BSNLನಿಂದ ಹೊಸ ಬ್ರಾಡ್ ಬ್ಯಾಂಡ್ ಪ್ಲ್ಯಾನ್: 299, 491 ರುಪಾಯಿ
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಹೊಸ ಬ್ರಾಡ್ ಬ್ಯಾಂಡ್ ಪ್ಲಾನ್ ಪ್ರಕಟಿಸಿದೆ. 299 ಮತ್ತು 491 ರುಪಾಯಿಗಳಿಂದ ಆರಂಭಗೊಳ್ಳುವ ಯೋಜನೆಗಳು ಗ್ರಾಹಕರಿಗೆ ಅನ್‌ಲಿಮಿಟೆಡ್ ಸೌಲಭ್ಯಗಳನ್ನು ನೀಡಲಿವೆ.
ಬಿಎಸ್ಎನ್‌ಎಲ್‌ನ ಹೊಸ ಯೋಜನೆಗಳು ಆರು ತಿಂಗಳ ವ್ಯಾಲಿಡಿಟಿ ಹೊಂದಿದ್ದು, ಈ ಯೋಜನೆಯಲ್ಲಿ ಗ್ರಾಹಕರಿಗೆ 20mbps ವೇಗದ ಇಂಟರ್‌ನೆಟ್ ಸಿಗಲಿದೆ. ಇಷ್ಟೇ ಅಲ್ಲದೆ ಈ ಯೋಜನೆ ಆಯ್ದುಕೊಳ್ಳುವ ಗ್ರಾಹಕರು ಲ್ಯಾಂಡ್ ಲೈನ್ ಮೂಲಕ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆ ಮಾಡಬಹುದಾಗಿದೆ.

299 ರುಪಾಯಿಗಳ ಯೋಜನೆಯಲ್ಲಿ 20mbps ವೇಗದ 50 ಜಿಬಿ ಡೇಟಾ ಡೇಟಾ ಹಾಗೂ ಲ್ಯಾಂಡ್‌ಲೈನ್‌ನಲ್ಲಿ ಅನ್‌ಲಿಮಿಟೆಡ್ ಕರೆಗಳ ಸೌಲಭ್ಯವಿದೆ. 491 ರುಪಾಯಿಗಳ ಯೋಜನೆಯಲ್ಲಿ 120 ಜಿಬಿ ಎಫ್.ಯು.ಪಿ ಲಿಮಿಟ್ ಡೇಟಾ ಸಿಗಲಿದೆ ಜೊತೆಗೆ ಅನ್‌ಲಿಮಿಟೆಡ್ ಕರೆ ಸೌಲಭ್ಯವಿದೆ. ಮೂರು ತಿಂಗಳ ಬಳಿಕ ಬಿಎಸ್‌ಎನ್‌ಎಲ್ ತನ್ನ 491 ರುಪಾಯಿಗಳ ಯೋಜನೆಯನ್ನು 3 GB ಸಿ.ಯು.ಎಲ್. ಬ್ರಾಡ್ ಬ್ಯಾಂಡ್ ಯೋಜನೆಗೆ ವರ್ಗಾವಣೆಗೊಳಿಸಲಿದೆ.
ಬಿಎಸ್‌ಎನ್‌ಎಲ್ ಇತ್ತೀಚೆಗಷ್ಟೇ 777 ರುಪಾಯಿಗಳ ಬ್ರಾಡ್ ಬ್ಯಾಂಡ್ ಯೋಜನೆಯನ್ನು ಮತ್ತೆ ಪರಿಚಯಿಸಿತ್ತು. ಇದರಲ್ಲಿ 50mbps ವೇಗದ 500 GB ಡೇಟಾ ಗ್ರಾಹಕರಿಗೆ ಲಭ್ಯವಾಗಲಿದೆ.