For Quick Alerts
ALLOW NOTIFICATIONS  
For Daily Alerts

ಬಿಗ್ ಬಾಸ್ 16: ದಾಖಲೆ ಮಟ್ಟಕ್ಕೇರಿದ ಸಲ್ಮಾನ್ ಖಾನ್ ಗಳಿಕೆ!

|

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುವ ಭಾರತದ ಅತ್ಯಂತ ಜನಪ್ರಿಯ ಹಾಗೂ ಶ್ರೀಮಂತ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 16ನೇ ಆವೃತ್ತಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಬಾರಿಯ ಸ್ಟಾರ್ ಆಂಕರ್ ಈ ಸೀಸನ್ ನಿರೂಪಣೆ ಮಾಡಲು ಸರಿ ಸುಮಾರು 1050 ಕೋಟಿ ರೂಪಾಯಿಗಳನ್ನು ಸ್ವೀಕರಿಸುತ್ತಾರೆ ಎಂಬ ವರದಿ ಬಂದಿದೆ.

ಕಳೆದ ಹದಿಮೂರು ವರ್ಷಗಳಿಂದ ಜನಪ್ರಿಯ ಶೋ ಹೋಸ್ಟ್ ಮಾಡಿರುವ ಸಲ್ಮಾನ್ ಖಾನ್ ಈ ಬಾರಿಯೂ ಬಹುನಿರೀಕ್ಷಿತ ಸೀಸನ್‌ಗೆ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಬಿಗ್ ಬಾಸ್ 16 ಅನ್ನು ಹೋಸ್ಟ್ ಮಾಡಲು ಉತ್ಸಾಹ ಹೊಂದಿರುವುದಾಗಿ ಸಲ್ಮಾನ್ ಘೋಷಿಸಿದ್ದರು.

ವಿಚಿತ್ರವೆಂದರೆ, ಹಲವು ಬಾರಿ ಈ ಶೋ ಬಿಡುವುದಾಗಿ ಸಲ್ಮಾನ್ ಬಹಿರಂಗವಾಗಿ ಘೋಷಿಸಿದ್ದರು. ಆದರೆ, ಬಿಟ್ಟರೂ ಬಿಡದು ಈ ಮಾಯೆ ಎಂಬಂತೆ ದಬ್ಬಾಂಗ್ ನಟ ಮತ್ತೆ ಮತ್ತೆ ಪ್ರತಿ ಸೀಸನ್‌ನಲ್ಲೂ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಸಲ್ಮಾನ್ ತಮ್ಮ ಸಂಭಾವನೆಯನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ಸುದ್ದಿ ಹಬ್ಬಿದೆ.

ಬಿಗ್ ಬಾಸ್ 16: ದಾಖಲೆ ಮಟ್ಟಕ್ಕೇರಿದ ಸಲ್ಮಾನ್ ಖಾನ್ ಗಳಿಕೆ!

ಲಭ್ಯ ಮಾಹಿತಿಯಂತೆ, ಸಲ್ಮಾನ್ ಈ ಬಾರಿ 1050 ಕೋಟಿ ರು ಪಡೆಯಲಿದ್ದಾರೆ ಎನ್ನಲಾಗಿದೆ, ಕಳೆದ ಬಾರಿ 350 ಕೋಟಿ ರು ಗಳಿಸಿದ್ದರು. ಆದರೆ, ಸಂಭಾವನೆ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಸೀಸನ್ 15ರಲ್ಲಿ 14 ವಾರಗಳ ಶೋ ಹೋಸ್ಟ್ ಮಾಡಲು ಸಲ್ಮಾನ್ ಸುಮಾರು 350 ಕೋಟಿ ರು ಗಳಿಸಿದ್ದರು. ಸರಾಸರಿ ಪ್ರತಿ ಎಪಿಸೋಡಿಗೆ 25 ಕೋಟಿ ರು ಪಡೆದುಕೊಂಡಿದ್ದರು. ದಿನದ ಲೆಕ್ಕದಂತೆ 12 ಕೋಟಿ ರು ಲಭಿಸಿತ್ತು.

ಬಿಗ್ ಬಾಸ್ 16: ದಾಖಲೆ ಮಟ್ಟಕ್ಕೇರಿದ ಸಲ್ಮಾನ್ ಖಾನ್ ಗಳಿಕೆ!

ಇದಕ್ಕೂ ಮುನ್ನ ಸೀಸನ್ 4,5 ಹಾಗೂ 6ರಲ್ಲಿ ಪ್ರತಿ ಎಪಿಸೋಡಿಗೆ 2.5 ಕೋಟಿ ರು ಮಾತ್ರ ಸಿಕ್ಕಿತ್ತು. ಬಿಗ್ ಬಾಸ್ 7 ರಿಂದ ಸಂಭಾವನೆ ದ್ವಿಗುಣವಾಗಿ ಪ್ರತಿ ಎಪಿಸೋಡಿಗೆ 5 ಕೋಟಿ ರು ಪ್ರತಿ ವೀಕೆಂಡ್ ಗೆ ಪಡೆದುಕೊಂಡಿದ್ದರು. ಬಿಬಿ10ರಲ್ಲಿ 8 ಕೋಟಿ ರು ಗಳಿಸಿದ್ದರು.

ಬಿಗ್ ಬಾಸ್ 16 ಆರಂಭದ ಬಗ್ಗೆ ಸದ್ಯಕ್ಕೆ ಯಾವುದೇ ಸುದ್ದಿ ಇಲ್ಲದಿದ್ದರೂ ಅಕ್ಟೋಬರ್ 2022ರಲ್ಲಿ ಪ್ರಸಾರವಾಗಬಹುದು, ಕಲರ್ಸ್ ಟಿವಿಯಲ್ಲಿ ಪ್ರತಿ ದಿನ ಮನರಂಜಿಸಲಿದೆ. ಯಾವಾಗಾದ್ರೂ ಪ್ರಸಾರವಾಗಲಿ ಈ ಬಾರಿ ಸಲ್ಮಾನ್ ಸಂಭಾವನೆ ರಾಕೆಟ್ ವೇಗದಲ್ಲಿ ಮೇಲಕ್ಕೇರುವುದಂತೂ ಗ್ಯಾರಂಟಿ ಎಂದು ಮಾರುಕಟ್ಟೆ ವಿಶ್ಲೇಷಕರು ಎಕಾನಾಮಿಕ್ಸ್ ಟ್ರೈಮ್ಸ್‌ಗೆ ತಿಳಿಸಿದ್ದಾರೆ.

English summary

Bigg Boss 16: Salman Khan to charge over Rs 1000 crore for upcoming season

Bigg Boss is one of India's most popular reality TV show hosted by superstar Salman Khan and reportedly this time star anchor will receive approximately Rs 1050 crore as the payment for hosting this season
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X