ಬಜೆಟ್ 2021: ಕ್ರಿಕೆಟ್ ಬ್ಯಾಟ್‌ಗಳ ಮೇಲಿನ ಸುಂಕ ಕಡಿತಗೊಳ್ಳುವ ಸಾಧ್ಯತೆ
ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಗಬ್ಬಾದಲ್ಲಿ 32 ವರ್ಷಗಳ ಬಳಿಕ ಕಾಂಗರೂಗಳನ್ನು ಸೋಲಿಸಿ ಇತಿಹಾಸ ನಿರ್ಮಿಸಿತು. ಭಾರತದ ಈ ವಿಜಯವನ್ನು ಇಡೀ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಪ್ರಶಂಸಿಸಲಾಯಿತು. ಸದ್ಯದಲ್ಲೇ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಒಳ್ಳೆಯ ಸುದ್ದಿ ಸಿಗಬಹುದು.
ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ಕ್ರಿಕೆಟ್ ಬ್ಯಾಟ್‌ಗಳನ್ನು ಉತ್ಪಾದಿಸುವ ವಿಲೋದ ಆಮದು ಸುಂಕದ ಮೇಲೆ ಶೇಕಡಾ 50 ಪ್ರತಿಶತದಷ್ಟು ಕಡಿಮೆ ಮಾಡಬಹುದು.
ವಿಲೋಗಳ ಮೇಲಿನ ಆಮದು ಸುಂಕವನ್ನು ಸರ್ಕಾರ ಶೇಕಡಾ 10 ರಿಂದ 5ಕ್ಕೆ ಇಳಿಸಬಹುದು. ಆಮದು ಸುಂಕವನ್ನು ಕಡಿತಗೊಳಿಸಿದರೆ, ಇದು ಕ್ರಿಕೆಟ್ ಅನ್ನೇ ಜೀವನನ್ನಾಗಿಸಿಕಕೊಂಡಿರುವ ಅನೇಕ ಜನರಿಗೆ ಅನುಕೂಲವಾಗಲಿದೆ. ವಾಸ್ತವವಾಗಿ ಕಾಶ್ಮೀರದಿಂದ ವಿಲೋ ಖರೀದಿಸುವುದು ಕಷ್ಟಕರವಾಗಿದೆ, ಇಂಗ್ಲಿಷ್, ವಿಲೋಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಈಗ, ಆಮದು ಸುಂಕ ಕಡಿಮೆ ಇದ್ದರೆ, ತಯಾರಕರು ಹೆಚ್ಚಿನ ವಿಲೋಗಳನ್ನು ಆಮದು ಮಾಡಿಕೊಳ್ಳಲು ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಇಂಗ್ಲಿಷ್ ಮತ್ತು ಕಾಶ್ಮೀರಿ ವಿಲೋಗೆ ಬೇಡಿಕೆ
ವೃತ್ತಿಪರ ಕ್ರಿಕೆಟ್‌ನಲ್ಲಿ ಬಳಸುವ ಬ್ಯಾಟ್‌ಗಳನ್ನು ಸಾಮಾನ್ಯವಾಗಿ ಇಂಗ್ಲಿಷ್ ಅಥವಾ ಕಾಶ್ಮೀರಿ ವಿಲೋದಿಂದ ತಯಾರಿಸಲಾಗುತ್ತದೆ. ಎಸ್‌ಜಿ, ಎಸ್‌ಎಸ್, ಎಸ್‌ಎಫ್, ಎಂಆರ್‌ಪಿ ಪ್ರಮುಖ ಭಾರತೀಯ ಕ್ರಿಕೆಟ್ ಬ್ಯಾಟ್ ಬ್ರಾಂಡ್‌ಗಳಲ್ಲಿ ಸೇರಿವೆ. ಅವರು ಕೂಕಬೂರಾ, ಆಸ್ಟ್ರೇಲಿಯಾದ ಸ್ಪಾರ್ಟನ್‌ಸ್ ಮತ್ತು ಇಂಗ್ಲೆಂಡ್‌ನ ಗನ್ & ಮೂರ್, ಗ್ರೇ-ನಿಕೋಲ್ಸ್ ಕಂಪನಿಗಳೊಂದಿಗೆ ಸ್ಪರ್ಧಿಸುತ್ತದೆ.
2019-20ರಲ್ಲಿ ಭಾರತವು 1.17 ಮಿಲಿಯನ್ ವಿಲೋಗಳನ್ನು ಆಮದು ಮಾಡಿಕೊಂಡಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಬ್ರಿಟನ್‌ನಿಂದ ಬಂದಿದೆ. ಅದೇ ಸಮಯದಲ್ಲಿ, 14.4 ಮಿಲಿಯನ್ ಮೌಲ್ಯದ ಕ್ರಿಕೆಟ್ ಬ್ಯಾಟ್ ಮತ್ತು ಲೆಗ್ ಪ್ಯಾಡ್‌ಗಳನ್ನು ರಫ್ತು ಮಾಡಲಾಗಿದ್ದು, ಇದರಲ್ಲಿ ಯುಕೆ ಮತ್ತು ಆಸ್ಟ್ರೇಲಿಯಾ ಪ್ರಮುಖವಾಗಿವೆ.

ಆಮದು ದರ ಕಡಿಮೆಯಾಗಬಹುದು
ಆಮದು ಸುಂಕ ಕಡಿಮೆಯಾದರೆ ವಿಲೋ ಆಮದು ವೆಚ್ಚ ಕೂಡ ಕಡಿಮೆಯಾಗುತ್ತದೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಕ್ರೀಡಾ ಸರಕುಗಳ ರಫ್ತು ಪ್ರಚಾರ ಮಂಡಳಿಯು ಅನೇಕ ಕ್ರೀಡಾ ಸಾಮಗ್ರಿಗಳಿಗೆ ಘಟಕಗಳು ಮತ್ತು ಕಚ್ಚಾ ವಸ್ತುಗಳ ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರಕ್ಕೆ ಪ್ರಸ್ತಾಪಿಸಿದೆ. ವಿಶೇಷವಾಗಿ ರಫ್ತು ಮಾಡುವ ಉತ್ಪನ್ನಗಳಿಗೆ ಸುಂಕ ತಗ್ಗಿಸುವ ಸಾಧ್ಯತೆ ಇದೆ.

ಉದ್ಯೋಗವಕಾಶ ಹೆಚ್ಚಾಗಲಿದೆ
ಕ್ರಿಕೆಟ್ ಬ್ಯಾಟ್ ತಯಾರಿಕೆಗೆ ಉತ್ತೇಜನ ಹೆಚ್ಚಾದರೆ, ಉದ್ಯೋಗವೂ ಹೆಚ್ಚಾಗುತ್ತದೆ. ವಿಲೋ ಮರದಿಂದ ಸಿದ್ಧ ಮತ್ತು ಬ್ರಾಂಡ್ ಬ್ಯಾಟ್ ಅನ್ನು ಪ್ರಕ್ರಿಯೆಗೊಳಿಸಲು 8-9 ಹಂತಗಳನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ಕರಕುಶಲತೆ ಬೇಕಿದ್ದು, ಉತ್ತರ ಪ್ರದೇಶದವು ಪ್ರಮುಖ ಬ್ಯಾಟ್ ಉತ್ಪಾದನಾ ಕೇಂದ್ರಗಳಲ್ಲಿ ಒಂದಾದ ಮೀರತ್ ಬ್ಯಾಟ್‌ಗಳು ಬಹಳ ಪ್ರಸಿದ್ಧವಾಗಿದೆ.

ವ್ಯವಹಾರಕ್ಕೆ ಉತ್ತೇಜನ ಸಿಗುತ್ತದೆ
ಕ್ರಿಕೆಟ್ ಬ್ಯಾಟ್ ಉತ್ಪಾದನೆಗೆ ಹೆಚ್ಚಿನ ಅನುಕೂಲ ಮಾಡಿಕೊಡುವುದರಿಂದ ರಫ್ತು ಕೂಡ ಹೆಚ್ಚಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ವ್ಯಾಪಾರ ಒಪ್ಪಂದಕ್ಕೂ ಕಾರಣವಾಗಬಹುದು. ಇದರಿಂದ ಪ್ರತಿಸ್ಪರ್ಧಿ ಚೀನಾಕ್ಕೆ ಸವಾಲೊಡ್ಡಲು ಸಾಧ್ಯವಾಗುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.