For Quick Alerts
ALLOW NOTIFICATIONS  
For Daily Alerts

ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ

|

ನವದೆಹಲಿ, ಆಗಸ್ಟ್‌ 31: ದೇಶದಲ್ಲಿ ಕೊರೊನಾ ಲಾಕ್‌ಡೌನ್ ಅನ್‌ಲಾಕ್ ನಾಲ್ಕನೇ ಹಂತದಲ್ಲಿ ಸರ್ಕಾರವು ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸುತ್ತದೆ ಎಂದು ಆಶಿಸುತ್ತಿದ್ದವರಿಗೆ ಮತ್ತೆ ನಿರಾಸೆಯಾಗಿದೆ.

ವಿದೇಶದಲ್ಲಿ ಸಿಕ್ಕಿಬಿದ್ದವರು ತಾವೇ ವಾಪಸ್‌ ಬರಬಹುದು ಎಂದು ಆಶಿಸಿದ್ದರು. ಆದರೆ ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಿದೆ. ವಂದೇ ಇಂಡಿಯಾ ಮಿಷನ್ ಮುಂದುವರಿಯುತ್ತಿದ್ದರೂ, ವಿಮಾನಯಾನ ನಿಷೇಧ ಮುಂದುವರಿದಿದೆ. ಇದರಿಂದಾಗಿ ವಾಣಿಜ್ಯ ವಿಮಾನಯಾನ ಸಂಸ್ಥೆಗಳಿಗೆ ಮತ್ತಷ್ಟು ನಷ್ಟ ಸಂಭವಿಸಲಿದೆ.

ಡಿಜಿಸಿಎ ಹೊರಡಿಸಿದ ಆದೇಶದ ಪ್ರಕಾರ, ಅಂತರರಾಷ್ಟ್ರೀಯ ವಾಣಿಜ್ಯ ವಿಮಾನಗಳ ನಿಷೇಧವು ಹಾಗೇ ಇರುತ್ತದೆ. ಆ ಮಾರ್ಗಗಳನ್ನು ಮಾತ್ರ ಭಾರತ ಸರ್ಕಾರ ಒಪ್ಪಿಕೊಂಡಿದೆ. ಅಲ್ಲದೆ, ಈ ನಿರ್ಬಂಧವು ಸರಕು ವಿಮಾನಗಳಿಗೆ ಅನ್ವಯಿಸುವುದಿಲ್ಲ, ಇದರಿಂದಾಗಿ ಸರಕುಗಳ ಸರಬರಾಜಿನಲ್ಲಿ ಅಡಚಣೆಯಾಗುವುದಿಲ್ಲ. ದೇಶಕ್ಕೆ ಮರಳಲು ಬಯಸುವ ವಿದೇಶದಲ್ಲಿ ಸಿಲುಕಿರುವವರು ವಂದೇ ಭಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾ ವಿಮಾನಗಳ ಮೂಲಕ ಮರಳಬಹುದು. ಇದಕ್ಕಾಗಿ, ಮೊದಲೇ ನಿರ್ಧರಿಸಿದ ಷರತ್ತುಗಳನ್ನು ಅನುಸರಿಸಬೇಕಾಗುತ್ತದೆ.

ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಸೆ. 30ರವರೆಗೆ ವಿಸ್ತರಣೆ

ಇದೀಗ ವಂದೇ ಭಾರತ್ ಮಿಷನ್‌ನ ಐದನೇ ಹಂತ ನಡೆಯುತ್ತಿದೆ. ಆರನೇ ಹಂತವು ಸೆಪ್ಟೆಂಬರ್ 1, 2020 ರಿಂದ ಪ್ರಾರಂಭವಾಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಕಾರ, ಏರ್ ಇಂಡಿಯಾದ 31 ವಿಮಾನಗಳನ್ನು ಆರನೇ ಹಂತದ ಅಡಿಯಲ್ಲಿ ಖಚಿತಪಡಿಸಲಾಗಿದೆ. ಇವುಗಳಲ್ಲಿ ಕೆನಡಾದ ಟೊರೊಂಟೊ ನಗರದಿಂದ 17 ಮತ್ತು ವ್ಯಾಂಕೋವರ್‌ನಿಂದ 13 ವಿಮಾನಗಳು ಸೇರಿವೆ. ಚೀನಾದ ಶಾಂಘೈ ನಗರದಿಂದ ವಿಮಾನ ಹಾರಾಟ ನಡೆಯಲಿದೆ. ಈ ಎಲ್ಲಾ ವಿಮಾನಗಳು ರಾಷ್ಟ್ರ ರಾಜಧಾನಿ ದೆಹಲಿಗೆ ಬರಲಿವೆ.

English summary

Ban on International Flights Into India extended till September 30

The suspension of scheduled international passenger flights has been extended till September 30, said Indian aviation regulator DGCA on Monday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X