For Quick Alerts
ALLOW NOTIFICATIONS  
For Daily Alerts

Q2: ಬಾಷ್ ಲಿಮಿಟೆಡ್‌ಗೆ ಭರ್ಜರಿ ಲಾಭ, ಆದಾಯ ಶೇ 17 . 88ರಷ್ಟು ಏರಿಕೆ

|

ಬೆಂಗಳೂರು, ನವೆಂಬರ್ 10: ಬಾಷ್ ಲಿಮಿಟೆಡ್ 2021-2022 ನೇ ಹಣಕಾಸು ಸಾಲಿನ 2 ನೇ ತ್ರೈಮಾಸಿಕದಲ್ಲಿ ತನ್ನ ಕಾರ್ಯಾಚರಣೆಗಳಲ್ಲಿ 2918 ಕೋಟಿ ರೂಪಾಯಿಗಳಷ್ಟು ಆದಾಯ ಗಳಿಸಿದೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17.7 ರಷ್ಟು ಹೆಚ್ಚಳ ಸಾಧಿಸಿದೆ. 2021 ರ ಜುಲೈ-ಸೆಪ್ಟಂಬರ್ ಅವಧಿಯಲ್ಲಿ ಹೇರಲಾಗಿದ್ದ ಲಾಕ್ ಡೌನ್ ನಿರ್ಬಂಧಗಳನ್ನು ತೆರವು ಮಾಡಿದ್ದರಿಂದ ಗಣನೀಯ ಪ್ರಮಾಣದಲ್ಲಿ ಮಾರಾಟದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಳ ಪ್ರಗತಿಯನ್ನು ಸಂಸ್ಥೆ ಕಂಡಿದೆ.

ತೆರಿಗೆ ಪೂರ್ವ ಲಾಭ(PBT)ವು 397 ಕೋಟಿ ರೂಪಾಯಿಗಳಾಗಿದ್ದು, ಕಾರ್ಯಾಚರಣೆಗಳ ಒಟ್ಟು ಆದಾಯದ ಶೇ.13.6 ರಷ್ಟಾಗಿದೆ. ತೆರಿಗೆ ನಂತರದ ಲಾಭವು 372 ಕೋಟಿ ರೂಪಾಯಿಗಳಾಗಿದ್ದು, ಕಾರ್ಯಾಚರಣೆಗಳ ಒಟ್ಟು ಆದಾಯದ ಶೇ.12.7 ರಷ್ಟಾಗಿದೆ.

2021 ನೇ ಸಾಲಿನಲ್ಲಿ ಕೆಲಸ ಮಾಡುವ ಅತ್ಯುತ್ತಮ ತಾಣ ಎಂಬ ಪ್ರಮಾಣಪತ್ರಕ್ಕೆ ಪಾತ್ರವಾಗಿದೆ. ಈ ಮೆಚ್ಚುಗೆಯು ಬಾಷ್ ಲಿಮಿಟೆಡ್ ಅತ್ಯುತ್ತಮ ಕಾರ್ಯ ನಿರ್ವಹಣೆ ಮತ್ತು ಪ್ರಗತಿ ಸಾಧಿಸುವ ಬದ್ಧತೆಯನ್ನು ಹೆಚ್ಚಿಸಿದೆ ಎಂದು ಸಂಸ್ಥೆ ಹೇಳಿದೆ. ಎರಡನೇ ತ್ರೈಮಾಸಿಕ ಫಲಿತಾಂಶದ ಇನ್ನಷ್ಟು ವಿವರಗಳು ಮುಂದಿವೆ...

ಬಾಷ್ ಗ್ರೂಪ್‌ನ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ

ಬಾಷ್ ಗ್ರೂಪ್‌ನ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ

ಬಾಷ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಭಾರತದಲ್ಲಿ ಬಾಷ್ ಗ್ರೂಪ್‌ನ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ, ''ಪ್ರಸ್ತುತ ಭಾರತದಲ್ಲಿ ಸೆಮಿಕಂಡಕ್ಟರ್ ಕೊರತೆಯನ್ನು ಎದುರಿಸುತ್ತಿರುವುದರಿಂದ ಆಟೋಮೋಟಿವ್ ಮಾರುಕಟ್ಟೆ ಉತ್ಪಾದನೆ ಕುಸಿದಿದೆಯಾದರೂ ಚೇತರಿಕೆಯ ಮುನ್ಸೂಚನೆ ಕಾಣುತ್ತಿದೆ. ಆದಾಗ್ಯೂ, ಆಟೋಮೋಟಿವ್ ಉದ್ಯಮವು ಬೆಳವಣಿಗೆಯತ್ತ ಸಾಗುತ್ತಿರುವ ಬಗ್ಗೆ ಮಾರುಕಟ್ಟೆಯಲ್ಲಿನ ಅಸ್ಥಿರತೆಯು ಪ್ರಮುಖ ಆತಂಕವನ್ನು ಸೃಷ್ಟಿ ಮಾಡಿದೆ,'' ಎಂದರು.

ಪಿಎಲ್ಐ ಕ್ಷೇತ್ರದ ಯೋಜನೆ

ಪಿಎಲ್ಐ ಕ್ಷೇತ್ರದ ಯೋಜನೆ

ಇತ್ತೀಚೆಗೆ ಭಾರತ ಸರ್ಕಾರವು ಆಟೋಮೋಟಿವ್ ಪಿಎಲ್ಐ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಕಟಿಸಿರುವ ಕೈಗಾರಿಕಾ ಆದ್ಯತೆಯ ಪಿಎಲ್ಐ ಯೋಜನೆಗಳ ಬಗ್ಗೆ ಮಾತನಾಡಿದ ಸೌಮಿತ್ರ , ''ಕೋವಿಡ್-19 ಮತ್ತು ಪ್ರಸ್ತುತ ತಲೆದೋರಿರು ಸೆಮಿಕಂಡಕ್ಟರ್ ಕೊರತೆ ಬಿಕ್ಕಟ್ಟು ಸೇರಿದಂತೆ 2019 ರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಆಟೋಮೋಟಿವ್ ಉದ್ಯಮಕ್ಕೆ ಹೆಚ್ಚು ಅಗತ್ಯವಿರುವ ಸಂದರ್ಭದಲ್ಲಿಯೇ ಪಿಎಲ್ಐ ಸರಿಯಾದ ಸಮಯದಲ್ಲಿ ಜಾರಿಗೆ ಬಂದ ಯೋಜನೆಯಾಗಿದೆ. ಅತ್ಯಾಧುನಿಕ ಆಟೋಮೋಟಿವ್ ತಂತ್ರಜ್ಞಾನದ ಬಿಡಿಭಾಗಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ನೀಡಲಾಗುತ್ತಿರುವ ಆದ್ಯತೆಯು ಜಾಗತಿಕ ಗುಣಮಟ್ಟಕ್ಕೆ ಸರಿಯಾದ ರೀತಿಯಲ್ಲಿ ಭಾರತವನ್ನು ತರುವ ಗುರಿಯೊಂದಿಗೆ ಚಲನಶೀಲತೆಯ ಭವಿಷ್ಯದ ತಂತ್ರಜ್ಞಾನಗಳನ್ನು ವೇಗಗೊಳಿಸುವ ಉದ್ಯಮವನ್ನು ಸಕ್ರಿಯಗೊಳಿಸುತ್ತದೆ. ಪಿಎಲ್ಐ ಪ್ರಯೋಜನಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲು ಬಾಷ್ ಬದ್ಧವಾಗಿದ್ದು, ಇದು ಕೈಗಾರಿಕೀಕರಣದ ತಂತ್ರಜ್ಞಾನಗಳಲ್ಲಿನ ಕೊರತೆಗಳನ್ನು ನೀಗಿಸಿಕೊಳ್ಳಲು ಸಹಕಾರಿಯಾಗಲಿದೆ,'' ಎಂದು ತಿಳಿಸಿದರು.

ಎರಡನೇ ತ್ರೈಮಾಸಿಕದಲ್ಲಿ ವ್ಯವಹಾರ ವಿಭಾಗದ ಪಕ್ಷಿನೋಟ

ಎರಡನೇ ತ್ರೈಮಾಸಿಕದಲ್ಲಿ ವ್ಯವಹಾರ ವಿಭಾಗದ ಪಕ್ಷಿನೋಟ

2021-22 ನೇ ಸಾಲಿನ 2 ನೇ ತ್ರೈಮಾಸಿಕದಲ್ಲಿ ಮಾರಾಟದಲ್ಲಿ ಶೇ.20 ರಷ್ಟು ಹೆಚ್ಚಳವಾಗಿದ್ದು, ಪವರ್ ಟ್ರೇನ್ ಸಲೂಶನ್ಸ್ ವಿಭಾಗದಲ್ಲಿ ಶೇ.16 ರಷ್ಟು ಹೆಚ್ಚಳವಾಗಿದೆ. ಇದೇ ವೇಳೆ, 2021-22 ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಮಾರುಕಟ್ಟೆ ನಂತರದಲ್ಲಿ ಶೇ.27 ರಷ್ಟು ಹೆಚ್ಚಳವಾಗಿದೆ. ಮೊಬಿಲಿಟಿ ಸಲೂಶನ್ಸ್ ಹೊರಗಿನ ವಿಭಾಗದಲ್ಲಿ ಬಾಷ್ ಶೇ.36 ಹೆಚ್ಚಳ ಸಾಧಿಸಿದ್ದು, ಇದಕ್ಕೆ ಪ್ರಮುಖ ಕಾರಣ 2021 ರ ಜುಲೈ-ಸೆಪ್ಟಂಬರ್ ಅವಧಿಯಲ್ಲಿ ಪವರ್ ಟೂಲ್ಸ್ ವರ್ಗದಲ್ಲಿನ ವಹಿವಾಟು ಹೆಚ್ಚಳವಾಗಿರುವುದಾಗಿದೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕುಂಠಿತಗೊಂಡಿದ್ದ ಕಂಪನಿಯ ವಹಿವಾಟು ಪರಿಸ್ಥಿತಿ ಸುಧಾರಣೆಗೊಳ್ಳುತ್ತಿದ್ದು, ಮಾರಾಟದಲ್ಲಿ ಚೇತರಿಕೆಯನ್ನು ಕಾಣುತ್ತಿದೆ.

ಶತಮಾನೋತ್ಸವದ ಸನಿಹದಲ್ಲಿ ಬಾಷ್ ಇಂಡಿಯಾ

ಶತಮಾನೋತ್ಸವದ ಸನಿಹದಲ್ಲಿ ಬಾಷ್ ಇಂಡಿಯಾ

ಬಾಷ್ ಇಂಡಿಯಾ ತನ್ನ ಶತಮಾನೋತ್ಸವ ಆಚರಣೆಯ ದಿನಗಳು ಸನಿಹದಲ್ಲಿದ್ದು, 2022 ಕ್ಕೆ ಈ ಸಂಭ್ರಮವನ್ನು ಆಚರಿಸಿಕೊಳ್ಳಲಿದೆ. "ನಮ್ಮ ಶತಮಾನೋತ್ಸವದ ಆಚರಣೆಗಳು ನಮ್ಮ ಸಹವರ್ತಿಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಗೆ ಸಂದ ಫಲಿತಾಂಶವಾಗಿದೆ. ಮೊಬಿಲಿಟಿ ಮತ್ತು ಅದರಾಚೆಗಿನ ಅತ್ಯಾಧುನಿಕ ಉತ್ಪನ್ನಗಳು, ಪರಿಹಾರಗಳು ಮತ್ತು ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಬಾಷ್ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. 2022 ರಲ್ಲಿ ಬಾಷ್ ಇಂಡಿಯಾ ತನ್ನ ಪೋರ್ಟ್ ಫೋಲಿಯೋದಾದ್ಯಂತ ನಮ್ಮ ಪ್ರಗತಿಗಳು ಮತ್ತು ನಾವೀನ್ಯತೆಗಳನ್ನು ಪ್ರದರ್ಶಿಸಲು ಹಲವಾರು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೇವೆ. ಇದು ದೇಶದಲ್ಲಿ ನಮ್ಮ ಬೆಳವಣಿಗೆ ಮತ್ತಷ್ಟು ಹೆಚ್ಚಲು ಕಾರಣವಾಗಲಿದೆ. ನಾವು ಇಷ್ಟು ದೂರ ಯಶಸ್ವಿಯಾಗಿ ಸಾಗಿ ಬಂದಿದ್ದೇವೆ ಎಂಬುದನ್ನು ಹೇಳಲು ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ ಮತ್ತು ಮತ್ತು ಮುಂಬರುವ ವರ್ಷಗಳಲ್ಲಿ ನಾವು ಈ ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳುತ್ತೇವೆ ಎಂಬ ವಿಶ್ವಾಸ ನನಗಿದೆ," ಎಂದು ಸೌಮಿತ್ರ ಭಟ್ಟಾಚಾರ್ಯ ತಿಳಿಸಿದರು.

English summary

Bosch Q2 report: makes net profit of Rs 372 crore and income grew 17.88 per cent

Bosch Ltd, has posted a net profit of ₹372 crore on a standalone basis during the second quarter with income grew 17.88 per cent to ₹3,042.33 crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X