For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಅಂಶ ಕುಸಿತ; ರಕ್ತದೋಕುಳಿಗೆ ಕಾರಣವಾದ ಅಂಶಗಳೇನು?

By ಅನಿಲ್ ಆಚಾರ್
|

ಭಾರತದ ಷೇರು ಮಾರುಕಟ್ಟೆ ಹೂಡಿಕೆದಾರರ 3.3 ಲಕ್ಷ ಕೋಟಿ ರುಪಾಯಿ ಸಂಪತ್ತು ಕೊಚ್ಚಿಹೋಗಿದೆ.

ರಿಲಯನ್ಸ್ ಮತ್ತು ಐಟಿ ವಲಯದ ಷೇರುಗಳಲ್ಲಿನ ಲಾಭದಲ್ಲಿನ ನಗದೀಕರಣದ ಪರಿಣಾಮವಾಗಿ ಗುರುವಾರ ಸೆನ್ಸೆಕ್ಸ್ ಹಾಗೂ ನಿಫ್ಟಿಯಲ್ಲಿ ಭಾರೀ ಇಳಿಕೆ ಕಂಡುಬಂತು. ಸತತ ಹತ್ತು ದಿನಗಳ ಕಾಲ ಏರಿಕೆ ದಾಖಲಿಸಿದ ಸೂಚ್ಯಂಕಗಳಲ್ಲಿ ರಕ್ತದೋಕುಳಿಯಾಯಿತು. ಸೆನ್ಸೆಕ್ಸ್ ಸೂಚ್ಯಂಕವು 1066.33 ಪಾಯಿಂಟ್ ಕುಸಿದು 39,728.21 ಪಾಯಿಂಟ್ ನೊಂದಿಗೆ ದಿನದ ವಹಿವಾಟು ಮುಗಿಸಿತು.

5 ಲಕ್ಷ ಕೋಟಿ ರುಪಾಯಿ ಮಾರುಕಟ್ಟೆ ಬಂಡವಾಳ ಮೌಲ್ಯ ದಾಟಿದ ಇನ್ಫೋಸಿಸ್5 ಲಕ್ಷ ಕೋಟಿ ರುಪಾಯಿ ಮಾರುಕಟ್ಟೆ ಬಂಡವಾಳ ಮೌಲ್ಯ ದಾಟಿದ ಇನ್ಫೋಸಿಸ್

ಇನ್ನು ನಿಫ್ಟಿ 290.7 ಪಾಯಿಂಟ್ ಗಳ ಇಳಿಕೆಯಾಗಿ 11,680.35 ಅಂಶದೊಂದಿಗೆ ವ್ಯವಹಾರ ಚುಕ್ತಾ ಮಾಡಿತು. ಬ್ಯಾಂಕ್ ನಿಫ್ಟಿಯಲ್ಲೂ ಭರ್ಜರಿ ಕುಸಿತ ಕಂಡುಬಂತು 802.30 ಪಾಯಿಂಟ್ ಗಳು ಕುಸಿದು, 23,072.40 ಪಾಯಿಂಟ್ ನಲ್ಲಿ ದಿನದ ಕೊನೆಗೆ ವ್ಯವಹಾರ ಕೊನೆಯಾಯಿತು.

ನಿಫ್ಟಿಯಲ್ಲಿ ಏರಿಕೆ ದಾಖಲಿಸಿದ ಪ್ರಮುಖ ಷೇರುಗಳಿವು
ಏಷ್ಯನ್ ಪೇಂಟ್ಸ್

ಜೆಎಸ್ ಡಬ್ಲ್ಯು ಸ್ಟೀಲ್

ಹೀರೋ ಮೋಟೋಕಾರ್ಪ್

ಕೋಲ್ ಇಂಡಿಯಾ

ನಿಫ್ಟ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳಿವು
ಬಜಾಜ್ ಫೈನಾನ್ಸ್

ಟೆಕ್ ಮಹೀಂದ್ರಾ

ಇಂಡಸ್ ಇಂಡ್ ಬ್ಯಾಂಕ್

ಐಸಿಐಸಿಐ ಬ್ಯಾಂಕ್

ಎಸ್ ಬಿಐ

ಷೇರು ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಾಣಲು ಕಾರಣವಾದ ಅಂಶಗಳಿವು:

ಆರ್ಥಿಕ ಉತ್ತೇಜನ ಭರವಸೆ ಕರಗಿದೆ

ಆರ್ಥಿಕ ಉತ್ತೇಜನ ಭರವಸೆ ಕರಗಿದೆ

ಯುಎಸ್ ನ ಖಜಾನೆ ಕಾರ್ಯದರ್ಶಿ ಹಾಗೂ ಸ್ಪೀಕರ್ ನ್ಯಾನ್ಸಿ ಪೆಲೊಸಿ ಮತ್ತೊಂದು ಸುತ್ತಿನ ಆರ್ಥಿಕ ಪ್ಯಾಕೇಜ್ ಭರವಸೆ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ನವೆಂಬರ್ 3ರ ಯುಎಸ್ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಆರ್ಥಿಕ ಪ್ಯಾಕೇಜ್ ಅಂತಿಮ ಆಗುವುದು ಕಷ್ಟ ಎಂದು ಹೇಳಿದ್ದಾರೆ.

ಯುಎಸ್- ಚೀನಾ ಉದ್ವಿಗ್ನತೆ

ಯುಎಸ್- ಚೀನಾ ಉದ್ವಿಗ್ನತೆ

ಚೀನಾದ ಆಂಟ್ ಗ್ರೂಪ್ ಅನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ಟ್ರಂಪ್ ಆಡಳಿತಕ್ಕೆ ಪ್ರಸ್ತಾವ ಸಲ್ಲಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆಲಿಬಾಬ ಕಂಪೆನಿ ಐಪಿಒಗೆ ತೆರಳುವ ಮುನ್ನ ಈ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದೆ ಎನ್ನಲಾಗುತ್ತಿದೆ.

ಕೊರೊನಾ ಸೋಂಕು ಹೆಚ್ಚಳ

ಕೊರೊನಾ ಸೋಂಕು ಹೆಚ್ಚಳ

ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ನಿಲ್ಲಿಸಲು ಮುಂದಾಗುತ್ತಿವೆ. ಈಚೆಗೆ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದ ನಂತರ ಹೂಡಿಕೆದಾರರು ಲಾಭದ ನಗದೀಕರಣ ಮಾಡಿಕೊಳ್ಳುತ್ತಿದ್ದಾರೆ.

English summary

Bloodbath In Sensex And Nifty; Factors Behind Indian Stock Market Indices Down

Sensex tank more thank 1000 points and nifty down 290 points on October 15, 2020. Here is the reason behind this.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X