For Quick Alerts
ALLOW NOTIFICATIONS  
For Daily Alerts

ಕಸದ ಗುಂಡಿ ಪಾಲಾದ ರು. 1971 ಕೋಟಿಯ ಬಿಟ್ ಕಾಯಿನ್ ಗೆ ಮತ್ತೆ ಹುಡುಕಾಟ

By ಅನಿಲ್ ಆಚಾರ್
|

ಬಿಟ್ ಕಾಯಿನ್ ಬೆಲೆ ಗಗನಕ್ಕೆ ಚಿಮ್ಮುತ್ತಿದ್ದಂತೆ ಒಂದೊಂದಾಗಿ ವಿಚಿತ್ರ ವರದಿಗಳು ಬರುತ್ತಿವೆ. ಈಚೆಗೆ 1800 ಕೋಟಿ ರುಪಾಯಿ ಮೌಲ್ಯದ ಬಿಟ್ ಕಾಯಿನ್ ಹಾರ್ಡ್ ಡ್ರೈವ್ ಪಾಸ್ ವರ್ಡ್ ಕಳೆದುಕೊಂಡಿದ್ದ ವ್ಯಕ್ತಿ ಬಗ್ಗೆ ಸುದ್ದಿಯಾಗಿತ್ತು. ಇದೀಗ ಅಂಥದ್ದೇ ಇನ್ನೊಂದು ಸುದ್ದಿ ಬಂದಿದೆ.

ಆತನ ಹೆಸರು ಜೇಮ್ಸ್ ಹೊವೆಲ್ಸ್. ವೇಲ್ಸ್ ಮೂಲದ ಬ್ರಿಟಿಷ್ ಐಟಿ ನೌಕರ. 7500 ಬಿಟ್ ಕಾಯಿನ್ ಮಾಹಿತಿ ಇದ್ದ ಹಾರ್ಡ್ ಡ್ರೈವ್ ಅನ್ನು ಆತ 2013ರಲ್ಲಿ ಅಚಾನಕ್ಕಾಗಿ ಎಸೆದಿದ್ದರು. ಈಗ ಆ ಬಿಟ್ ಕಾಯಿನ್ ಹುಡುಕಾಟಕ್ಕೆ ಆತ ಸಿದ್ಧರಾಗಿದ್ದಾರೆ. ಒಂದು ವೇಳೆ ಅದು ಅವರಿಗೆ ಸಿಕ್ಕರೆ 27 ಕೋಟಿ ಅಮೆರಿಕನ್ ಡಾಲರ್ ಶ್ರೀಮಂತನಾಗುತ್ತಾರೆ. ಭಾರತದ ರುಪಾಯಿ ಲೆಕ್ಕದಲ್ಲಿ 1971 ಕೋಟಿಗೂ ಹೆಚ್ಚು ಮೊತ್ತ.

ಪಾಸ್ ವರ್ಡ್ ಮರೆತಿದ್ದಕ್ಕೆ ಈ ಆಸಾಮಿ ತೆರುತ್ತಿರುವ ಬೆಲೆ 1800 ಕೋಟಿ ರು.ಪಾಸ್ ವರ್ಡ್ ಮರೆತಿದ್ದಕ್ಕೆ ಈ ಆಸಾಮಿ ತೆರುತ್ತಿರುವ ಬೆಲೆ 1800 ಕೋಟಿ ರು.

ಆದ್ದರಿಂದ ನ್ಯೂಪೋರ್ಟ್ ನಗರ ಪಾಲಿಕೆಗೆ ಮನವಿ ಮಾಡಿರುವ ಆತ, ಕಸದ ಗುಂಡಿಯನ್ನು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

7 ಕೋಟಿ ಅಮೆರಿಕನ್ ಡಾಲರ್ ನ್ಯೂಪೋರ್ಟ್ ನಗರದ ನಿವಾಸಿಗಳಿಗೆ

7 ಕೋಟಿ ಅಮೆರಿಕನ್ ಡಾಲರ್ ನ್ಯೂಪೋರ್ಟ್ ನಗರದ ನಿವಾಸಿಗಳಿಗೆ

ಅಷ್ಟೇ ಅಲ್ಲ, ಅದು ಸಿಕ್ಕಲ್ಲಿ 7 ಕೋಟಿ ಅಮೆರಿಕನ್ ಡಾಲರ್ ನೀಡುವುದಾಗಿಯೂ ಹೆಳಿದ್ದಾರೆ. "ಒಂದು ವೇಳೆ ನಾನು ಬಿಟ್ ಕಾಯಿನ್ ಗಳನ್ನು ಹುಡುಕಲು ಸಫಲನಾದರೆ 7 ಕೋಟಿ ಅಮೆರಿಕನ್ ಡಾಲರ್ ಅನ್ನು ನ್ಯೂಪೋರ್ಟ್ ನಗರದ ಸ್ಥಳೀಯ ನಿವಾಸಿಗಳಿಗೆ ಹಂಚುವುದಕ್ಕೆ ನೀಡುವುದಾಗಿ ಹೇಳಿದ್ದೇನೆ," ಎಂದು ಮಾಧ್ಯಮಗಳಿಗೆ ಹೊವೆಲ್ಸ್ ತಿಳಿಸಿದ್ದಾರೆ. ಆದರೆ, ಹೊವೆಲ್ಸ್ ನೀಡಿದ ಈ ಆಫರ್ ಅನ್ನು ನಗರ ಪಾಲಿಕೆ ನಿರಾಕರಿಸಿದೆ. "ನಗರದಲ್ಲಿ ಉತ್ಖನನ ಮಾಡುವುದರಿಂದ ಸುತ್ತಲಿನ ಪರಿಸರದ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಆದ್ದರಿಂದ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹಲವು ಸಲ ಹೊವೆಲ್ಸ್ ಗೆ ಹೇಳಿದ್ದೇವೆ," ಎಂದು ನ್ಯೂಪೋರ್ಟ್ ನಗರ ಪಾಲಿಕೆ ವಕ್ತಾರ ತಿಳಿಸಿದ್ದಾರೆ.

2013ರ ಜೂನ್ ಹಾಗೂ ಆಗಸ್ಟ್ ಮಧ್ಯೆ ಹಾರ್ಡ್ ಡ್ರೈವ್ ಬಿಸಾಡಿದ್ದಾರೆ

2013ರ ಜೂನ್ ಹಾಗೂ ಆಗಸ್ಟ್ ಮಧ್ಯೆ ಹಾರ್ಡ್ ಡ್ರೈವ್ ಬಿಸಾಡಿದ್ದಾರೆ

ಕಸದ ಗುಂಡಿಯನ್ನು ಅಗೆಯುವುದಕ್ಕೆ, ಆ ನಂತರ ಅದನ್ನು ಸಂಗ್ರಹ ಮಾಡುವುದಕ್ಕೆ ಹಾಗೂ ತ್ಯಾಜ್ಯ ವಿಲೇವಾರಿಗೆ ಮಿಲಿಯನ್ ಗಟ್ಟಲೆ ಪೌಂಡ್ ಗಳು ಖರ್ಚಾಗುತ್ತವೆ. ಹುಡುಕಿದರೆ ಸಿಗುತ್ತದೆ ಎಂಬ ಖಾತ್ರಿ ಇಲ್ಲ ಅಥವಾ ಅದು ಸಿಕ್ಕರೂ ಕಾರ್ಯ ನಿರ್ವಹಿಸುವ ಸ್ಥಿತಿಯಲ್ಲಿರುತ್ತದೆಯೇ ಎಂಬ ಪ್ರಶ್ನೆ ಕೇಳಿದ್ದಾರೆ. ಬಿಟ್ ಕಾಯಿನ್ ಅನ್ನು ಹೊವೆಲ್ಸ್ ಸಂಗ್ರಹಿಸಲು ಆರಂಭಿಸಿದ್ದು 2009ರಲ್ಲಿ. ಆಗಿನ್ನೂ ಕ್ರಿಪ್ಟೋ ಮಾರುಕಟ್ಟೆಗೆ ಆರಂಭಿಕ ಹಂತ. ಡಿಜಿಟಲ್ ಕರೆನ್ಸಿ ಎಂಬುದು ಏನೇನೂ ಬೆಲೆಗೆ ಬರಲ್ಲ ಎಂಬಂಥ ಸ್ಥಿತಿ ಇತ್ತು. ಹೊವೆಲ್ಸ್ ಹಾರ್ಡ್ ಡ್ರೈವ್ ಬಿಸಾಡಿರುವುದು 2013ರ ಜೂನ್ ಹಾಗೂ ಆಗಸ್ಟ್ ಮಧ್ಯೆ. ತನಗೆ ಅಗತ್ಯ ಇರುವ ಫೈಲ್ ಬ್ಯಾಕ್ ಅಪ್ ಇದೆ ಅಂದುಕೊಂಡಿದ್ದರಂತೆ ಹೊವೆಲ್ಸ್.

 7500 ಬಿಟ್ ಕಾಯಿನ್- ಈಗ ಒಂದಕ್ಕೆ $ 36000

7500 ಬಿಟ್ ಕಾಯಿನ್- ಈಗ ಒಂದಕ್ಕೆ $ 36000

ಆಗ ಬಿಟ್ ಕಾಯಿನ್ $ 100ರ ಸಮೀಪ ಇತ್ತು. ಅದೀಗ $ 36000 ಇದೆ. ಹೊವೆಲ್ಸ್ ಹೀಗೆ ಪ್ರಯತ್ನಿಸುತ್ತಿರುವುದು ಇದೇ ಮೊದಲೇನಲ್ಲ. 2013ರಲ್ಲಿ ಬಿಟ್ ಕಾಯಿನ್ $ 100ರಿಂದ $ 1000ಕ್ಕೆ ಜಿಗಿದಾಗಲೂ ನ್ಯೂಪೋರ್ಟ್ ನಗರದ ಕಸದ ಗುಂಡಿಯ ಬಳಿ ತೆರಳಿದ್ದರು. ಇನ್ನು ಹಾರ್ಡ್ ಡ್ರೈವ್ ಸಿಗುವ ಸಾಧ್ಯತೆ ಇಲ್ಲ ಎಂದು ಬಿಬಿಸಿ ಮಾಧ್ಯಮಕ್ಕೆ ಕೂಡ ಹೇಳಿದ್ದರು. ಆದರೆ, ಈಗ ಗ್ರಿಡ್ ರೆಫರನ್ಸ್ ವ್ಯವಸ್ಥೆಯಲ್ಲಿ ನಿರ್ದಿಷ್ಟ ಸ್ಥಳವನ್ನು ಅಗೆಯುವ ಯೋಜನೆ ಅವರದು. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನೂ ತೆಗೆದುಕೊಂಡು, ಹಾರ್ಡ್ ಡ್ರೈವ್ ಹುಡುಕುವುದಾಗಿ ಹೇಳುತ್ತಾರೆ. ಹಾರ್ಡ್ ಡ್ರೈವ್ ಸಿಕ್ಕ ಮೇಲೆ ಅದನ್ನು ಡೇಟಾ ರೆಕವರಿ ತಜ್ಞರಿಗೆ ನೀಡಿ, ಮತ್ತೆ ಅದನ್ನು ಮೊದಲಿಂದ ರೂಪಿಸುವುದು ಹಾಗೂ ಆ ನಂತರ ಬಿಟ್ ಕಾಯಿನ್ಸ್ ಬಗ್ಗೆ ಇರುವ ಮಾಹಿತಿಯನ್ನು ತೆಗೆದುಕೊಳ್ಳುವುದು ಹೊವೆಲ್ಸ್ ಸದ್ಯದ ಗುರಿ.

English summary

British IT Worker Ready To Search Scavenger Where He Threw 7500 Bitcoin Hard Drive 8 Years Ago

James Howells, British IT worker now ready to search scavenger in New Port city, where threw 7500 bitcoins hard drive accidentally, 8 years ago.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X