For Quick Alerts
ALLOW NOTIFICATIONS  
For Daily Alerts

ಕಬ್ಬಿನ ಬೆಳೆಗಾರರಿಗೆ ಸಬ್ಸಿಡಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

|

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಬುಧವಾರದಂದು ಕಬ್ಬಿನ ಬೆಳೆಗಾರರಿಗೆ 3500 ಕೋಟಿ ರುಪಾಯಿ ಸಬ್ಸಿಡಿಯನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

 

"ಸಬ್ಸಿಡಿ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿ, ರೈತರಿಗೆ ನೇರವಾಗಿ ಸಹಾಯ ಮಾಡಲು ಸಂಪುಟವು ಇಂದು ಐತಿಹಾಸಿಕ ತೀರ್ಮಾನ ಮಾಡಿದೆ. 60 ಲಕ್ಷ ಟನ್ ಸಕ್ಕರೆ ರಫ್ತಿನ ಮೇಲೆ ಟನ್ ಗೆ 6000 ರುಪಾಯಿಯಂತೆ ಸಬ್ಸಿಡಿಯನ್ನು ನೀಡಲಾಗುವುದು," ಎಂದು ಮಾಧ್ಯಮಗಳಿಗೆ ಜಾವಡೇಕರ್ ಮಾಹಿತಿ ನೀಡಿದ್ದಾರೆ.

 

ಎಲ್ ಪಿಜಿ ಸಿಲಿಂಡರ್ ದರದಲ್ಲಿ 50 ರು. ಏರಿಕೆ; ಯಾವ ನಗರದಲ್ಲಿ ಎಷ್ಟು?ಎಲ್ ಪಿಜಿ ಸಿಲಿಂಡರ್ ದರದಲ್ಲಿ 50 ರು. ಏರಿಕೆ; ಯಾವ ನಗರದಲ್ಲಿ ಎಷ್ಟು?

ಸಂಪುಟದ ನಿರ್ಧಾರದಿಂದ 5 ಕೋಟಿ ಕಬ್ಬಿನ ಬೆಳೆಗಾರರಿಗೆ ಅನುಕೂಲ ಆಗಲಿದೆ ಎಂದು ಅವರು ಹೇಳಿದ್ದಾರೆ.

ಕಬ್ಬಿನ ಬೆಳೆಗಾರರಿಗೆ ಸಬ್ಸಿಡಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

"ರೈತರು ಕಬ್ಬನ್ನು ಸಕ್ಕರೆ ಮಿಲ್ ಗಳಿಗೆ ಮಾರಾಟ ಮಾಡುತ್ತಾರೆ. ಆದರೆ ರೈತರಿಗೆ ಸಕ್ಕರೆ ಮಿಲ್ ಗಳ ಮಾಲೀಕರಿಂದ ಬಾಕಿ ಬರುತ್ತಿಲ್ಲ. ತಮ್ಮ ಬಳಿ ಹೆಚ್ಚುವರಿ ದಾಸ್ತಾನಿದೆ ಎಂದು ಸಕ್ಕರೆ ಮಿಲ್ ಮಾಲೀಕರು ಹೇಳುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಆ ಹೆಚ್ಚುವರಿ ಸಕ್ಕರೆ ಸಾಗಾಟಕ್ಕೆ ವ್ಯವಸ್ಥೆ ಮಾಡುತ್ತಿದೆ. ಇದರಿಂದ ಕಬ್ಬು ಬೆಳೆಗಾರರ ಬಾಕಿ ಪಾವತಿ ಸಾಧ್ಯವಾಗುತ್ತದೆ. ಸರ್ಕಾರಕ್ಕೆ ಇದಕ್ಕಾಗಿ 3500 ಕೋಟಿ ರುಪಾಯಿ ಆಗುತ್ತದೆ.

"ಕಬ್ಬಿನ ಬಾಕಿ ಹಣಕ್ಕೆ ಸಕ್ಕರೆ ಮಿಲ್ಸ್ ಪರವಾಗಿ ರೈತರ ಖಾತೆಗೆ ಜಮೆ ಆಗುತ್ತದೆ. ಇನ್ನೇನಾದರೂ ಬಾಕಿ ಹಣ ಉಳಿದಲ್ಲಿ ಅದನ್ನು ಸಕ್ಕರೆ ಮಿಲ್ಸ್ ಗಳ ಖಾತೆಗೆ ಜಮೆ ಮಾಡಲಾಗುತ್ತದೆ," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

English summary

Cabinet Committee On Economic Affairs Approved Rs 3500 Crore Subsidy To Sugarcane Farmers

Cabinet committee on economic affairs approved Rs 3500 subsidy to sugarcane farmers bank account.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X