Bank Holidays in December 2022: ಡಿಸೆಂಬರ್ ತಿಂಗಳಲ್ಲಿ ಬ್ಯಾಂಕುಗಳಿಗೆ 14 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವಾಗ?

ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ ಭಾರತೀಯ ಬ್ಯಾಂಕುಗಳಿಗೆ ಒಟ್ಟು 14 ದಿನ ರಜೆ ಇದೆ. ಇದರಲ್ಲಿ ಭಾನುವಾರದ ರಜಾ ದಿನಗಳು, 2 ಮತ್ತು 4ನ ಶನಿವಾರದ ದಿನಗಳೂ ಒಳಗೊಂಡಿವೆ. ಈಶಾನ್ಯ ರಾಜ್ಯಗಳಲ್ಲಿನ ಬ್ಯಾಂಕುಗಳಿಗೆ ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ರಜೆ ಇದೆ. ಗೋವಾ ಲಿಬರೇಶನ್ ಡೇ, ಗುರು ಗೋಬಿಂದ್ ಸಿಂಗ್ ಜಯಂತಿ, ಕ್ರಿಸ್ಮಸ್, ಹೊಸ ವರ್ಷಾಚರಣೆಯು ಈ ತಿಂಗಳ ವಿಶೇಷ ರಜಾದಿನಗಳಾಗಿವೆ.

ಬ್ಯಾಂಕುಗಳು ಯಾವತ್ತೇ ರಜೆ ಇದ್ದರೂ ಅವುಗಳ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಚಾಲ್ತಿಯಲ್ಲಿರುತ್ತವೆ. ಎಟಿಎಂ ಸೆಂಟರ್‌ಗಳೂ ಯಥಾ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತವೆ.

ಡಿಸೆಂಬರ್‌ನಲ್ಲಿ ಬ್ಯಾಂಕಿಗೆ 14 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವಾಗ?

2022 ಡಿಸೆಂಬರ್‌ನಲ್ಲಿ ಬ್ಯಾಂಕುಗಳಿಗೆ ರಜೆ ಇರುವ ದಿನಗಳು
ಡಿಸೆಂಬರ್ 3: ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಫೀಸ್ಟ್ (ಈ ಹಬ್ಬದ ಪ್ರಯುಕ್ತ ಗೋವಾದಲ್ಲಿ ರಜೆ)
ಡಿಸೆಂಬರ್ 4: ಭಾನುವಾರ
ಡಿಸೆಂಬರ್ 5: ಶೇಖ್ ಅಬ್ದುಲ್ಲಾ ಜಯಂತಿ (ಜಮ್ಮು ಮತ್ತು ಕಾಶ್ಮೀರದಲ್ಲಿ ರಜೆ)
ಡಿಸೆಂಬರ್ 10: ಎರಡನೇ ಶನಿವಾರ
ಡಿಸೆಂಬರ್ 11: ಭಾನುವಾರ
ಡಿಸೆಂಬರ್ 12: ಬುಡಕಟ್ಟು ಹೋರಾಟಗಾರ ಪಾ-ಟೋಗನ್ ನೆಂಗ್ಮಿಂಜ ಸಾಂಗ್ಮಾ ಪುಣ್ಯತಿಥಿ (ಮೇಘಾಲಯ ರಾಜ್ಯದಲ್ಲಿ ರಜೆ)
ಡಿಸೆಂಬರ್ 18: ಭಾನುವಾರ (ಜೊತೆಗೆ ಮೇಘಾಲಯದ ಯು ಸೋಸೋ ಥಾಮ್ ಪುಣ್ಯತಿಥಿ ಮತ್ತು ಛತ್ತೀಸ್‌ಗಡದಲ್ಲಿ ಗುರು ಘಾಸಿದಾಸ್ ಜಯಂತಿ)

ಡಿಸೆಂಬರ್ 19: ಗೋವಾ ಮುಕ್ತಿ ದಿನದ ಪ್ರಯುಕ್ತ ಆ ಪ್ರದೇಶದಲ್ಲಿ ರಜೆ
ಡಿಸೆಂಬರ್ 24: ಕ್ರಿಸ್ಮಸ್ ಹಬ್ಬ ಮತ್ತು ನಾಲ್ಕನೇ ಶನಿವಾರ
ಡಿಸೆಂಬರ್ 25: ಭಾನುವಾರ
ಡಿಸೆಂಬರ್ 26: ಕ್ರಿಸ್ಮಸ್ ಪ್ರಯುಕ್ತ ಮಿಜೋರಾಂ, ಸಿಕ್ಕಿಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ರಜೆ; ಶಾಹೀದ್ ಉದ್ಧಮ್ ಸಿಂಗ್ ಜಯಂತಿ ಪ್ರಯುಕ್ತ ಹರ್ಯಾಣದಲ್ಲಿ ರಜೆ
ಡಿಸೆಂಬರ್ 29: ಗುರು ಗೋವಿಂಗ್ ಸಿಂಗ್ ಜಯಂತಿ ಪ್ರಯುಕ್ತ ಪಂಜಾಬ್‌ನಲ್ಲಿ ಬ್ಯಾಂಕುಗಳಿಗೆ ರಜೆ
ಡಿಸೆಂಬರ್ 30: ಸ್ವಾತಂತ್ರ್ಯ ಹೋರಾಟ ಯು ಕಿಯಾಂಗ್ ನಾಂಗ್‌ಬಾ ಅವರ ಸ್ಮರಣಾರ್ಥ ಮೇಘಾಲಯದಲ್ಲಿ ಬ್ಯಾಂಕುಗಳಿಗೆ ರಜೆ
ಡಿಸೆಂಬರ್ 31: ಹೊಸ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಮಿಜೋರಾಂ ರಾಜ್ಯದಲ್ಲಿ ಬ್ಯಾಂಕುಗಳಿಗೆ ರಜೆ

ಡಿಸೆಂಬರ್‌ನಲ್ಲಿ ಬ್ಯಾಂಕಿಗೆ 14 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವಾಗ?

ಇದರಲ್ಲಿ ಮೇಘಾಲಯ ರಾಜ್ಯದಲ್ಲಿ ಬ್ಯಾಂಕುಗಳು ಡಿಸೆಂಬರ್ ತಿಂಗಳಲ್ಲಿ ಬರೋಬ್ಬರಿ 10 ದಿನ ಬಂದ್ ಇರುತ್ತವೆ. ಗೋವಾ ರಾಜ್ಯದಲ್ಲಿ 8 ದಿನ ರಜೆ ಇರುತ್ತದೆ. ಕರ್ನಾಟಕದಲ್ಲಿ ಭಾನುವಾರ ಮತ್ತು ಎರಡು ಶನಿವಾರ ಬಿಟ್ಟರೆ ವಿಶೇಷ ರಜಾ ದಿನಗಳಿಲ್ಲ. ನಮ್ಮ ರಾಜ್ಯದಲ್ಲಿನ ಬ್ಯಾಂಕುಗಳು 6 ದಿನ ಮಾತ್ರ ಬಾಗಿಲು ಮುಚ್ಚಿರುತ್ತವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+