For Quick Alerts
ALLOW NOTIFICATIONS  
For Daily Alerts

Budget 2023 Date and Time: ಕೇಂದ್ರ ಬಜೆಟ್ ಸಮಯ, ದಿನಾಂಕ, ಇಲ್ಲಿದೆ ವಿವರ

|

ಬಜೆಟ್ ಎಂಬುವುದು ಪ್ರತಿ ವರ್ಷವೂ ಕೂಡಾ ಅತೀ ಮುಖ್ಯವಾದ ಘಟ್ಟವಾಗಿದೆ. ಈ ವರ್ಷವೂ ಕೂಡಾ ಕೇಂದ್ರ ಬಜೆಟ್‌ಗಾಗಿ ಎಲ್ಲ ವಲಯಗಳು ಕಾತುರವಾಗಿ ಕಾದಿದೆ. ಬಜೆಟ್ ಎಂಬುವುದು ಬರೀ ಸರ್ಕಾರದ ಹಣಕಾಸಿನ ಲೆಕ್ಕಾಚಾರ ಮಾತ್ರವಲ್ಲ, ಮುಂದಿನ ಹಣಕಾಸು ವರ್ಷದಲ್ಲಿ ಸರ್ಕಾರವು ಯಾವ ರೀತಿ ಕಾರ್ಯನಿರ್ವಹಣೆ ಮಾಡಲಿದೆ, ಆರ್ಥಿಕ ಯೋಜನೆಗಳು ಯಾವ ರೀತಿ ಇರಲಿದೆ ಎಂಬುವುದರ ಮಂಡನೆಯಾಗಿದೆ.

 

ಅಷ್ಟಕ್ಕೂ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಿದರೆ, ನಮ್ಮ ಮೇಲೆ ಏನು ಪ್ರಭಾವ ಎಂದು ನೀವು ಅಂದುಕೊಳ್ಳಬಹುದು. ಆದರೆ ನಾವು ಮಾಸಿಕವಾಗಿ ಸಂಬಳ ನಿರ್ವಹಣೆಗೆ ಮಾಡುವ ಬಜೆಟ್ ಹೇಗೆ ನಮ್ಮ ಮೇಲೆ ಪರಿಣಾಮ ಬೀರುತ್ತದೆಯೋ, ಹಾಗೆಯೇ ಕೇಂದ್ರವಾಗಲಿ ರಾಜ್ಯ ಸರ್ಕಾರವಾಗಲಿ ಮಂಡಿಸುವ ಬಜೆಟ್ ಪ್ರತಿಯೋರ್ವ ನಾಗರಿಕರ ಮೇಲೆ ಪ್ರಭಾವ ಉಂಟು ಮಾಡಲಿದೆ.

ಪ್ರತಿ ವರ್ಷವೂ ಕೂಡಾ ಸಂಸತ್ತಿನಲ್ಲಿ ಬಜೆಟ್ ಮಂಡನೆ ಮಾಡಲಾಗುತ್ತದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವರ್ಷದಲ್ಲಿ 2022-23 ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದರು. ಈ ವರ್ಷ ಯಾವ ದಿನ ಕೇಂದ್ರ ಬಜೆಟ್ ಇರಲಿದೆ, ಯಾರು ಮಂಡನೆ ಮಾಡಲಿದ್ದಾರೆ, ಎಷ್ಟು ಗಂಟೆಗೆ ಕೇಂದ್ರ ಬಜೆಟ್ ಅನ್ನು ಮಂಡಿಸಲಾಗುತ್ತದೆ, ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಬಜೆಟ್ ಮಂಡನೆ ಯಾವಾಗ?

ಬಜೆಟ್ ಮಂಡನೆ ಯಾವಾಗ?

ಪ್ರತಿ ವರ್ಷವೂ ಕೂಡಾ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡನೆ ಮಾಡಲಾಗುತ್ತದೆ. 2023-24ನೇ ಸಾಲಿನ ಬಜೆಟ್ ಅನ್ನು ಕೂಡಾ ಫೆಬ್ರವರಿ ಒಂದರಂದು ಮಂಡನೆ ಮಾಡಲಾಗುತ್ತದೆ. ಬಜೆಟ್ ಸೆಷನ್ ಆರಂಭವಾದಾಗ ಬಜೆಟ್ ಅನ್ನು ಮಂಡಿಸಲಾಗುತ್ತದೆ. ಈ ವರ್ಷ ಬಜೆಟ್ ಸೆಷನ್ ಜನವರಿ 31ರಿಂದ ಆರಂಭವಾಗುವ ನಿರೀಕ್ಷೆಯಿದೆ. ಬಜೆಟ್ ಸೆಷನ್ ಫೆಬ್ರವರಿ 6ರವರೆಗೆ ನಡೆಯಲಿದೆ. 2016ರಿಂದ ಬಜೆಟ್ ಸೆಷನ್ ಫೆಬ್ರವರಿ 1ರಂದು ನಡೆಸಲಾಗುತ್ತದೆ.

 ಯಾರು ಬಜೆಟ್ ಅನ್ನು ಮಂಡಿಸುತ್ತಾರೆ?

ಯಾರು ಬಜೆಟ್ ಅನ್ನು ಮಂಡಿಸುತ್ತಾರೆ?

ಈ ಹಿಂದಿನ ವರ್ಷದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಇದು ಸತತ ಐದನೇ ಬಾರಿಗೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಿರುವುದಾಗಿದೆ. 2022ರಲ್ಲಿ ಸುಮಾರು 1.5 ಗಂಟೆಗಳ ಕಾಲ ಬಜೆಟ್ ಅನ್ನು ಮಂಡಿಸಿದ್ದಾರೆ. ಅದಕ್ಕೂ ಮುನ್ನ 2021ರಲ್ಲಿ ಬಜೆಟ್ ಮಂಡನೆಯಲ್ಲಿ ನಿರ್ಮಲಾ ಸೀತಾರಾಮನ್ ದಾಖಲೆ ಸೃಷ್ಟಿಸಿದ್ದಾರೆ. ಸುಮಾರು 2 ಗಂಟೆ 40 ನಿಮಿಷದವರೆಗೆ ಬಜೆಟ್ ಮಂಡಿಸಿದ್ದರು. ಬಜೆಟ್ ಮಂಡನೆಯ ಸರಾಸರಿ ಅವಧಿ 1.5 ಗಂಟೆಯಿಂದ 2 ಗಂಟೆಯಾಗಿದೆ.

 ಆರ್ಥಿಕ ಸಮೀಕ್ಷೆ ಮಂಡನೆ
 

ಆರ್ಥಿಕ ಸಮೀಕ್ಷೆ ಮಂಡನೆ

ಬಜೆಟ್ ಮಂಡನೆಗೂ ಮುಂಚಿನ ದಿನ ಅಂದರೆ ಜನವರಿ 31ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಯ ವರದಿಯನ್ನು ಪ್ರಸ್ತುತಪಡಿಸಲಿದ್ದಾರೆ. ಇದು ಆರ್ಥಿಕ ಸಮೀಕ್ಷೆ ಮಂಡನೆ ವೇಳೆ ಜಿಡಿಪಿ ಬೆಳವಣಿಗೆ ದರವನ್ನು ಅಂದಾಜಿಸಲಾಗುತ್ತದೆ. ಕಳೆದ ವರ್ಷ ಹಣಕಾಸು ವರ್ಷ 2023ರ ಜಿಡಿಪಿ ಬೆಳವಣಿಗೆ ಅಂದಾಜು ಶೇ.8-8.5 ಎಂದು ಉಲ್ಲೇಖ ಮಾಡಿದೆ. ಎಲ್ಲಾ ಆರ್ಥಿಕ ಸಮೀಕ್ಷೆಗಳು https://www.indiabudget.gov.in/economicsurvey/ ನಲ್ಲಿ ಲಭ್ಯವಿದೆ. ಸೈಟ್‌ನಿಂದ ಕಳೆದ ವರ್ಷದ ಆರ್ಥಿಕ ಸಮೀಕ್ಷೆಯನ್ನು ಸಹ ಖರೀದಿಸಬಹುದು. ಮೊದಲ ಆರ್ಥಿಕ ಸಮೀಕ್ಷೆಯನ್ನು 1950-51 ರಲ್ಲಿ ಮಂಡಿಸಲಾಯಿತು. 1964 ರಿಂದ, ಕೇಂದ್ರ ಬಜೆಟ್‌ಗೆ ಒಂದು ದಿನ ಮೊದಲು ಸಮೀಕ್ಷೆಯನ್ನು ಬಿಡುಗಡೆ ಮಾಡುವ ಅಭ್ಯಾಸ ಪ್ರಾರಂಭವಾಗಿದೆ. ಆರ್ಥಿಕ ಸಮೀಕ್ಷೆಯು ಸಾಮಾನ್ಯವಾಗಿ ಸಂಪುಟ 1 ಮತ್ತು ಸಂಪುಟ 2 ಎಂಬ ಎರಡು ಭಾಗಗಳನ್ನು ಒಳಗೊಂಡಿರುತ್ತದೆ. ಮೊದಲ ಸಂಪುಟವು ಈ ವರ್ಷ ಚಾಲ್ತಿಯಲ್ಲಿ ನೀತಿ ಸಲಹೆಗಳನ್ನು ಒಳಗೊಂಡಿರುತ್ತದೆ. 2 ನೇ ಸಂಪುಟವು ಆರ್ಥಿಕತೆಯ ವಲಯ ವಿಶ್ಲೇಷಣೆಯನ್ನು ಒಳಗೊಂಡಿರುತ್ತದೆ.

English summary

Budget 2023: Date, Time, Who Will Present And How Is It Prepared; Know details in Kannada

Budget 2023: Date, Time, Who Will Present And How Is It Prepared? All You Need To Know about Union Budget 2023 in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X