For Quick Alerts
ALLOW NOTIFICATIONS  
For Daily Alerts

ಗ್ರಾಹಕರೇ ಗಮನಿಸಿ! ಏಪ್ರಿಲ್ ತಿಂಗಳಲ್ಲಿ 11 ದಿನ ಬ್ಯಾಂಕ್ ಬಂದ್!

|

ನವದೆಹಲಿ, ಮಾರ್ಚ್ 28: ಮಾರ್ಚ್ ತಿಂಗಳಲ್ಲಿ ಕಾರ್ಮಿಕರ ಮುಷ್ಕರದಿಂದಾಗಿ ನಾಲ್ಕೈದು ದಿನ ಬ್ಯಾಂಕ್ ಸೇವೆಯಲ್ಲಿ ಸ್ಥಗಿತವಾಗಿತು. ಇದಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ನೀಡಿರುವ ತಿಂಗಳ ರಜೆ ದಿನಗಳ ಪಟ್ಟಿ ಸೇರಿಸಿ ಮಾರ್ಚ್ ತಿಂಗಳಲ್ಲಿ ಬಹುತೇಕ ಎರಡು ವಾರದ ರಜೆ ಇತ್ತು.

ಇದೀಗ, ಏಪ್ರಿಲ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಏಪ್ರಿಲ್ ತಿಂಗಳಲ್ಲಿ ರಾಮನವಮಿ, ಗುಡ್ ಫ್ರೈಡೇ, ಬಿಹು, ತಮಿಳು ಹೊಸ ವರ್ಷಾಚರಣೆ ಮುಂತಾದ ಹಬ್ಬಗಳು ಸಾಲು ಸಾಲು ರಜೆಗಳನ್ನು ತಂದಿವೆ. ಒಟ್ಟಾರೆ, ಈ ತಿಂಗಳಲ್ಲಿ 9 ದಿನಗಳ ಕಾಲ ರಜೆ ಇರಲಿದೆ. ಜೊತೆಗೆ ಏಪ್ರಿಲ್ 4(ಭಾನುವಾರ), ಏಪ್ರಿಲ್ 10 (2ನೇ ಶನಿವಾರ), ಏಪ್ರಿಲ್ 11 (ಭಾನುವಾರ), ಏಪ್ರಿಲ್ 18 (ಭಾನುವಾರ), 24 (4ನೇ ಶನಿವಾರ) ಹಾಗೂ ಏಪ್ರಿಲ್ 25 (ಭಾನುವಾರ) ರಂದು ರಜೆ ಇರಲಿದೆ.

ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ.

ಗ್ರಾಹಕರೇ ಗಮನಿಸಿ! ಏಪ್ರಿಲ್ ತಿಂಗಳಲ್ಲಿ 11 ದಿನ ಬ್ಯಾಂಕ್ ಬಂದ್!

ಏಪ್ರಿಲ್ 2021ರಲ್ಲಿ ಬ್ಯಾಂಕ್ ರಜಾ ದಿನಗಳು

* ಏಪ್ರಿಲ್ 01, 2021(ಗುರುವಾರ): ಹೊಸ ಆರ್ಥಿಕ ವರ್ಷಾರಂಭ
* ಏಪ್ರಿಲ್ 02 (ಶುಕ್ರವಾರ): ಗುಡ್ ಫ್ರೈಡೇ
* ಏಪ್ರಿಲ್ 05 (ಸೋಮವಾರ): ಬಾಬು ಜಗಜೀವನ್ ರಾಮ್ ಹುಟ್ಟುಹಬ್ಬ
* ಏಪ್ರಿಲ್ 06 (ಮಂಗಳವಾರ): ತಮಿಳುನಾಡು ವಿಧಾನಸಭೆ ಚುನಾವಣೆ.
* ಏಪ್ರಿಲ್ 13 (ಮಂಗಳವಾರ): ಗುಡಿ ಪಡ್ವಾ, ತೆಲುಗು ಹೊಸ ವರ್ಷಾಚರಣೆ,ಉಗಾದಿ, ಬೈಸಾಕಿ
* ಏಪ್ರಿಲ್ 14(ಬುಧವಾರ): ಡಾ. ಅಂಬೇಡ್ಕರ್ ಜಯಂತಿ, ತಮಿಳು ಹೊಸ ವರ್ಷಾಚರಣೆ, ವಿಶು, ಬಿಜು
* ಏಪ್ರಿಲ್ 15 (ಗುರುವಾರ): ಹಿಮಾಚಲ ದಿನ, ಬೆಂಗಾಳಿ ದಿನಾಚರಣೆ, ಬಿಹು, ಸರ್ಹುಲ್
* ಏಪ್ರಿಲ್ 16 (ಶುಕ್ರವಾರ) : ಬೊಹಾಂಗ್ ಬಿಹು
* ಏಪ್ರಿಲ್ 21(ಬುಧವಾರ: ಶ್ರೀರಾಮನವಮಿ, ಗರಿಯಾ ಪೂಜಾ.

ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ. ಬ್ಯಾಂಕ್ ಕಚೇರಿಗಳು ಬಂದ್ ಆಗಿದ್ದರೂ, ಮೊಬೈಲ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಎಂದಿನಂತೆ ಕಾರ್ಯ ನಿರ್ವಹಿಸಲಿದೆ.

English summary

Bank Holidays in April 2021: Bank will remain closed for 11 days

Bank holidays in April 2021: Banks including Private sector will remain closed for 11 days, Know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X