For Quick Alerts
ALLOW NOTIFICATIONS  
For Daily Alerts

ಮತ್ತೊಂದು ಮೈಲುಗಲ್ಲನ್ನು ತಲುಪಿದ ಬಿಟ್‌ ಕಾಯಿನ್: ಮೊದಲ ಬಾರಿಗೆ 50 ಸಾವಿರ ಡಾಲರ್ ಗಡಿದಾಟಿದೆ

|

ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಹೂಡಿಕೆದಾರರನ್ನು ಮತ್ತಷ್ಟು ಆಕರ್ಷಿಸುತ್ತಿರುವುದರಿಂದ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ. ಇದೇ ಮೊದಲ ಬಾರಿಗೆ $ 50,000 ದಾಟಿದೆ.

ಅತಿದೊಡ್ಡ ಕ್ರಿಪ್ಟೋಕರೆನ್ಸಿ ಶೇಕಡಾ 4.9ರಷ್ಟು $ 50,548 ಕ್ಕೆ ಏರಿದೆ ಮತ್ತು ಈ ವರ್ಷ ಇಲ್ಲಿಯವರೆಗೆ ಸುಮಾರು ಶೇಕಡಾ 70ರಷ್ಟು ಹೆಚ್ಚಾಗಿದೆ. ಬಿಟ್‌ಕಾಯಿನ್‌ ದಾಖಲೆಯನ್ನು ಎತ್ತರಿಸಿದ ನಂತರ ಅದರ ಲಾಭವನ್ನು ಹೆಚ್ಚಿಸಿತು.

ಮೊದಲ ಬಾರಿಗೆ 50 ಸಾವಿರ ಡಾಲರ್ ಗಡಿದಾಟಿದ ಬಿಟ್‌ ಕಾಯಿನ್

 

ನ್ಯೂಯಾರ್ಕ್‌ನಲ್ಲಿ ಬೆಳಿಗ್ಗೆ 7:32 ರ ಹೊತ್ತಿಗೆ ಸುಮಾರು, 50,191 ತಲುಪಿದೆ ಮತ್ತು ಈ ವರ್ಷ ಇಲ್ಲಿಯವರೆಗೆ ಸುಮಾರು ಶೇಕಡಾ 73 ರಷ್ಟು ಹೆಚ್ಚಾಗಿದೆ. ಪ್ರತಿಸ್ಪರ್ಧಿ ಕ್ರಿಪ್ಟೋ ಆಗಿರುವ ಈಥರ್ ಶುಕ್ರವಾರ ದಾಖಲೆಯನ್ನು ಮುಟ್ಟಿದೆ ಮತ್ತು ವರ್ಷದಿಂದ ಇಲ್ಲಿಯವರೆಗೆ ಶೇಕಡಾ 140ರಷ್ಟು ಹೆಚ್ಚಾಗಿದೆ.

ಕಳೆದ ವರ್ಷ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 170ರಷ್ಟು ಏರಿಕೆಯೊಂದಿಗೆ $29,000 ಕ್ಕೆ ಕೊನೆಗೊಂಡ ನಂತರ, ಏಳು ದಿನಗಳ ನಂತರ ಬಿಟ್‌ಕಾಯಿನ್ ಟೋಕನ್ $40,000 ಕ್ಕೆ ಏರಿತು. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಜನವರಿ 2021 ರಲ್ಲಿ 1.5 ಬಿಲಿಯನ್ ಡಾಲರ್ ಮೌಲ್ಯದ ಬಿಟ್‌ಕಾಯಿನ್‌ಗಳನ್ನು ಖರೀದಿಸಿದೆ. ಇದರಿಂದ ಬಿಟ್‌ಕಾಯಿನ್ ಮತ್ತಷ್ಟು ಮೌಲ್ಯವನ್ನು ಆಕರ್ಷಿಸಿದೆ.

ಇತ್ತೀಚಿನ ಮೈಲಿಗಲ್ಲಿನ ನಂತರ ಹೂಡಿಕೆದಾರರು ದೊಡ್ಡ ಸವಾಲಿಗೆ ಸಿದ್ಧರಾಗಿರಬೇಕು ಎಂದು ಟ್ರೆನ್‌ಚೆವ್ ಎಚ್ಚರಿಸಿದ್ದಾರೆ, ಇದು ಕಳೆದ ತಿಂಗಳ ಶೇಕಡಾ 30ರಷ್ಟು ಏಳಿಗೆಯ ಸಾಕ್ಷಿಯಾಗಿ ತೋರಿಸುತ್ತದೆ.

English summary

Bitcoin Breaks Above $50,000 For First Time

Bitcoin blew through another milestone, surging past $50,000 for the first time as the blistering rally in the largest cryptocurrency continues to captivate investors worldwide.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X