For Quick Alerts
ALLOW NOTIFICATIONS  
For Daily Alerts

ತೆರಿಗೆ ವಿವಾದ: ಪ್ಯಾರಿಸ್‌ನಲ್ಲಿ ಭಾರತ ಸರ್ಕಾರದ ಆಸ್ತಿಗಳನ್ನ ವಶಪಡಿಸಿಕೊಂಡ ಕೈನ್ ಎನರ್ಜಿ!

|

ಪ್ಯಾರಿಸ್‌ನಲ್ಲಿರುವ ಭಾರತ ಸರ್ಕಾರದ ಆಸ್ತಿಗಳನ್ನು ಸ್ಕಾಟ್‌ಲೆಂಡ್ ಮೂಲದ ದೈತ್ಯ ಇಂಧನ ಸಂಸ್ಥೆ ಕೈರ್ನ್ ಎನರ್ಜಿ ವಶಪಡಿಸಿಕೊಂಡಿದೆ ಎಂದು ಫೈನಾನ್ಷಿಯಲ್ ಟೈಮ್ಸ್‌ ಗುರುವಾರ ವರದಿ ಮಾಡಿದೆ.

 

ಭಾರತ ಸರ್ಕಾರ ಮತ್ತು ಕ್ಲೈನ್ ಎನರ್ಜಿ ನಡುವಿನ ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ನಡುವಿನ ತಿಕ್ಕಾಟದಲ್ಲಿ ಕೈರ್ನ್ ಎನರ್ಜಿ ಪರವಾಗಿ ಮಧ್ಯಸ್ಥಿಕೆ ನ್ಯಾಯಮಂಡಳಿ ತೀರ್ಪು ನೀಡಿದ ನಂತರ ಕೈರ್ನ್ ಎನರ್ಜಿ 1.7 ಬಿಲಿಯನ್ ಡಾಲರ್ ಪಾವತಿಸುವಂತೆ ಭಾರತ ಸರ್ಕಾರವನ್ನು ಕೇಳಿದೆ.

 

ಕಳೆದ ವರ್ಷ ಮೂರು ಸದಸ್ಯರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿಯು ಕೈರ್ನ್ ಮೇಲಿನ ತೆರಿಗೆಯನ್ನು ಸರ್ವಾನುಮತದಿಂದ ರದ್ದುಗೊಳಿಸಿತು ಮತ್ತು ಮಾರಾಟವಾಗಿರುವ ಷೇರುಗಳನ್ನು ಕೈರ್ನ್ ಎನರ್ಜಿಗೆ ಮರಪಾವತಿಸಲು ಆದೇಶಿಸಿದೆ. ಈ ಬೇಡಿಕೆ ಮರುಪಡಡೆಯಲು ತೆರಿಗೆ ಮರುಪಾವತಿಯನ್ನು ತಡೆಹಿಡಿಯಲಾಗಿದೆ.

ಭಾರತ ಸರ್ಕಾರದ ಆಸ್ತಿಗಳನ್ನ ವಶಪಡಿಸಿಕೊಂಡ ಕೈನ್ ಎನರ್ಜಿ!

ಭಾರತ ಸರ್ಕಾರದಿಂದ ಹಣವನ್ನು ಹಿಂಪಡೆಯಲು ಕೈರ್ನ್ ಎನರ್ಜಿ 20 ಮಿಲಿಯನ್ ಡಾಲರ್ ಮೌಲ್ಯದ 20 ಆಸ್ತಿಗಳ ಮಾಲೀಕತ್ವವನ್ನು ಗುರುತಿಸಿದೆ. ಈಗಾಗಲೇ ಫ್ರೆಂಚ್‌ ನ್ಯಾಯಾಲಯವು ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದನ್ನು ಅಧಿಕೃತಗೊಳಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಆದರೆ ಅಧಿಕೃತ ಮೂಲಗಳು ಈ ಕುರಿತಾಗಿ ಸುದ್ದಿಯನ್ನ ನಿರಾಕರಿಸಿದೆ.

"ಪ್ಯಾರಿಸ್‌ನಲ್ಲಿ ಕೈರ್ನ್ ಎನರ್ಜಿ ಭಾರತ ಸರ್ಕಾರದ ಒಡೆತನದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂಬ ಸುದ್ದಿ ವರದಿಗಳು ಬಂದಿವೆ. ಆದರೆ ಭಾರತ ಸರ್ಕಾರಕ್ಕೆ ಯಾವುದೇ ಫ್ರೆಂಚ್ ನ್ಯಾಯಾಲಯದಿಂದ ಯಾವುದೇ ಸೂಚನೆ, ಆದೇಶ ಅಥವಾ ಸಂವಹನವನ್ನು ಸ್ವೀಕರಿಸಿಲ್ಲ "ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ವಿಷಯದ ಕುರಿತು ಅಧಿಕೃತವಾಗಿ ತಿಳಿಯಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ ಮತ್ತು ಅಂತಹ ಆದೇಶ ಬಂದರೆ ಸೂಕ್ತ ಕಾನೂನು ಪರಿಹಾರಗಳನ್ನು ತೆಗೆದುಕೊಳ್ಳಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಸ್ಥಿಕೆ ನ್ಯಾಯಾಲಯದ ಆದೇಶದಂತೆ ಸಂಭಾವ್ಯ ಭಾರತ ಸರ್ಕಾರದ ಆಸ್ತಿಯನ್ನ ವಶಪಡಿಸಿಕೊಳ್ಳಲು ವಿದೇಶದಲ್ಲಿ 70 ಶತಕೋಟಿ ಡಾಲರ್ ಮೌಲ್ಯದ ಭಾರತೀಯ ಆಸ್ತಿಗಳನ್ನು ಗುರುತಿಸಿದೆ ಎಂದು ಕೈರ್ನ್ ಎನರ್ಜಿ ಹೇಳಿದೆ. ಕೈರ್ನ್ ಎನರ್ಜಿ ಗುರುತಿಸಿದ ಸ್ವತ್ತುಗಳು ಏರ್ ಇಂಡಿಯಾದ ವಿಮಾನಗಳಿಂದ ಹಿಡಿದು ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ಸೇರಿದ ಹಡಗುಗಳವರೆಗೆ ಇವೆ ಎಂದು ವರದಿಗಳು ಸೂಚಿಸುತ್ತವೆ.

ಈ ಹಿಂದೆ ತೆರಿಗೆ ಬೇಡಿಕೆಯನ್ನು ಮರುಪಡೆಯಲು ಮಾರಾಟವಾದ ಷೇರುಗಳ ಮೌಲ್ಯವನ್ನು ಹಿಂದಿರುಗಿಸಲು, ಲಾಭಾಂಶವನ್ನು ವಶಪಡಿಸಿಕೊಳ್ಳಲು ಮತ್ತು ತೆರಿಗೆ ಮರುಪಾವತಿಯನ್ನು ತಡೆಹಿಡಿಯಲು ನ್ಯಾಯಮಂಡಳಿಯು ಭಾರತ ಸರ್ಕಾರಕ್ಕೆ ಆದೇಶಿಸಿತ್ತು.

ಆದರೆ ಈ ಕುರಿತು ಕೈನ್ ಎನರ್ಜಿ ಮಧ್ಯಸ್ಥಿಕೆ ನ್ಯಾಯಾಲಯದ ಮೆಟ್ಟಿಲೇರಿತ್ತು, ಇಲ್ಲಿ ವಿಚಾರಣೆ ಬಳಿಕ ಕೈರ್ನ್ ಎನರ್ಜಿ ಪರವಾಗಿ ತೀರ್ಪು ಹೊರಬಿದ್ದಿದ್ದು, ಕೈರ್ನ್ ಎನರ್ಜಿಯನ್ನು "ಅನುಭವಿಸಿದ ಒಟ್ಟು ಹಾನಿಗೆ" ಬಡ್ಡಿ ಮತ್ತು ಮಧ್ಯಸ್ಥಿಕೆಯ ವೆಚ್ಚದೊಂದಿಗೆ ನೀಡಲು ಭಾರತ ಸರ್ಕಾರವನ್ನು ಕೇಳಿದೆ. ಕಳೆದ ವರ್ಷವಷ್ಟೇ ಸೆಪ್ಟೆಂಬರ್‌ನಲ್ಲಿ, ಯುಕೆ ಮೂಲದ ವೊಡಾಫೋನ್ ಗ್ರೂಪ್ 22,100 ಕೋಟಿ ರೂ.ಗಳ ತೆರಿಗೆ ಬೇಡಿಕೆಯ ವಿರುದ್ಧ ಅಂತರರಾಷ್ಟ್ರೀಯ ಮಧ್ಯಸ್ಥಿಕೆಯಲ್ಲಿ ಕೇಸ್‌ ಗೆದ್ದಿತ್ತು.

English summary

Cairn Energy seized properties owned by the Indian government in Paris over tax dispute

Scottish energy giant Cairn Energy has seized properties owned by the Indian government in Paris
Story first published: Thursday, July 8, 2021, 14:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X