For Quick Alerts
ALLOW NOTIFICATIONS  
For Daily Alerts

Economic Survey: 2023ರ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ಶೇ.8-8.5 ನಿರೀಕ್ಷೆ

|

2021-22 ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡನೆ ಮಾಡಿದ್ದಾರೆ. ಈ ಆರ್ಥಿಕ ಸಮೀಕ್ಷೆಯಲ್ಲಿ 2023ರ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ದರವನ್ನು ಶೇ.8-8.5 ಎಂದು ಅಂದಾಜು ಮಾಡಲಾಗಿದ್ದು, 2022ನೇ ಸಾಲಿನಲ್ಲಿ ದೇಶದ ಜಿಡಿಪಿ ಶೇ. 9.2 ಪ್ರಗತಿ ದಾಖಲಿಸುವ ನಿರೀಕ್ಷೆ ವ್ಯಕ್ತಪಡಿಸಿದೆ.

ಇನ್ನು 2022ನೇ ಸಾಲಿನಲ್ಲಿ ದೇಶದಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆ ದರ ಶೇಕಡ 3.9 ಹಾಗೂ ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ದರ ಶೇಕಡ 11.8 ಆಗಿರಲಿದೆ ಎಂದು ಆರ್ಥಿಕ ಸಮೀಕ್ಷೆಯು ಅಂದಾಜು ಮಾಡಿದೆ. ವಿಶ್ವಬ್ಯಾಂಕ್ ಪ್ರಕಾರ ಭಾರತವು ಸುಮಾರು ಶೇಕಡ 8.7ರಷ್ಟು ಜಿಡಿಪಿ ಬೆಳವಣಿಗೆ ಹೊಂದುವ ನಿರೀಕ್ಷೆ ಇದೆ. ಆದರೆ ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷೆಯು 2023ರ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ದರವನ್ನು ಶೇ.8-8.5 ಎಂದು ಅಂದಾಜು ಮಾಡಿದೆ.

ಬಜೆಟ್ 2022: ಹಣಕಾಸು ಸಚಿವೆ ಮಂಡನೆ ಮಾಡುವ ಆರ್ಥಿಕ ಸಮೀಕ್ಷೆ ಬಗ್ಗೆ ಮಾಹಿತಿ ಇಲ್ಲಿದೆಬಜೆಟ್ 2022: ಹಣಕಾಸು ಸಚಿವೆ ಮಂಡನೆ ಮಾಡುವ ಆರ್ಥಿಕ ಸಮೀಕ್ಷೆ ಬಗ್ಗೆ ಮಾಹಿತಿ ಇಲ್ಲಿದೆ

ಸೇವಾ ವಲಯ 2022ನೇ ಸಾಲಿನಲ್ಲಿ ಶೇ.8.2ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂಬ ನಿರೀಕ್ಷೆಯನ್ನು ಆರ್ಥಿಕ ಸಮೀಕ್ಷೆ ವ್ಯಕ್ತಪಡಿಸಿದೆ. ಭಾರತವು ಬಂಡವಾಳ ವೆಚ್ಚವನ್ನು ನಿಭಾವಣೆ ಮಾಡಬಲ್ಲಷ್ಟು ಸದೃಢವಾದ ಆರ್ಥಿಕತೆಯನ್ನು ಹೊಂದಿದೆ ಎಂದು ಕೂಡಾ ಆರ್ಥಿಕ ಸಮೀಕ್ಷೆಯು ಉಲ್ಲೇಖ ಮಾಡಿದೆ.

 2023ರ ಸಾಲಿನಲ್ಲಿ ಜಿಡಿಪಿ ಬೆಳವಣಿಗೆ ಶೇ.8-8.5 ನಿರೀಕ್ಷೆ

ಏನಿದು ಆರ್ಥಿಕ ಸಮೀಕ್ಷೆ?

ಮೊದಲ ಆರ್ಥಿಕ ಸಮೀಕ್ಷೆಯನ್ನು 1950-51 ರಲ್ಲಿ ಮಂಡಿಸಲಾಯಿತು. 1964 ರಿಂದ, ಕೇಂದ್ರ ಬಜೆಟ್‌ಗೆ ಒಂದು ದಿನ ಮೊದಲು ಸಮೀಕ್ಷೆಯನ್ನು ಬಿಡುಗಡೆ ಮಾಡುವ ಅಭ್ಯಾಸ ಪ್ರಾರಂಭವಾಗಿದೆ. ಆರ್ಥಿಕ ಸಮೀಕ್ಷೆಯನ್ನು ಪ್ರತಿ ಬಾರಿಯು ಕೇಂದ್ರ ಬಜೆಟ್‌ ಮಂಡನೆಯ ಒಂದು ದಿನ ಮೊದಲು ಮಂಡಿಸಲಾಗುತ್ತದೆ. ಇದು ಕಳೆದ ಒಂದು ವರ್ಷದಲ್ಲಿ ಆರ್ಥಿಕತೆಯ ಸ್ಥಿತಿ, ಆರ್ಥಿಕತೆಗೆ ಇರುವ ಪ್ರಮುಖ ಸವಾಲುಗಳು ಮತ್ತು ಅವುಗಳ ಪರಿಹಾರದ ಬಗ್ಗೆ ವಿವರಣೆಯನ್ನು ಹೊಂದಿರುತ್ತದೆ.

2021-22ರ ಸಮೀಕ್ಷೆಯು ಹಿಂದಿನ 12 ತಿಂಗಳ ಅವಧಿಯಲ್ಲಿ ಭಾರತೀಯ ಆರ್ಥಿಕತೆಯ ಪ್ರಗತಿಯ ಅಂದಾಜನ್ನು ಪ್ರಸ್ತುತಪಡಿಸುತ್ತದೆ. ಸಮೀಕ್ಷೆಯಿಂದ ಹೊರಡಿಸಲಾದ ಮುನ್ಸೂಚನೆಗಳು, ಅವುಗಳಿಗೆ ಉಲ್ಲೇಖಿಸಲಾದ ಕಾರಣಗಳು ಆರ್ಥಿಕ ವಿಶ್ಲೇಷಕರಲ್ಲಿ ಚರ್ಚೆಗೆ ಕಾರಣವಾಗುತ್ತದೆ. ಆರ್ಥಿಕ ಸಮೀಕ್ಷೆಯ ಪರಿಶೀಲನೆಯಲ್ಲಿ ಸರ್ಕಾರವು ಜಾರಿಗೆ ತಂದ ಯೋಜನೆಗಳು ಮತ್ತು ನೀತಿಗಳ ವಿವರಗಳು ಮತ್ತು ಫಲಿತಾಂಶಗಳನ್ನು ಸಮೀಕ್ಷೆಯು ಒಳಗೊಂಡಿರುತ್ತದೆ. ಇದಲ್ಲದೆ, ಸಮೀಕ್ಷೆಯು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಯ ಕುರಿತು ಸುಳಿವು ನೀಡುತ್ತದೆ.

ಬಜೆಟ್ ಮುನ್ನಾ ದಿನ ಪಾಸಿಟಿವ್ ಆಗಿ ಷೇರುಪೇಟೆ ಆರಂಭಬಜೆಟ್ ಮುನ್ನಾ ದಿನ ಪಾಸಿಟಿವ್ ಆಗಿ ಷೇರುಪೇಟೆ ಆರಂಭ

ಆರ್ಥಿಕತೆಯ ಮೇಲೆ ಸಾಂಕ್ರಾಮಿಕ ರೋಗದ ಪರಿಣಾಮಗಳನ್ನು ತೀಕ್ಷ್ಣವಾಗಿ ಕೇಂದ್ರೀಕೃತವಾಗಿದೆ. ಈ ಸೂಚಕಗಳಲ್ಲಿ ಕೃಷಿ ಉತ್ಪಾದನೆ, ಕಾರ್ಖಾನೆ ಉತ್ಪಾದನೆ, ವಿದೇಶಿ ವ್ಯಾಪಾರ, ಹಣದುಬ್ಬರ, ಉದ್ಯೋಗಗಳು ಇತ್ಯಾದಿಗಳು ಸೇರಿವೆ. ಕೊರೊನಾವೈರಸ್‌ನಿಂದಾಗಿ ಆರ್ಥಿಕತೆಯ ಮೇಲೆ ಆಗಿರುವ ಹಾನಿ ಕುರಿತಾಗಿ ಅಧಿಕೃತವಾಗಿ ಅಂಕಿ-ಅಂಶಗಳನ್ನು ಹೊರಗಿಡಬಹುದಾಗಿದ್ದು, ಇದಕ್ಕೆ ಪರಿಹಾರ ಪ್ಯಾಕೇಜ್ ಘೋಷಣೆ ಬಗ್ಗೆ ಕೂಡಾ ಸೂಚನೆ ಸಿಗಲಿದೆ.

ಎಲ್ಲಾ ಆರ್ಥಿಕ ಸಮೀಕ್ಷೆಗಳು https://www.indiabudget.gov.in/economicsurvey/ ನಲ್ಲಿ ಲಭ್ಯವಾಗಲಿದೆ. ಸೈಟ್‌ನಿಂದ ಕಳೆದ ವರ್ಷದ ಆರ್ಥಿಕ ಸಮೀಕ್ಷೆಯನ್ನು ಸಹ ಖರೀದಿಸಬಹುದು. ಆರ್ಥಿಕ ಸಮೀಕ್ಷೆಯು ಸಾಮಾನ್ಯವಾಗಿ ಸಂಪುಟ 1 ಮತ್ತು ಸಂಪುಟ 2 ಎಂಬ ಎರಡು ಭಾಗಗಳನ್ನು ಒಳಗೊಂಡಿರುತ್ತದೆ. ಮೊದಲ ಸಂಪುಟವು ಈ ವರ್ಷ ಚಾಲ್ತಿಯಲ್ಲಿ ನೀತಿ ಸಲಹೆಗಳನ್ನು ಒಳಗೊಂಡಿದೆ. 2 ನೇ ಸಂಪುಟವು ಆರ್ಥಿಕತೆಯ ವಲಯ ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ. ಆದರೆ ಈ ವರ್ಷ ಮುಖ್ಯ ಆರ್ಥಿಕ ಸಲಹೆಗಾರರ ನೀತಿ ಸಲಹೆಗಳನ್ನು ಒಳಗೊಂಡಿರುವ ಮೊದಲ ಸಂಪುಟ ಇರುವುದಿಲ್ಲ. ನೂತನ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ಇಂದು ಮಧ್ಯಾಹ್ನ 3.45 ಕ್ಕೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಆರ್ಥಿಕ ಸಮೀಕ್ಷೆ 2021-22 ಕುರಿತು ಮಾಹಿತಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಆರ್ಥಿಕ ಸಮೀಕ್ಷೆಯ ಬಗ್ಗೆ ಸಂಪೂರ್ಣ ವಿವರ ಲಭ್ಯವಾಗಲಿದೆ.

English summary

Budget 2022: Real GDP Growth Of 8-8.5 Per Cent In FY23, Economic Survey Predicts

Budget 2022: Real GDP Growth Of 8-8.5 Per Cent In FY23, Economic Survey Predicts.
Story first published: Monday, January 31, 2022, 14:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X