For Quick Alerts
ALLOW NOTIFICATIONS  
For Daily Alerts

Budget 2023: ಬಜೆಟ್‌ಗೂ ಮುನ್ನ ಈ ಸ್ಟಾಕ್ಸ್ ಖರೀದಿಸಲು ತಜ್ಞರ ಸಲಹೆ

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ 1, 2023ರಂದು ಮಂಡಿಸಲಿದ್ದಾರೆ. ಈ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳು ಇದೆ. ಈ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕೆ ಅಧಿಕ ಗಮನ ನೀಡುವ ಸಾಧ್ಯತೆಯಿದೆ. ಏತನ್ಮಧ್ಯೆ ತಜ್ಞರು ಕೇಂದ್ರ ಬಜೆಟ್‌ಗೂ ಮುನ್ನ ಮುಂದಿನ ವಾರ ಕೆಲವೊಂದು ಪ್ರಮುಖ ಸ್ಟಾಕ್‌ಗಳನ್ನು ಖರೀದಿ ಮಾಡಲು ಸಲಹೆ ನೀಡಿದೆ.

2024ರ ಚುನಾವಣೆಗೂ ಮುನ್ನ ನಡೆಯುವ ಬಜೆಟ್ ಇದಾದ ಕಾರಣ ಈ ಬಜೆಟ್‌ ಜನರ ಮೇಲೆ, ಮೂಲಸೌಕರ್ಯ ಒದಗಿಸುವ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಲಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ. ಮೂಲಸೌಕರ್ಯ ವಲಯದ ಮೇಲೆ ಅಧಿಕ ಗಮನ ಹರಿಸುವ ಕಾರಣದಿಂದಾಗಿ ಕೆಲವು ನಿಗದಿತ ಸ್ಟಾಕ್‌ಗಳು ಮುಂದಿನ 3-4 ತ್ರೈಮಾಸಿಕದಲ್ಲಿ ಅಧಿಕ ಬೆಳವಣಿಗೆ ಹೊಂದುವ ಸಾಧ್ಯತೆಯಿದೆ.

Budget 2023 Expectations: ತೆರಿಗೆ, ಉದ್ಯೋಗ, ಮಧ್ಯಮ ವರ್ಗದ ಬಜೆಟ್‌ ನಿರೀಕ್ಷೆಗಳೇನು?Budget 2023 Expectations: ತೆರಿಗೆ, ಉದ್ಯೋಗ, ಮಧ್ಯಮ ವರ್ಗದ ಬಜೆಟ್‌ ನಿರೀಕ್ಷೆಗಳೇನು?

ಚುನಾವಣೆಗೂ ಮುನ್ನ ಬರುವ ಈ ಬಜೆಟ್‌ ಹೆಚ್ಚಾಗಿ ಜನರಿಗೆ ಸಹಾಯ ಮಾಡುವ ಬಗ್ಗೆ ಕೇಂದ್ರಿತವಾಗಿರಲಿದೆ ಎಂಬುವುದರಲ್ಲಿ ಅನುಮಾನವಿಲ್ಲ. ಆದರೆ ಚತುರ ಹೂಡಿಕೆದಾರರು ಯಾವಾಗಲೂ ಚಿಂತನೆ ನಡೆಸಿಯೇ ಹೂಡಿಕೆ ಮಾಡುತ್ತಾರೆ ಎಂದು ಹೇಳಿರುವ ತಜ್ಞರು, ಮುಂದಿನ ವಾರದಲ್ಲಿ, ಬಜೆಟ್‌ಗೂ ಮುನ್ನ ಪ್ರಮುಖ 5 ಸ್ಟಾಕ್ಸ್‌ಗಳ ಮೇಲೆ ಹೂಡಿಕೆ ಮಾಡಲು ಸಲಹೆ ನೀಡಿದ್ದಾರೆ.

 ಯಾವೆಲ್ಲ ಸ್ಟಾಕ್ಸ್‌ಗಳಲ್ಲಿ ಹೂಡಿಕೆ ಮಾಡಲು ಸಲಹೆ?

ಯಾವೆಲ್ಲ ಸ್ಟಾಕ್ಸ್‌ಗಳಲ್ಲಿ ಹೂಡಿಕೆ ಮಾಡಲು ಸಲಹೆ?

ಹೂಡಿಕೆದಾರರು ಪ್ರಮುಖವಾಗಿ ಎನ್‌ಸಿಸಿ, ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್, ಕ್ಯೂಮಿನ್ಸ್ ಇಂಡಿಯಾ, ಎಲ್‌&ಟಿ ಮೊದಲಾದ ಸ್ಟಾಕ್‌ಗಳೆಡೆ ಗಮನ ಹರಿಸಲು ತಿಳಿಸಿದ್ದಾರೆ. 2023ರ ಬಜೆಟ್‌ಗೂ ಮುನ್ನ ಈ ಸ್ಟಾಕ್‌ಗಳನ್ನು ಖರೀದಿಸುವುದು ಉತ್ತಮ ಎಂದು ಹೇಳಿದ್ದಾರೆ. ಹಾಗೆಯೇ ಪ್ರಮುಖವಾಗಿ ಇನ್‌ಫ್ರಾ ಸ್ಟಾಕ್‌ಗಳನ್ನೇ ಯಾಕೆ ಖರೀದಿ ಮಾಡಬೇಕು ಎಂದು ತಿಳಿಸಿದ್ದಾರೆ. ಈ ಸ್ಟಾಕ್‌ಗಳು ಮುಂದಿನ 3-4 ತ್ರೈಮಾಸಿಕಗಳು ಲಾಭವನ್ನೇ ತರಲಿದೆ ಎಂದು ತಿಳಿಸಿದ್ದಾರೆ. ಇನ್ನು 2023ರಲ್ಲಿ ಯಾವೆಲ್ಲ ಸ್ಟಾಕ್‌ಗಳು ಖರೀದಿ ಮಾಡಬಹುದು ಎಂದು ಈ ಹಿಂದದೆಯೇ ಮೋತಿಲಾಲ್‌ ಓಸ್ವಾಲ್ ಸಂಸ್ಥೆ ಹೇಳಿದೆ. ಎನ್‌ಸಿಸಿ, ಕ್ಯೂಮಿನ್ಸ್ ಇಂಡಿಯಾ, ಸೀಮೆನ್ಸ್, ಕೆಎನ್‌ಆರ್‌ ಕನ್‌ಸ್ಟ್ರಕ್ಷನ್, ಎಲ್‌&ಟಿ ಸ್ಟಾಕ್‌ಗಳನ್ನು ಖರೀದಿಸುವಂತೆ ಮೋತಿಲಾಲ್‌ ಓಸ್ವಾಲ್‌ನ ಚಂದನ್ ತಾಪಾರಿಯ ತಿಳಿಸಿದ್ದಾರೆ.

 ಯಾಕೆ ಇನ್‌ಫ್ರಾ ಸ್ಟಾಕ್ ಖರೀದಿಸಬೇಕು?

ಯಾಕೆ ಇನ್‌ಫ್ರಾ ಸ್ಟಾಕ್ ಖರೀದಿಸಬೇಕು?

2023ರ ಕೇಂದ್ರ ಬಜೆಟ್‌ಗೂ ಮುನ್ನ ಇನ್‌ಫ್ರಾ ಸ್ಟಾಕ್‌ಗಳನ್ನೇ ಏಕೆ ಖರೀದಿ ಮಾಡುವುದು ಉತ್ತಮ ಎಂಬ ಬಗ್ಗೆ ಪ್ರಾಫೀಟ್‌ಮಾರ್ಟ್‌ ಸೆಕ್ಯೂರಿಟೀಸ್‌ನ ರಿಸರ್ಚ್ ಮುಖ್ಯಸ್ಥ, ಅವಿನಾಶ್ ಗೋರಕ್ಷಕರ ಮಾಹಿತಿ ನೀಡಿದ್ದಾರೆ. "ಕೇಂದ್ರ ಸರ್ಕಾರದ ಈ ಆಡಳಿತಾವಧಿಯ ಕೊನೆ ಬಜೆಟ್ ಇದಾಗಿದೆ. ಈ ಬಜೆಟ್‌ನಲ್ಲಿ ಸರ್ಕಾರವು ಹೆಚ್ಚಾಗಿ ಜನರಿಗೆ ಸಹಾಯಕವಾಗುವ ನಿರ್ಧಾರವನ್ನು, ಕ್ರಮವನ್ನು ಕೈಗೊಳ್ಳುವ ನಿರೀಕ್ಷೆಯಿದೆ. ವಿರೋಧ ಪಕ್ಷಗಳು ಮೋದಿ ಸರ್ಕಾರದ ವಿರುದ್ಧ ನಿರುದ್ಯೋಗ ಪ್ರಮಾಣವನ್ನು ಅಸ್ತ್ರವನ್ನಾಗಿಸಿದೆ. ಈ ಕಾರಣದಿಂದಾಗಿ ಉದ್ಯೋಗ ಸೃಷ್ಟಿಗೆ ಸರ್ಕಾರ ಬಜೆಟ್‌ನಲ್ಲಿ ಹೆಚ್ಚಿನ ಗಮನ ನೀಡುವ ಸಾಧ್ಯತೆಯಿದೆ. ಕೃಷಿ ಕ್ಷೇತ್ರದ ಬಳಿಕ ಮೂಲಸೌಕರ್ಯವು ಅಧಿಕವಾಗಿ ಉದ್ಯೋಗ ಸೃಷ್ಟಿ ಮಾಡುವ ವಲಯವಾದ ಕಾರಣದಿಂದಾಗಿ ಈ ವಲಯದ ಮೇಲೆ ವಿಶೇಷವಾದ ಗಮನವನ್ನು ಕೇಂದ್ರ ಬಜೆಟ್ ವೇಳೆ ಸರ್ಕಾರ ಇರಿಸುವ ನಿರೀಕ್ಷೆಯಿದೆ," ಎಂದು ಅವಿನಾಶ್ ಗೋರಕ್ಷಕರ ಹೇಳಿದ್ದಾರೆ.

 ಚುನಾವಣೆಗೂ ಮುನ್ನ ಸ್ಟಾಕ್‌ಗಳ ಮೇಲೆ ಕಣ್ಣು

ಚುನಾವಣೆಗೂ ಮುನ್ನ ಸ್ಟಾಕ್‌ಗಳ ಮೇಲೆ ಕಣ್ಣು

"ಈ ವರ್ಷ 5 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇದರಿಂದಾಗಿ ಈ ರಾಜ್ಯಗಳ ಮೇಲೆಯೂ ಕೇಂದ್ರ ಸರ್ಕಾರ ಹೆಚ್ಚಿನ ಗಮನಹರಿಸುವ ಸಾಧ್ಯತೆಯಿದೆ. ಈ ರಾಜ್ಯಗಳಲ್ಲಿ ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಮೊದಲಾದವುಗಳಿಗೆ ವಿಶೇಷ ಗಮನಹರಿಸುವ ನಿರೀಕ್ಷೆಯಿದೆ. ಚುನಾವಣೆಗಳು ಇರುವ ಕಾರಣದಿಂದಾಗಿ ಮುಂದಿನ ಅರ್ಧ ವರ್ಷವು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಮೂಲಸೌಕರ್ಯ ಸಂಸ್ಥೆಗಳ ಮೇಲೆ ಹೆಚ್ಚು ಗಮನ ಇಡಲಿದೆ. ಇದರಿಂದಾಗಿ ಷೇರುಮಾರುಕಟ್ಟೆಯಲ್ಲಿಯೂ ಈ ಪ್ರಮುಖ ಸಂಸ್ಥೆಗಳು ಲಾಭವನ್ನು ಕಾಣಬಹುದು. ಅದರಿಂದಾಗಿ ಕೇಂದ್ರ ಬಜೆಟ್‌ಗೂ ಮುನ್ನ ನೀವು ಮಧ್ಯಮ ಅವಧಿಯ ಅಥವಾ 9ರಿಂದ 12 ತಿಂಗಳ ಸ್ಟಾಕ್ ಅನ್ನು ಖರೀದಿಸುವುದು ಉತ್ತಮ," ಎಂದು ಕೂಡಾ ವಿವರಿಸಿದ್ದಾರೆ.

 ಮೋತಿಲಾಲ್ ಓಸ್ವಾಲ್‌ನ ತಜ್ಞರು ಹೇಳುವುದೇನು?

ಮೋತಿಲಾಲ್ ಓಸ್ವಾಲ್‌ನ ತಜ್ಞರು ಹೇಳುವುದೇನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೋತಿಲಾಲ್ ಓಸ್ವಾಲ್ ಸಂಸ್ಥೆಯ ತಜ್ಞರಾದ ಚಂದನ್ ತಾಪಾರಿಯಾ, "ಮುಂದಿನ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಾಗಿ ಮೂಲಸೌಕರ್ಯದ ಮೇಲೆ ಗಮನಹರಿಸುವ ಸಾಧ್ಯತೆಯಿದೆ. ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರವು ತಮ್ಮ ಸಾಧನೆಗಳ ಬಗ್ಗೆ ಜನರಿಗೆ ತಿಳಿಸುವಂತಹ ಬಜೆಟ್ ಅನ್ನು ಮಂಡಿಸುವ ಸಾಧ್ಯತೆಯಿದೆ. ಅಭಿವೃದ್ಧಿ ಯೋಜನೆಗಳು ಮತ್ತು ಉದ್ಯೋಗ ಸೃಷ್ಟಿ ಮೇಲೆ ಅಧಿಕ ಗಮನಹರಿಸಲಾಗುತ್ತದೆ. ಚುನಾವಣೆ ಕಾರಣದಿಂದಾಗಿ ಮುಂದಿನ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅತೀ ದೊಡ್ಡ ಘೋಷಣೆಯನ್ನು ಮಾಡುವ ನಿರೀಕ್ಷೆಯಿದೆ," ಎಂದು ತಿಳಿಸಿದ್ದಾರೆ.

  ಇಲ್ಲಿ ಗಮನಿಸಿ!

ಇಲ್ಲಿ ಗಮನಿಸಿ!

ಈ ಮೇಲಿನ ಲೇಖನವನ್ನು ತಜ್ಞರ ಅಭಿಪ್ರಾಯದ ಮೇಲೆ ಬರೆಯಲಾಗಿದೆ. ಯಾವುದೇ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ. ನೀವು ನಿಮ್ಮ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಹೂಡಿಕೆ ಮಾಡುವ ಮುನ್ನ ಅಪಾಯವನ್ನು ಅರಿತುಕೊಂಡು ಹೂಡಿಕೆ ಮಾಡುವುದು ಉತ್ತಮ. ಈ ಲೇಖನದ ಆಧಾರದಲ್ಲಿ ಹೂಡಿಕೆ ಮಾಡಿದ ಬಳಿಕ ಉಂಟಾದ ಯಾವುದೇ ನಷ್ಟಕ್ಕೆ ಗ್ರೇನಿಯಂ ಸಂಸ್ಥೆ ಅಥವಾ ಲೇಖಕರು ಜವಾಬ್ದಾರರಲ್ಲ.

English summary

Budget 2023: Experts Recommend 5 Infra stocks to Buy next week

Budget 2023: Ahead of the union budget presentation, Experts Recommend 5 Infra stocks to Buy next week. details about the stocks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X