For Quick Alerts
ALLOW NOTIFICATIONS  
For Daily Alerts

ಹೆಚ್ಚಾಗಲಿದೆ ಪಾರ್ಲೆ, ಬ್ರಿಟಾನಿಯಾ ಬಿಸ್ಕೆಟ್ ಬೆಲೆ; SIZE ಕೂಡ ಕಡಿಮೆ

|

ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಪಾರ್ಲೆ, ಬ್ರಿಟಾನಿಯಾ ಬಿಸ್ಕೆಟ್ ಬೆಲೆ ಮುಂದಿನ 3-4 ತಿಂಗಳಿನಲ್ಲಿ ಏರಿಕೆಯಾಗಲಿದೆ. ಬೆಲೆ ಏರಿಕೆಯಾಗುವುದಷ್ಟೇ ಅಲ್ಲದೆ ಬಿಸ್ಕೆಟ್ ಗಾತ್ರದಲ್ಲೂ ಕಡಿಮೆ ಆಗಲಿದೆ.

 

ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಪಾರ್ಲೆ, ಬ್ರಿಟಾನಿಯಾ ಬಿಸ್ಕೆಟ್ ಕಂಪನಿಗಳು ಪ್ರಸ್ತುತ ಇರುವ ಬೆಲೆಯನ್ನು ಶೇಕಡಾ 6ರಷ್ಟು ಏರಿಕೆ ಮಾಡಲು ನಿರ್ಧರಿಸಿವೆ. ಜೊತೆಗೆ ಈಗಿರುವ ಬಿಸ್ಕೆಟ್ ಗಾತ್ರವನ್ನು ಕಡಿಮೆ ಮಾಡಲಿದೆ ಎಂದು ಸಿಎನ್‌ಬಿಸಿ ಟಿವಿ೧೮ ವರದಿ ಪ್ರಕಟಿಸಿದೆ. ಈ ವರ್ಷ ಮೊದಲ ಬಾರಿಗೆ ಬೆಲೆ ಏರಿಕೆಗೊಳ್ಳಲಿದೆ.

 
ಹೆಚ್ಚಾಗಲಿದೆ ಪಾರ್ಲೆ, ಬ್ರಿಟಾನಿಯಾ ಬಿಸ್ಕೆಟ್ ಬೆಲೆ; SIZE ಕೂಡ ಕಡಿಮೆ

ದೇಶದಲ್ಲಿರುವ ಆರ್ಥಿಕತೆ ಮಂದಗತಿಯ ಜೊತೆಗೆ, ಕಚ್ಚಾ ವಸ್ತುಗಳು ಬೆಲೆ ಏರಿಕೆ ಕಂಡಿದ್ದರಿಂದ ಬೆಲೆ ಏರಿಕೆ ಅನಿವಾರ್ಯ ಎಂಬ ತೀರ್ಮಾನಕ್ಕೆ ಕಂಪನಿಗಳು ಬಂದಿವೆ. ಗಾತ್ರವನ್ನೂ ಕುಗ್ಗಿಸುವ ಸಾಧ್ಯತೆ ಹೆಚ್ಚಿದ್ದು, ಈ ಕುರಿತು ಇನ್ನೂ ಅಂತಿಮ ನಿರ್ಧಾರವನ್ನು ಕಂಪನಿಗಳು ತೆಗೆದುಕೊಂಡಿಲ್ಲ.

16 ತಿಂಗಳ ಗರಿಷ್ಟ ಮಟ್ಟಕ್ಕೆ ತಲುಪಿದ ಚಿಲ್ಲರೆ ಹಣದುಬ್ಬರ16 ತಿಂಗಳ ಗರಿಷ್ಟ ಮಟ್ಟಕ್ಕೆ ತಲುಪಿದ ಚಿಲ್ಲರೆ ಹಣದುಬ್ಬರ

ಬಿಸ್ಕೆಟ್ ತಯಾರಿಕೆಗೆ ಬೇಕಿರುವ ಮೈದಾ, ಸಕ್ಕರೆ, ಅಡುಗೆ ಎಣ್ಣೆ ಬೆಲೆ ಏರಿಕೆ ಕಂಡಿರುವುದು ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಬ್ರಿಟಾನಿಯಾ ಮುಂದಿನ 3-4 ತಿಂಗಳಲ್ಲಿ ಬೆಲೆ ಮಾಡುವ ಸಾಧ್ಯತೆಯಿದ್ದು, ಪಾರ್ಲೆ ಜನವರಿ ತಿಂಗಳಿನಿಂದ ಮಾರ್ಚ್‌ ತಿಂಗಳೊಳಗೆ ಬೆಲೆ ಏರಿಸುವ ಸಾಧ್ಯತೆ ಹೆಚ್ಚಿದೆ.

ಪಾರ್ಲೆ ಕಂಪನಿಯು ಬಿಸ್ಕೆಟ್ ಮಾರಾಟದಲ್ಲಿ ಇಳಿಕೆಯ ಜೊತೆಗೆ, ಜಿಎಸ್‌ಟಿ ಪೂರ್ವ ತೆರಿಗೆಗಳಿಂದಾಗಿ 8 ರಿಂದ 10,000 ಉದ್ಯೋಗಿಗಳನ್ನು ವಜಾಗೊಳಿಸಬೇಕಾಗಬಹುದು ಎಂದು ಆಗಸ್ಟ್ ತಿಂಗಳಿನಲ್ಲಿ ಹೇಳಿತ್ತು. ಜೊತೆಗೆ ಮಾರಾಟವೂ ಶೇಕಡಾ 8-9 ರಷ್ಟು ಕುಸಿದಿದೆ ಎಂದು ಹೇಳಿದೆ.

English summary

Britannia, Parle May Hike Prices Over Next 3-4 Months

Biscuts makers parle and britannia may hike prices by 3 to 6 percent over next 3-4 months and also reduce biscuts sige.
Story first published: Friday, November 22, 2019, 18:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X