For Quick Alerts
ALLOW NOTIFICATIONS  
For Daily Alerts

ಬಜೆಟ್ 2021: ಕೇಂದ್ರ ಬಜೆಟ್ ಮೊಬೈಲ್ ಆಪ್ ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿ

|

ಈ ಹಿಂದೆ ಕಂಡರಿಯದ ಕ್ರಮದ ಭಾಗವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಳೆದ ವಾರ ಹಲ್ವಾ ಸಮಾರಂಭದ ವೇಳೆ "ಕೇಂದ್ರ ಬಜೆಟ್ ಮೊಬೈಲ್ ಆಪ್" ಆರಂಭಿಸಿದರು. ಈ ಮೂಲಕ ಸಂಸತ್ ಸದಸ್ಯರು ಈ ಬಾರಿ ಬಜೆಟ್ ದಾಖಲಾತಿಗಳನ್ನು ತಮ್ಮ ಮೊಬೈಲ್ ಫೋನ್ ಗಳ ಮೂಲಕವೇ ಪಡೆಯಬಹುದು.

 

ಈ ಹಿಂದಿನ ರೀತಿಯಲ್ಲಿ ಅಲ್ಲದೆ, ಕೋವಿಡ್- 19 ಹಿನ್ನೆಲೆಯಲ್ಲಿ ಬಜೆಟ್ ದಾಖಲಾತಿಗಳು ಈ ವರ್ಷ ಮುದ್ರಣ ಕಾಣುತ್ತಿಲ್ಲ. ಅದರ ಬದಲಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಸಂಸತ್ ಸದಸ್ಯರಿಗೆ ವಿತರಿಸಲಾಗುತ್ತದೆ. ಈ ದಾಖಲಾತಿಗಳು ಸಾರ್ವಜನಿಕರಿಗೂ ದೊರೆಯುತ್ತವೆ. ಹಣಕಾಸು ಸಚಿವಾಲಯ ಹೇಳಿಕೆ ನೀಡಿ, ಈ ಹಿಂದೆಂದೂ ಕಾಣದ ಹೆಜ್ಜೆ ಭಾಗವಾಗಿ ಕೇಂದ್ರ ಬಜೆಟ್ 2021- 22ರಲ್ಲಿ ಮೊದಲ ಬಾರಿಗೆ ಕಾಗದರಹಿತವಾಗಿ ಫೆಬ್ರವರಿ 1ರಂದು ಬಜೆಟ್ ಮಂಡಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

 

ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಏಕಿಷ್ಟು ಮಹತ್ವ?ಬಜೆಟ್ 2021: ಏನಿದು ಭಾರತದ ಆರ್ಥಿಕ ಸಮೀಕ್ಷೆ? ಏಕಿಷ್ಟು ಮಹತ್ವ?

ಬಜೆಟ್ ಅಪ್ಲಿಕೇಷನ್ ಬಳಕೆ ಮಾಡಬೇಕು ಎಂದಿದ್ದಲ್ಲಿ ನಿಮಗೆ ಗೊತ್ತಿರಬೇಕಾದ ಮಾಹಿತಿಗಳಿವು:

* ಆಪ್ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ?
ಕೇಂದ್ರ ಬಜೆಟ್ ವೆಬ್ ಪೋರ್ಟಲ್ www.indianbudget.gov.in ಮೂಲಕ ಅಪ್ಲಿಕೇಷನ್ ಅನ್ನು ಸುಲಭವಾಗಿ ಡೌನ್ ಲೋಡ್ ಮಾಡಬಹುದು. ಆಂಡ್ರಾಯಿಡ್ ಮತ್ತು ಐಒಎಸ್ ಎರಡೂ ಪ್ಲಾಟ್ ಫಾರ್ಮ್ ನಲ್ಲಿ ಡೌನ್ ಲೋಡ್ ಮಾಡಬಹುದು.

* ಈ ಅಪ್ಲಿಕೇಷನ್ ನಲ್ಲಿ ಯಾವ ದಾಖಲಾತಿಗಳು ಲಭ್ಯ ಇವೆ?
ಈ ಮೊಬೈಲ್ ಆಪ್ ನಿಂದ ಹದಿನಾಲ್ಕು ಕೇಂದ್ರ ಬಜೆಟ್ ದಾಖಲಾತಿ ದೊರೆಯುತ್ತದೆ. ಅದರಲ್ಲಿ ವಾರ್ಷಿಕ ಬಜೆಟ್, ಅನುದಾನದ ಬೇಡಿಕೆ (ಡಿಜಿ), ಹಣಕಾಸು ವಿಧೇಯಕ ಮುಂತಾದ ಸಂವಿಧಾನದಲ್ಲಿ ತಿಳಿಸಿರುವಂಥ ಮಾಹಿತಿ ದೊರೆಯುತ್ತದೆ.

* ಅಪ್ಲಿಕೇಷನ್ ದ್ವಿ ಭಾಷೆಯಲ್ಲಿದೆ
ಈ ಅಪ್ಲಿಕೇಷನ್ ಮೂಲಕ ದಾಖಲಾತಿಯು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ದೊರೆಯುತ್ತದೆ.

ಬಜೆಟ್ 2021: ಕೇಂದ್ರ ಬಜೆಟ್ ಮೊಬೈಲ್ ಆಪ್ ಬಗ್ಗೆ ಗೊತ್ತಿರಬೇಕಾದ ಸಂಗತಿ

* ಅಪ್ಲಿಕೇಷನ್ ನಲ್ಲಿ ವಿಶೇಷ ಫೀಚರ್
ದಾಖಲಾತಿಗಳು ಓದಲು ಹಾಗೂ ಅರ್ಥ ಮಾಡಿಕೊಳ್ಳಲು ಸರ್ಚ್, ಝೂಮ್ ಇನ್ ಮತ್ತು ಔಟ್ ಸೇರಿದಂತೆ ಇತರ ಫೀಚರ್ ಗಳಿವೆ. ಒಂದು ವೇಳೆ ಬೇಕೆಂದಲ್ಲಿ ದಾಖಲಾತಿಯ ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು.

* ಅಪ್ಲಿಕೇಷನ್ ನಲ್ಲಿ ದಾಖಲಾತಿಗಳು ಯಾವಾಗ ಸಿಗುತ್ತವೆ?
ಫೆಬ್ರವರಿ 1, 2021ರಂದು ಸಂಸತ್ ನಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಮುಗಿದ ನಂತರ ಮೊಬೈಲ್ ಆಪ್ ನಲ್ಲಿ ಬಜೆಟ್ ದಾಖಲಾತಿಗಳು ಸಿಗುತ್ತದೆ. ಈ ಹಿಂದೆಲ್ಲ ಬಜೆಟ್ ದಾಖಲಾತಿಗಳ ಮುದ್ರಣಕ್ಕೆ ಮುನ್ನ ಹಲ್ವಾ ಕಾರ್ಯಕ್ರಮ ಮಾಡಲಾಗುತ್ತಿತ್ತು. ಸ್ವತಂತ್ರ ಭಾರತದ ಮೊದಲ ಬಜೆಟ್ ನವೆಂಬರ್ 26, 1947ರಿಂದ ಇದು ನಡೆದುಬಂದಿತ್ತು. ಬಜೆಟ್ ದಾಖಲೆಯಲ್ಲಿ ಕೇಂದ್ರ ಸರ್ಕಾರದ ಆದಾಯ- ವೆಚ್ಚ, ಹಣಕಾಸು ವೆಚ್ಚ, ಹೊಸ ತೆರಿಗೆಗಳ ಮಾಹಿತಿ, ಹೊಸ ಹಣಕಾಸು ವರ್ಷಕ್ಕೆ ಇತರ ಮಾಹಿತಿ ಇರುತ್ತದೆ. ಆ ದಾಖಲಾತಿ ಈ ವರ್ಷ ಫಿಸಿಕಲ್ ಆಗಿ ಮುದ್ರಣವಾಗಲ್ಲ.

English summary

Budget 2021: Must Know Facts About Union Budget Mobile App

Here is the must know details about union budget 2021 mobile app. Which helps you to download, understand and get details of previous budgets.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X