For Quick Alerts
ALLOW NOTIFICATIONS  
For Daily Alerts

'ವಿಮೆ ಖರೀದಿ ಮಾಡಿದರೆ ಮಾತ್ರ ಸಾಲ': ವಂಚನೆ ನಡೆಯುತ್ತಿದೆ ಎಚ್ಚರ

|

ನೀವು ವಿಮಾ ಪಾಲಿಸಿ ಖರೀದಿಯನ್ನು ಮಾಡಿದರೆ ಮಾತ್ರ ನಿಮಗೆ ಸಾಲವನ್ನು ನೀಡಲಾಗುತ್ತದೆ ಎಂಬ ಕೆಲವು ಸುದ್ದಿಗಳನ್ನು ನೀವು ಕೇಳಿರಬಹುದು. ಆದರೆ ಈ ಸುದ್ದಿಗಳ ಬಗ್ಗೆ ಬಜಾಜ್‌ ಹೋಲ್ಡಿಂಗ್ಸ್‌ನ ಬಜಾಜ್‌ ಫಿನಾನ್ಸ್ ಲಿಮಿಟೆಡ್‌ ಎಚ್ಚರಿಕೆ ನೀಡಿದೆ. ವಿಮಾ ಪಾಲಿಸಿ ಖರೀದಿಯನ್ನು ಮಾಡಿದರೆ ಮಾತ್ರ ನಿಮಗೆ ಸಾಲವನ್ನು ನೀಡಲಾಗುತ್ತದೆ ಎಂಬುವುದು ವಂಚನೆಯಾಗಿದೆ. ಇದು ನಕಲಿ ಸಾಲ ಎಂದು ಹೇಳಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಜಾಜ್‌ ಫಿನಾನ್ಸ್, "ಬಜಾಜ್‌ ಫಿನಾನ್ಸ್‌ ಲಿಮಿಟೆಡ್‌ ಎಂದಿಗೂ ತನ್ನ ಗ್ರಾಹಕರಿಗೆ ಸಾಲ ನೀಡುವಾಗ ಸಾಲ ಬೇಕಾದರೆ ಸಂಸ್ಥೆಯಲ್ಲಿ ಲಭ್ಯವಿರುವ ಬೇರೆ ಯಾವುದಾದರೂ ವಸ್ತುವನ್ನು ಖರೀದಿ ಮಾಡಬೇಕು ಎಂದು ಕಡ್ಡಾಯಗೊಳಿಸಿಲ್ಲ. ಈ ರೀತಿಯ ವಂಚನೆ ಜಾಲಕ್ಕೆ ಬೀಳದಿರಿ," ಎಂದು ಎಚ್ಚರಿಕೆ ನೀಡಿದೆ.

ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಬಜಾಜ್‌ ಫಿನಾನ್ಸ್‌ ಲಿಮಿಟೆಡ್‌, "ಬಜಾಜ್‌ ಫಿನಾನ್ಸ್‌ ಲಿಮಿಟೆಡ್‌ನ ಸಿಬ್ಬಂದಿಗಳು ಎಂದು ಹೇಳಿಕೊಂಡು ನಿಮ್ಮನ್ನು ವಂಚನೆ ಮಾಡುವ ಕಾರ್ಯವನ್ನು ಕೆಲವರು ಮಾಡುತ್ತಿದ್ದಾರೆ ಎಂಬುವುದು ನಮ್ಮ ಗಮನಕ್ಕೆ ಬಂದಿದೆ. ವಂಚಕರು ಬಜಾಜ್‌ ಫಿನಾನ್ಸ್‌ ಲಿಮಿಟೆಡ್‌ನ ಸಿಬ್ಬಂದಿಗಳು ಎಂದು ಹೇಳಿಕೊಳ್ಳುವವರು, ನಿಮಗೆ ಬಜಾಜ್‌ ಫಿನಾನ್ಸ್‌ ಲಿಮಿಟೆಡ್‌ನಿಂದ ಸಾಲ ಬೇಕಾದರೆ ನೀವು ಕಡ್ಡಾಯವಾಗಿ ಜೀವನ ವಿಮೆ ಪಾಲಸಿಯನ್ನು ಖರೀದಿ ಮಾಡಬೇಕು ಎಂದು ಹೇಳುತ್ತಿದ್ದಾರೆ ಎಂಬುವುದು ತಿಳಿದು ಬಂದಿದೆ. ಈ ಬಗ್ಗೆ ನೀವು ಎಚ್ಚರವಾಗಿರಿ," ಎಂದು ತಿಳಿಸಿದೆ.

'ವಿಮೆ ಖರೀದಿ ಮಾಡಿದರೆ ಮಾತ್ರ ಸಾಲ': ವಂಚನೆ ನಡೆಯುತ್ತಿದೆ ಎಚ್ಚರ

ಹಾಗೆಯೇ, "ಯಾವುದೇ ಅನಧಿಕೃತ ಅಥವಾ ನಿಮಗೆ ತಿಳಿಯದ ವ್ಯಕ್ತಿಯಿಂದ ಅಥವಾ ಯಾರೆಂದು ತಿಳಿಯದ ವಂಚಕರ ಜೊತೆ ಯಾವುದೇ ವ್ಯವಹಾರ ನಡೆಸದಿರಿ ಎಂದು ನಾವು ಈ ಮೂಲಕ ನಿಮ್ಮಲ್ಲಿ ವಿನಂತಿ ಮಾಡುತ್ತೇವೆ. ಬಜಾಜ್‌ ಫಿನಾನ್ಸ್‌ ಲಿಮಿಟೆಡ್‌ನ ಸಾಲದ ಬಗ್ಗೆಗಿನ ಯಾವುದೇ ಮಾಹಿತಿ ತಿಳಿಯಬೇಕಾದರೆ www.bajajfinserv.in ಗೆ ಭೇಟಿ ನೀಡಿ ಅಥವಾ ನಿಮ್ಮ ಸಮೀಪದ ಬಜಾಜ್‌ ಫಿನಾನ್ಸ್‌ ಲಿಮಿಟೆಡ್‌ನ ಕಚೇರಿಗೆ ಭೇಟಿ ನೀಡಿ," ಎಂದು ಸಂಸ್ಥೆಯು ಹೇಳಿದೆ.

 ಸೆಪ್ಟೆಂಬರ್‌ 30 ಡೆಡ್‌ಲೈನ್‌: ಈ ಕೆಲಸಗಳನ್ನು ಮಾಡಿ ಬಿಡಿ ಸೆಪ್ಟೆಂಬರ್‌ 30 ಡೆಡ್‌ಲೈನ್‌: ಈ ಕೆಲಸಗಳನ್ನು ಮಾಡಿ ಬಿಡಿ

ಇನ್ನು ಈ ವಂಚಕರು ಜನರನ್ನು ಹೇಗೆ ವಂಚಿಸುತ್ತಾರೆ ಎಂಬುವುದನ್ನು ಕೂಡಾ ಬಜಾಜ್‌ ಫಿನಾನ್ಸ್‌ ಲಿಮಿಟೆಡ್‌ನ ಹಂತ ಹಂತವಾಗಿ ವಿವರಣೆ ಮಾಡಿದೆ. ಈ ಹಂತಗಳು ಈ ಕೆಳಗಿನಂತಿವೆ

ಹಂತ ಒಂದು: ನೀವು ವಿಮಾ ಕಂಪನಿಯಿಂದ ಎಲ್ಲಾ ವಿಮಾ ದಾಖಲೆಗಳನ್ನು ಪಡೆಯುತ್ತೀರಿ ಎಂದು ಹೇಳಿಕೊಂಡು ಜನರನ್ನು ವಂಚನೆಗೆ ಒಳಪಡಿಸಲು ಮೊದಲು ಈ ವಂಚಕರು ವಿಮಾ ಪಾಲಿಸಿಯನ್ನು ಗಾಳವಾಗಿ ಬಳಸುತ್ತಾರೆ.

'ವಿಮೆ ಖರೀದಿ ಮಾಡಿದರೆ ಮಾತ್ರ ಸಾಲ': ವಂಚನೆ ನಡೆಯುತ್ತಿದೆ ಎಚ್ಚರ

ಹಂತ ಎರಡು: ಇನ್ನು ಈ ವಂಚಕರು ನಿಮ್ಮೊಂದಿಗೆ ದೀರ್ಘಕಾಲ ಸಂಪರ್ಕದಲ್ಲಿರುತ್ತಾರೆ, ಹಾಗೆಯೇ ಸಾಲ ವಿತರಣಾ ಪ್ರಕ್ರಿಯೆಯಲ್ಲಿನ ವಿಳಂಬಕ್ಕೆ ಕೆಲವು ಕಾರಣಗಳನ್ನು ಸಾಲ ನೀಡುವುದನ್ನು ತಡ ಮಾಡುತ್ತಾರೆ.

ಹಂತ ಮೂರು: ಹಲವು ವಿಮೆ ಪಾಲಿಸಿಗಳನ್ನು 90 ದಿನಗಳ ಕಾಲ ಹಾಗೆಯೆ ಇರಿಸಲಾಗಿರುತ್ತದೆ. ಈ 90 ದಿನಗಳ ಒಳಗೆ ಗ್ರಾಹಕರು ತಮಗೆ ಆ ವಿಮೆ ಬೇಡ ಎಂದಾದರೆ ಈ ವಿಮೆಯನ್ನು ರದ್ದು ಮಾಡಬಹುದು ಹಾಗೂ ವಿಮೆಗಾಗಿ ಪಾವತಿ ಮಾಡಿದ ಹಣವನ್ನು ಗ್ರಾಹಕರು ಹಿಂದಕ್ಕೆ ಪಡೆಯಬಹುದು. ಇನ್ನು ಈ 90 ದಿನಗಳ ಕಾಲ ಮುಗಿದ ನಂತರ ಈ ವಂಚಕರು ನಿಮ್ಮ ಕರೆಯನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತಾರೆ.

 ವೈಯಕ್ತಿಕ ಸಾಲ ಪಡೆಯುವ ಮುನ್ನ ಇದನ್ನು ಗಮನಿಸಿ.. ವೈಯಕ್ತಿಕ ಸಾಲ ಪಡೆಯುವ ಮುನ್ನ ಇದನ್ನು ಗಮನಿಸಿ..

ಈ ವಂಚಕರನ್ನು ಎದುರಿಸಲು ಬಜಾಜ್‌ ಫಿನಾನ್ಸ್‌ ಲಿಮಿಟೆಡ್‌ ಕೆಲವೊಂದು ಸಲಹೆಗಳನ್ನು ನೀಡಿದೆ. ಅವು ಈ ಕೆಳಗಿನಂತಿವೆ

* ಗ್ರಾಹಕರು ಸಾಲ ಪಡೆಯಬೇಕಾದರೆ ನೀವು ಮೊದಲು ವಿಮೆ ಅಥವಾ ಯಾವುದಾದರೂ ವಸ್ತುವನ್ನು ಖರೀದಿ ಮಾಡಬೇಕು ಎಂದು ಬಜಾಜ್‌ ಫಿನಾನ್ಸ್‌ ಲಿಮಿಟೆಡ್‌ ಎಂದು ಹೇಳುವುದಿಲ್ಲ. ಆದ್ದರಿಂದ ಈ ರೀತಿಯ ಕರೆ ಬಂದರೆ ನೀವು ಅದನ್ನು ನಂಬ ಬೇಡಿ.

* ಈ ರೀತಿಯಾಗಿ ಹೇಳಿಕೊಳ್ಳುವ ಹಾಗೂ ಹಣ ಹಿಂದಕ್ಕೆ ಲಭಿಸುತ್ತದೆ ಎಂದು ನಂಬಿಸುವ ಯಾರಿಗೂ ಕೂಡಾ ಹಣವನ್ನು ನೀವು ನೀಡಬೇಡಿ.

* ನಿಮ್ಮ ಮೊಬೈಲ್‌ ಸಂಖ್ಯೆಯನ್ನು, ಇಎಂಐ ಕಾರ್ಡ್ ಸಂಖ್ಯೆಯನ್ನು, ಒಟಿಪಿಯನ್ನು, ಪ್ಯಾನ್‌ ಅಥವಾ ಆಧಾರ್‌ ಕಾರ್ಡ್ ವಿವರವನ್ನು, ನಿಮ್ಮ ವಿಳಾಸವನ್ನು, ಸಾಮಾಜಿಕ ಜಾಲತಾಣದ ವಿವರವನ್ನು, ಇಮೇಲ್‌ ಐಡಿಯನ್ನು ಈ ರೀತಿ ಹೇಳಿಕೊಳ್ಳುವ ಯಾರಿಗೂ ನೀಡದಿರಿ.

* ಬಜಾಜ್‌ ಫಿನಾನ್ಸ್‌ ಲಿಮಿಟೆಡ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿ ಬೇಕಿದ್ದರೂ www.bajajfinserv.in ಗೆ ಅಥವಾ ನಿಮ್ಮ ಸ್ಥಳೀಯ ಬಜಾಜ್‌ ಫಿನಾನ್ಸ್‌ ಕಚೇರಿಗೆ ಭೇಟಿ ನೀಡಿ

* ನಕಲಿ ಹಾಗೂ ವಂಚನೆ ಮಾಡುವಂತಹ ಆಫರ್‌ ನೀಡುವ ಸುದ್ದಿಗಳನ್ನು ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್‌ ಮಾಡದಿರಿ. ಕೇವಲ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಗಳನ್ನು ಮಾತ್ರ ಫಾಲೋ ಮಾಡಿ

* ಸಾಮಾಜಿಕ ಮಾಧ್ಯಮ ಪುಟಗಳು, ಇ-ಮೇಲ್‌ಗಳು ಅಥವಾ ಎಸ್‌ಎಂಎಸ್‌ಗಳಲ್ಲಿ ಯಾವುದೆಂದು ತಿಳಿಯದ ಯಾವುದೇ ಕ್ಲಿಕ್‌ಬೈಟ್ ಲಿಂಕ್‌ಗಳಿಂದ ಯಾವುದೇ ಮೂರನೇ ವ್ಯಕ್ತಿಯ ಮೊಬೈಲ್ ಅಪ್ಲಿಕೇಶನ್‌ಗಳು ಅಥವಾ ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡಬೇಡಿ

English summary

Bajaj Finance Warns Against Fake Loans In Exchange of An Insurance Policy Purchase

Bajaj Finance Warns Against Fake Loans In Exchange of An Insurance Policy Purchase. Read more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X