For Quick Alerts
ALLOW NOTIFICATIONS  
For Daily Alerts

ಲ್ಯಾಂಡ್ ಲೈನ್ ಫೋನ್ ನಲ್ಲಿ ಮಾತಾಡುವವರಿಗೇ ಕಾಸು ಕೊಡಲಿದೆ BSNL

|

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ BSNL (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ವಿಶಿಷ್ಟವಾದ ಯೋಜನೆಯೊಂದನ್ನು ಆರಂಭಿಸಿದೆ. ಇದು ಲ್ಯಾಂಡ್ ಲೈನ್ ಹಾಗೂ ಬ್ರ್ಯಾಡ್ ಬ್ಯಾಂಡ್ ಬಳಕೆದಾರರಿಗೆ ಮಾತ್ರ ಅನ್ವಯ ಆಗುತ್ತದೆ. ಏನು ಈ ವಿಶಿಷ್ಟ ಯೋಜನೆ ಅಂತೀರಾ? 5 ನಿಮಿಷದ ವಾಯ್ಸ್ ಕಾಲ್ ಮಾಡಿದರೆ ಬಿಎಸ್ ಎನ್ ಎಲ್ ನಿಂದಲೇ 6 ಪೈಸೆ ನೀಡಲಾಗುತ್ತದೆ.

 

ಹೌದು, ಸರಿಯಾಗಿಯೇ ಓದುತ್ತಾ ಇದ್ದೀರಾ. ಕರೆ ಮಾಡಿ, ಐದು ನಿಮಿಷ ಮಾತನಾಡಿದರೆ ಆರು ಪೈಸೆ ನೀಡುವ ಸ್ಕೀಂ ಇದು. ಭಾರತದಲ್ಲೇ ಇಂಥ ಯೋಜನೆ ಇದೇ ಮೊದಲ ಬಾರಿಗೆ ಪರಿಚಯ ಆಗುತ್ತದೆ. ಧ್ವನಿ ಕರೆಯನ್ನು ಮಾಡುವ ಗ್ರಾಹಕರಿಗೆ ಟೆಲಿಕಾಂ ಕಂಪೆನಿಯೇ ಹಣವನ್ನು ನೀಡುವ ವಿಶಿಷ್ಟ ಯೋಜನೆ ಇದು.

 

BSNL ಸಿಬ್ಬಂದಿಗೆ ವಿಆರ್ ಎಸ್ ಸ್ಕೀಂ ಶುರು; ಲೆಕ್ಕಾಚಾರ ಹೀಗೆ...BSNL ಸಿಬ್ಬಂದಿಗೆ ವಿಆರ್ ಎಸ್ ಸ್ಕೀಂ ಶುರು; ಲೆಕ್ಕಾಚಾರ ಹೀಗೆ...

ನೆನಪಿರಲಿ. ಇದು ಬಿಎಸ್ ಎನ್ ಎಲ್ ಮೊಬೈಲ್ ಗ್ರಾಹಕರಿಗೆ ಅನ್ವಯ ಆಗಲ್ಲ. ದೂರವಾಣಿ, ಬ್ರ್ಯಾಡ್ ಬ್ಯಾಂಡ್ ಮತ್ತು ಎಫ್ ಟಿಟಿಎಚ್ ಗ್ರಾಹಕರಿಗೆ ಮಾತ್ರ ಈ ಯೋಜನೆ. ಐವತ್ತೊಂದು ಪರ್ಸೆಂಟ್ ಮಾರ್ಕೆಟ್ ಷೇರು ಹೊಂದಿರುವ ಬಿಎಸ್ ಎನ್ ಎಲ್, ಭಾರತದಲ್ಲಿ ದೂರವಾಣಿ ಸೇವೆ ಒದಗಿಸುವ ಅತಿ ದೊಡ್ಡ ಸಂಸ್ಥೆ. ಇದೀಗ ತನ್ನ ಪಾರಮ್ಯ ಉಳಿಸಿಕೊಳ್ಳಲು ಈ ಪ್ರಯತ್ನಕ್ಕೆ ಮುಂದಾಗಿದೆ.

ಲ್ಯಾಂಡ್ ಲೈನ್ ಫೋನ್ ನಲ್ಲಿ ಮಾತಾಡುವವರಿಗೇ ಕಾಸು ಕೊಡಲಿದೆ BSNL

ಇದರಿಂದ ಜಿಯೋ ಗ್ರಾಹಕರನ್ನು ಬಿಎಸ್ ಎನ್ ಎಲ್ ದೂರವಾಣಿ ಬಳಸಲು ಸೆಳೆಯಬಹುದು ಎಂಬ ಲೆಕ್ಕಾಚಾರವೂ ಇದ್ದಂತಿದೆ. ಐಯುಸಿ ಶುಲ್ಕವನ್ನು ಭರಿಸುವ ಸಲುವಾಗಿ ಜಿಯೋ ಸಂಸ್ಥೆಯು, ಉಳಿದ ನೆಟ್ ವರ್ಕ್ ಗಳಿಗೆ ಮಾಡುವ ಕರೆಗೆ ಆರು ಪೈಸೆ ದರ ವಿಧಿಸುತ್ತಿದೆ.

English summary

BSNL Will Pay 6 Paise For 5 Minute Voice Call: Here Is The Details

State owned telecom operator BSNL will pay to it's customer 6 paise who made voice call of 5 minute. Here is the complete details.
Story first published: Thursday, November 7, 2019, 17:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X