For Quick Alerts
ALLOW NOTIFICATIONS  
For Daily Alerts

ಬಜೆಟ್‌ 2021: ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಆಮದು ಸುಂಕ ಹೆಚ್ಚಳ?

|

ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆಗಳ ಜೊತೆಗೆ ಯಾವೆಲ್ಲಾ ವಸ್ತುಗಳ ದುಬಾರಿಯಾಗಬಹುದು ಎಂಬ ಅಂದಾಜು ಕೂಡ ಹೆಚ್ಚಾಗಿದೆ. ಆರ್ಥಿಕ ವಿಶ್ಲೇಷಕರ ಪ್ರಕಾರ ಕೇಂದ್ರ ಸರ್ಕಾರವು 50ಕ್ಕೂ ಹೆಚ್ಚು ವಸ್ತುಗಳ ಮೇಲಿನ ಆಮದು ಸುಂಕ ಹೆಚ್ಚಳ ಮಾಡುವ ಸಾಧ್ಯತೆಯಿದೆ.

ಸ್ಮಾರ್ಟ್‌ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳ 50ಕ್ಕೂ ಹೆಚ್ಚು ವಸ್ತುಗಳ ಆಮದು ಸುಂಕವನ್ನು ಶೇಕಡಾ 5ರಿಂದ 10ರಷ್ಟು ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಬೆಂಬಲಿಸಲು ಹಾಗೂ ದೇಶೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಆಮದು ಸುಂಕ ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಇದರ ಜೊತೆಗೆ ಆದಾಯ ಹೆಚ್ಚಳದ ಕಡೆಗೂ ಸಹ ಗಮನವನ್ನು ಹರಿಸಿದೆ.

 ಬಜೆಟ್‌ 2021: ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಆಮದು ಸುಂಕ ಹೆಚ್ಚಳ?

 

ಸ್ಮಾರ್ಟ್‌ಫೋನ್, ರೆಫ್ರಿಜರೇಟರ್, ಏರ್‌ ಕಂಡೀಷನರ್, ಎಲೆಕ್ಟ್ರಾನಿಕ್ ಉಪಕರಣಗಳು, ಎಲೆಕ್ಟ್ರಿಕ್ ವಾಹನಗಳು, ಪೀಠೋಪಕರಣಗಳ ಆಮದು ವೆಚ್ಚದಲ್ಲಿ ಏರಿಕೆಯಾಗಲಿದೆ. ಇದರಿಂದ ಭಾರತದಲ್ಲಿ ನೆಲೆಯೂರಿರುವ ಮತ್ತು ನೆಲೆಯೂರಲು ಪ್ರಯತ್ನಿಸುತ್ತಿರುವ ವಿದೇಶಿ ಕಂಪನಿಗಳ ಮಾರುಕಟ್ಟೆ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.

English summary

Budget 2021: Govt Likely To Raise Import Duty On Electronic Goods

India is considering hiking import duties by 5%-10% on more than 50 items including smartphones, electronic components and appliances in the upcoming budget
Story first published: Tuesday, January 26, 2021, 10:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X