For Quick Alerts
ALLOW NOTIFICATIONS  
For Daily Alerts

ಮಾರುಕಟ್ಟೆ ಮೌಲ್ಯ 1 ಲಕ್ಷ ಕೋಟಿ ರು. ತಲುಪಿದ ವಿಶ್ವದ ಮೊದಲ ದ್ವಿಚಕ್ರ ವಾಹನ ಕಂಪೆನಿ ಬಜಾಜ್ ಆಟೋ

By ಅನಿಲ್ ಆಚಾರ್
|

ಜನವರಿ 1, 2021ರ ಶುಕ್ರವಾರದಂದು ಬಜಾಜ್ ಆಟೋ ಲಿಮಿಟೆಡ್ ಷೇರು ಹೊಸ ದಾಖಲೆ ಬರೆಯಿತು. ಪ್ರತಿ ಷೇರು ರು. 3,494 ರುಪಾಯಿ ತಲುಪುವ ಮೂಲಕ, ಈ ಕಂಪೆನಿಯ ಮಾರುಕಟ್ಟೆ ಮೌಲ್ಯ ರು. 1,00,700 ಕೋಟಿ ರುಪಾಯಿಯನ್ನು ದಾಟಿತು.

 

ಈ ಬಗ್ಗೆ ಹೇಳಿಕೆ ನೀಡಿರುವ ಪುಣೆ ಮೂಲದ ಕಂಪೆನಿ, ಈ ಮೈಲುಗಲ್ಲನ್ನು ಮುಟ್ಟಿದ ಮೊದಲ ದ್ವಿಚಕ್ರ ವಾಹನ ಕಂಪೆನಿ ಎಂದು ಹೇಳಿಕೊಂಡಿದ್ದು, ಇದರ ಜತೆಗೆ ವಿಶ್ವದ ಅತ್ಯಂತ ಮೌಲ್ಯಯುತ ದ್ವಿಚಕ್ರ ವಾಹನ ತಯಾರಕ ಆಗಿ ಈ ಸಾಧನೆ ಮಾಡಿರುವುದಾಗಿ ಕಂಪೆನಿಯು ತಿಳಿಸಿದೆ.

 

ಏಳು ಕಂಪೆನಿಗಳ ಮಾರುಕಟ್ಟೆ ಮೌಲ್ಯ 75,845 ಕೋಟಿ ರುಪಾಯಿ ಏರಿಕೆಏಳು ಕಂಪೆನಿಗಳ ಮಾರುಕಟ್ಟೆ ಮೌಲ್ಯ 75,845 ಕೋಟಿ ರುಪಾಯಿ ಏರಿಕೆ

"ಈ ಮಾರುಕಟ್ಟೆ ಬಂಡವಾಳ ಮೌಲ್ಯವು ಬೇರೆಲ್ಲ ದೇಶೀ ದ್ವಿಚಕ್ರ ವಾಹನಗಳ ಕಂಪೆನಿಗಳಿಗಿಂತ ಹೆಚ್ಚು. ವಿಶ್ಲೇಷಕರ ಪ್ರಕಾರ, ವಿಶ್ವದ ಬೇರೆ ಯಾವ ದ್ವಿಚಕ್ರ ವಾಹನ ತಯಾರಕರ ಮಾರುಕಟ್ಟೆ ಬಂಡವಾಳ ಮೌಲ್ಯವು 1 ಲಕ್ಷ ಕೋಟಿ ರುಪಾಯಿ ದಾಟಿಲ್ಲ," ಎಂದು ಪತ್ರಿಕಾ ಹೇಳಿಕೆಯಲ್ಲಿ ಕಂಪೆನಿ ತಿಳಿಸಿದೆ.

ಮಾರುಕಟ್ಟೆ ಮೌಲ್ಯ 1 ಲಕ್ಷ ಕೋಟಿ ತಲುಪಿ ಬಜಾಜ್ ಆಟೋ ವಿಶಿಷ್ಟ ಸಾಧನೆ

ಕಾರ್ಯ ನಿರ್ವಹಣೆ ಆರಂಭಿಸಿದ 75ನೇ ವರ್ಷಾಚರಣೆ ಸಂಭ್ರಮದಲ್ಲೇ ಈ ಮೈಲುಗಲ್ಲು ಸಾಧಿಸಿರುವುದಾಗಿ ಕಂಪೆನಿಯಿಂದ ತಿಳಿಸಲಾಗಿದೆ. "ವಿಶ್ವದಾದ್ಯಂತ ಇರುವ ನಮ್ಮ ಗ್ರಾಹಕರಿಗೆ ಇನ್ನಷ್ಟು ಉತ್ತಮವಾಗಿ ಸೇವೆ ಸಲ್ಲಿಸಲು ಇದರಿಂದ ನಮಗೆ ಸ್ಫೂರ್ತಿ ದೊರೆಯುತ್ತದೆ," ಎಂದು ಬಜಾಜ್ ಆಟೋ ಮ್ಯಾನೇಜಿಂಗ್ ಡೈರೆಕ್ಟರ್ ರಾಜೀವ್ ಬಜಾಜ್ ಹೇಳಿದ್ದಾರೆ.

ವಿಶ್ವದಲ್ಲಿ ಮೂರನೇ ಅತ್ಯಂತ ದೊಡ್ಡ ಮೋಟಾರ್ ಸೈಕಲ್ ಮತ್ತು ಅತಿ ದೊಡ್ಡ ತ್ರಿಚಕ್ರ ವಾಹನಗಳ ಉತ್ಪಾದಕ ಕಂಪೆನಿ ಬಜಾಜ್ ಆಟೋ. ಪುಣೆ ಸಮೀಪದ ಚಕನ್, ಔರಂಗಾಬಾದ್ ನ ವಲುಜ್ ಮತ್ತು ಉತ್ತರಾಖಂಡ್ ನ ಪಂಥ್ ನಗರ್ ನಲ್ಲಿ ಬಜಾಜ್ ಆಟೋ ಉತ್ಪಾದನಾ ಕೇಂದ್ರಗಳಿವೆ.

English summary

Bajaj Auto World's First Two Wheeler Company Reached Market Capitalisation Rs 1 Lakh Crore

On Friday (January 1, 2021) Bajaj Auto world's first two wheeler company reached market capitalisation Rs 1 lakh crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X