For Quick Alerts
ALLOW NOTIFICATIONS  
For Daily Alerts

ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಐಪಿಒ ಸೆಪ್ಟೆಂಬರ್ 7ರಿಂದ 9

|

ಮಾಹಿತಿ ತಂತ್ರಜ್ಞಾನ (ಐ.ಟಿ.) ಸೇವೆ ಒದಗಿಸುವ ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಸೆಪ್ಟೆಂಬರ್ 7ರಂದು ಐಪಿಒ (ಇನ್ಷಿಯಲ್ ಪಬ್ಲಿಕ್ ಆಫರಿಂಗ್) ಸಬ್ ಸ್ಕ್ರಿಪ್ಷನ್ ಆರಂಭಿಸಲಿದೆ. ಈ ಸಾರ್ವಜನಿಕ ವಿತರಣೆಯಲ್ಲಿ 110 ಕೋಟಿ ರುಪಾಯಿ ಹೊಸದಾಗಿ ಸಂಗ್ರಹಿಸಲಾಗುವುದು ಹಾಗೂ 3,56,63,585 ಷೇರುಗಳನ್ನು ಆಫರ್ ಫಾರ್ ಸೇಲ್ (OFS) ಮೂಲಕ ಷೇರುದಾರರಿಗೆ ಮಾರಲಾಗುವುದು.

ಈ ಆಫರ್ ಫಾರ್ ಸೇಲ್ ನಲ್ಲಿ ಪ್ರವರ್ತಕರಾದ ಅಶೋಕ್ ಸೂಟ ಅವರ 84,14,223 ಈಕ್ವಿಟಿ ಷೇರು ಹಾಗೂ ಹೂಡಿಕೆದಾರರಾದ CMDB IIಗೆ ಸೇರಿದ 2,72,49,362 ಷೇರುಗಳು ಒಳಗೊಂಡಿವೆ. ಹ್ಯಾಪಿಯೆಸ್ಟ್ ಮೈಂಡ್ಸ್ ನಿಂದ ಸಾರ್ವಜನಿಕರಿಗೆ ಐಪಿಒ ದರವನ್ನು ಪ್ರತಿ ಷೇರಿಗೆ 165ರಿಂದ 166 ರುಪಾಯಿ ನಿಗದಿ ಮಾಡಲಾಗಿದೆ. ಈ ಐಪಿಒ ಸೆಪ್ಟೆಂಬರ್ 9ರ ತನಕ ಇರುತ್ತದೆ.

ಹ್ಯಾಪಿಯೆಸ್ಟ್ ಮೈಂಡ್ಸ್ ಟೆಕ್ನಾಲಜೀಸ್ ಐಪಿಒ ಸೆಪ್ಟೆಂಬರ್ 7ರಿಂದ 9

 

ಸಾರ್ವಜನಿಕ ವಿತರಣೆ ಮೂಲಕ ಕಂಪೆನಿಯು 702 ಕೋಟಿ ರುಪಾಯಿ ಸಂಗ್ರಹಿಸುವ ಗುರಿ ಇರಿಸಿಕೊಂಡಿದೆ. ಆಂಕರ್ ಹೂಡಿಕೆದಾರರಿಗಾಗಿ ಸೆಪ್ಟೆಂಬರ್ 4ನೇ ತಾರೀಕು ವಿತರಣೆ ಮುಕ್ತವಾಗಿರುತ್ತದೆ. ಕನಿಷ್ಠ 90 ಷೇರುಗಳಿಗೆ ಬಿಡ್ ಮಾಡಬೇಕು. ಅದರ ಮೇಲೆ ಹೆಚ್ಚಿಗೆ ಅರ್ಜಿ ಹಾಕಬೇಕಿದ್ದಲ್ಲಿ 90ರ ಗುಣಕದಂತೆ ಹೆಚ್ಚಿಸಬೇಕು. ಈ ಕಂಪೆನಿಯ ಈಕ್ವಿಟಿ ಷೇರು ಬಿಎಸ್ ಇ ಹಾಗೂ ಎನ್ ಎಸ್ ಇಯಲ್ಲಿ ಲಿಸ್ಟ್ ಆಗಲಿದೆ.

English summary

Bengaluru Based Digital Service Company Happiest Minds To launch Rs 700 Crore IPO On Sept 7

Bengaluru based IT services provider Happiest Minds Technologies is set to launch its initial public offering for subscription on September 7. With price band of 165- 166. Minimum equity shares of 90.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X