For Quick Alerts
ALLOW NOTIFICATIONS  
For Daily Alerts

ಮತ್ತೆ ಜಗತ್ತಿನ ನಂಬರ್ 1 ಶ್ರೀಮಂತನಾದ ಬಿಲ್‌ಗೇಟ್ಸ್‌

|

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ ಮತ್ತೆ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಕಳೆದ 2 ವರ್ಷಗಳ ಕಾಲ ನಂ 1 ಶ್ರೀಮಂತ ಪಟ್ಟದಲ್ಲಿದ್ದ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಸಿಇಓ ಜೆಫ್ ಬೇಜೋಸ್ ರನ್ನು ಹಿಂದಿಕ್ಕಿದ್ದಾರೆ.

 

2017ರಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ರನ್ನ ಹಿಂದಿಕ್ಕಿದ ಜೆಫ್ ಬೇಜೋಸ್, ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಆದರೆ ಬ್ಲೂಮ್‌ಬರ್ಗ್ ಬಿಲಿನೇರ್ಸ್ ಇಂಡೆಕ್ಸ್ ಪ್ರಕಾರ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ ಮರಳಿ ನಂಬರ್ 1 ಪಟ್ಟಕ್ಕೇರಿದ್ದು ಸದ್ಯ ಅವರ ಒಟ್ಟು ಸಂಪತ್ತು 110 ಬಿಲಿಯನ್ ಅಮೆರಿಕನ್ ಡಾಲರ್‌ (ಭಾರತದ ರುಪಾಯಿಗಳಲ್ಲಿ 1 ಬಿಲಿಯನ್ ಗೆ 7165 ಕೋಟಿ 69 ಲಕ್ಷ ರುಪಾಯಿ )

 
ಮತ್ತೆ ಜಗತ್ತಿನ ನಂಬರ್ 1  ಶ್ರೀಮಂತನಾದ ಬಿಲ್‌ಗೇಟ್ಸ್‌

ಅಕ್ಟೋಬರ್ 25ರಂದು ಅಮೆರಿಕಾ ರಕ್ಷಣ ವಿಭಾಗ ಪೆಂಟಗನ್ ಮೈಕ್ರೋಸಾಫ್ಟ್ ಕಂಪನಿಗೆ 10 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಕ್ಲೌಡ್ ಕಂಪ್ಯೂಟಿಂಗ್ ಒಪ್ಪಂದವನ್ನು ನೀಡಿತು. ಆ ಬಳಿಕ ಮೈಕ್ರೋಸಾಫ್ಟ್‌ ಷೇರುಗಳ ಮೌಲ್ಯ ಶೇಕಡಾ 4 ಪ್ರತಿದಷ್ಟು ಏರಿಕೆಯಾಗಿ ಬಿಲ್‌ಗೇಟ್ಸ್‌ ಭವಿಷ್ಯವನ್ನು 110 ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಳ್ಳಿದೆ ಎಂದು ಬ್ಲೂಮ್‌ಬರ್ಗ್ ಬಿಲಿನೇರ್ಸ್ ಇಂಡೆಕ್ಸ್ ಹೇಳಿದೆ.

ಮತ್ತೊಂದೆಡೆ ಅಮೆಜಾನ್‌ ಕಂಪನಿಯ ಷೇರುಗಳು ಶೇಕಡಾ 2 ಪ್ರತಿದಷ್ಟು ಇಳಿಕೆಗೊಂಡಿವೆ. ಪರಿಣಾಮ ಅಮೆಜಾನ್ ಸಿಇಓ ಜೆಫ್ ಬೇಜೋಸ್ ಒಟ್ಟು ಸಂಪತ್ತು 108.7 ಬಿಲಿಯನ್ ಅಮೆರಿಕನ್ ಡಾಲರ್‌ಗೆ ತಗ್ಗಿದೆ. ಕಳೆದ ತಿಂಗಳಿನಲ್ಲಷ್ಟೇ ಅಮೆಜಾನ್ 2 ವರ್ಷಗಳ ಬಳಿಕ ತನ್ನ ಲಾಭದಲ್ಲಿ ಕುಸಿತವಾಗಿದೆ ಎಂದು ಪ್ರಕಟಿಸಿತ್ತು. ಆ ಮೂಲಕ ಅಮೆಜಾನ್‌ ಕಂಪನಿಯ ಷೇರುಗಳು ಕುಸಿತಕ್ಕೆ ಕಾರಣವಾಗಿದೆ.

English summary

Billgates Overtakes Jeff Bezos Reclaims The World's Richest Person Title

co-founder of Microsoft Bill Gates, overtook Amazon Jeff Bezos to become the world's richest person, reclaiming the title after over 2 years.
Story first published: Saturday, November 16, 2019, 14:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X