನೆ 2,300 ರೂಪಾಯಿಗೆ ಕುಸಿದಿದೆ

ಎಪಿಎಂಸಿ ಅಧಿಕಾರಿಗಳ ಪ್ರಕಾರ "ಈರುಳ್ಳಿ ಬೆಲೆಯಲ್ಲಿ ಪ್ರತೀ ವಾರದಲ್ಲಿ ಏರಿಳಿತ ಕಾಣುತ್ತಿದೆ. 950 ರೂಪಾಯಿಯಿಂದ 4,300ವರೆಗಿದ್ದ ಈರುಳ್ಳಿ ಬೆಲೆ ಒಂದೇ ಸಮನೆ 2,300 ರೂಪಾಯಿಗೆ ಕುಸಿದಿದೆ. ನಾಸಿಕ್ ಮಾರುಕಟ್ಟೆಯಲ್ಲಿ ಇದುವರೆಗಿನ ಇತಿಹಾಸದಲ್ಲಿ ಕಾಣದಷ್ಟು ಮಟ್ಟಿಗೆ ಈರುಳ್ಳಿ ಬೆಲೆ ಏರಿಕೆ ಮತ್ತು ಇಳಿಕೆಯನ್ನು ಕಂಡಿದೆ" ಎಂದು ಹೇಳುತ್ತಾರೆ.

ಈರುಳ್ಳಿ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗುವ (20-35ರೂಪಾಯಿವರೆಗೆ) ಸಾಧ್ಯತೆ

ಈರುಳ್ಳಿ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗುವ (20-35ರೂಪಾಯಿವರೆಗೆ) ಸಾಧ್ಯತೆ

ಹಿಂಗಾರು ಕಟಾವು ಆರಂಭಗೊಂಡಿದ್ದರಿಂದ ನಾಸಿಕ್, ಪೂನಾ, ಸತಾರ, ಸಾಂಗ್ಲಿ ಮುಂತಾದ ಕಡೆಯಿಂದ ಈರುಳ್ಳಿಗಳು, ಕರ್ನಾಟಕದ ಮಾರುಕಟ್ಟೆಗೆ ಬರಲಾರಂಭಿಸಿದೆ. ಈರುಳ್ಳಿ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದರೂ, ಅದರ ಲಾಭ,ಇನ್ನೂ ಗ್ರಾಹಕರಿಗಾಗಲಿ ಅಥವಾ ಚಿಲ್ಲರೆ ವ್ಯಾಪಾರಿಗಳಿಗಾಗಲಿ ಸಿಗುತ್ತಿಲ್ಲ. ಉತ್ತರ ಕರ್ನಾಟಕದ ಭಾಗದ ಈರುಳ್ಳಿಗಳೂ ಖಟಾವ್ ಗೆ ಬರುವುದರಿಂದ, ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಇನ್ನಷ್ಟು ಇಳಿಕೆಯಾಗುವ (20-35ರೂಪಾಯಿವರೆಗೆ) ಸಾಧ್ಯತೆಯಿದೆ.

English summary

Average Wholesale Price Of Onion Dropped Heavily In Most Of The APMC Markets

Average Wholesale Price Of Onion Dropped Heavily In Most Of The APMC Markets From Rs. 22 Thousand to Rs. 2 Thousand.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X