For Quick Alerts
ALLOW NOTIFICATIONS  
For Daily Alerts

ವಿದ್ಯಾರ್ಥಿಗಳ ಸ್ಟಾರ್ಟ್‌ಅಪ್‌ಗೆ ಬೆಂಬಲ: ಹೂಡಿಕೆ ಮಾಡಲಿರುವ ಬೆಂಗಳೂರಿನ ಗ್ರಾಡ್‌ಕ್ಯಾಪಿಟಲ್

|

ಕಾಲೇಜು ವಿದ್ಯಾರ್ಥಿಗಳು, ಪದವೀದರರ ವ್ಯವಹಾರ ಆಲೋಚನೆಗಳಿಂದ ಮೂಡಿದ ಸ್ಟಾರ್ಟ್ಅಪ್‌ ಯೋಜನೆಯನ್ನು ಬೆಳೆಸಲು ಸಹಾಯ ಮಾಡಲು ಬೆಂಗಳೂರು ಮೂಲದ ಗ್ರಾಡ್‌ಕ್ಯಾಪಿಟಲ್ ತನ್ನ ಪ್ಯಾನ್ ಇಂಡಿಯಾ ವಿದ್ಯಾರ್ಥಿಯ ಕೇಂದ್ರಿತ ನಿಧಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

 

ವಿದ್ಯಾರ್ಥಿಗಳಿಂದ ಆಯ್ಕೆ ಮಾಡಿದ ವಿಭಿನ್ನ ಸ್ಟಾರ್ಟ್‌ಅಪ್‌ ಆಲೋಚನೆಗಳಲ್ಲಿ ಆಯ್ಕೆ ಮಾಡಿದ 20 ಸ್ಟಾರ್ಟ್ಅಪ್‌ಗಳಲ್ಲಿ ಪ್ರತಿಯೊಂದಕ್ಕೂ 25,000 ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಕಂಪನಿ ತಿಳಿಸಿದೆ. ಈ ಮೂಲಕ ಒಟ್ಟು 5,00,000 ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ.

 
ವಿದ್ಯಾರ್ಥಿಗಳ ಸ್ಟಾರ್ಟ್‌ಅಪ್‌ಗೆ ಗ್ರಾಡ್‌ಕ್ಯಾಪಿಟಲ್ ಬೆಂಬಲ

ಕಾಲೇಜು ವಿದ್ಯಾರ್ಥಿಗಳಿಂದ ಸ್ಥಾಪಿತವಾದ ಸ್ಟಾರ್ಟ್‌ಅಪ್‌ಗಳಿಗಾಗಿ ಎಂಟು ವಾರಗಳ ಕಾಲ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ಕಂಪನಿ ತಿಳಿಸಿದೆ. ಈ ಮೂಲಕ ವಿದ್ಯಾರ್ಥಿಗಳ ಕನಸಿನ ಕೂಸು ಸ್ಟಾರ್ಟ್‌ಅಪ್‌ಗೆ ಅನುಕೂಲವಾದ ವಿನ್ಯಾಸವನ್ನು ಒದಗಿಸುವುದರ ಜೊತೆಗೆ ಧನಸಹಾಯ ಮಾಡಲಿದೆ.

ಗ್ರಾಡ್‌ಕ್ಯಾಪಿಟಲ್ ಆಯ್ಕೆ ಮಾಡಿದ ಪ್ರತಿ ಎಂಟು ವಾರಗಳ ಕಾರ್ಯಕ್ರಮದಲ್ಲಿ ತಜ್ಞರೊಂದಿಗೆ ಹೂಡಿಕೆಯ ಡೆಮೊ ಕೂಡ ನೀಡಲಾಗುತ್ತದೆ. ಈ ಮೂಲಕ ಕಾಲೇಜು ವಿದ್ಯಾರ್ಥಿಗಳಿಂದ ಸ್ಥಾಪಿತವಾದ ಸ್ಟಾರ್ಟ್‌ಅಪ್‌ಗಳನ್ನು ಭವಿಷ್ಯದ ಯೂನಿಕಾರ್ನ್‌ಗಳಾಗಿ ಹೊರತರುವ ಗುರಿಯನ್ನು ಹೊಂದಿದೆ. ಮುಂದಿನ ಮೂರು ವರ್ಷಗಳಲ್ಲಿ ಗ್ರಾಡ್‌ಕ್ಯಾಪಿಟಲ್ ಸುಮಾರು 100 ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಲು ಯೋಜಿಸಿದೆ.

ಸ್ಟಾರ್ಟ್ಅಪ್‌ಗಳನ್ನು ಗುರುತಿಸುವ ಸಲುವಾಗಿ, ಗ್ರಾಡ್ ಕ್ಯಾಪಿಟಲ್ ದೇಶಾದ್ಯಂತ ಸಹವರ್ತಿಗಳನ್ನು ನೇಮಿಸಿಕೊಂಡಿದೆ. ಜೊತೆಗೆ ಕ್ಯಾಂಪಸ್‌ಗಳಲ್ಲಿರುವ ವಿದ್ಯಾರ್ಥಿ ಸಮುದಾಯಗಳೊಂದಿಗೆ ಸಹಭಾಗಿತ್ವ ವಹಿಸಿ ಅಲ್ಲಿನ ಅತ್ಯುತ್ತಮ ಪ್ರತಿಭೆಗಳನ್ನು ಹುಡುಕುತ್ತಿದ್ದಾರೆ.

English summary

Bengaluru Based GradCapital Launches Fund To Support Student Startups

The Bengaluru city-based gradCapital will host an eight-week, intensive programme for companies founded and run by college students.
Story first published: Friday, May 28, 2021, 17:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X