For Quick Alerts
ALLOW NOTIFICATIONS  
For Daily Alerts

ಭಾರತ ಸರ್ಕಾರದ ವಿರುದ್ಧ 8850 ಕೋಟಿ ರುಪಾಯಿ ಪ್ರಕರಣ ಗೆದ್ದ ಕೇರ್ನ್ ಎನರ್ಜಿ ಪಿಎಲ್ ಸಿ

By ಅನಿಲ್ ಆಚಾರ್
|

ಭಾರತ ಸರ್ಕಾರವು ಯು.ಕೆ. ಮೂಲದ ಕಂಪೆನಿ ಕೇರ್ನ್ ಎನರ್ಜಿ ಪಿಎಲ್ ಸಿಗೆ 120 ಕೋಟಿ ಅಮೆರಿಕನ್ ಡಾಲರ್ (8850 ಕೋಟಿ ರುಪಾಯಿ) ಹಾಗೂ ಬಡ್ಡಿಯನ್ನು ಹಾನಿಗೆ ಪರಿಹಾರವಾಗಿ ಕಟ್ಟಿಕೊಡಬೇಕಾಗಿದೆ. ತೈಲ ಪ್ರಮುಖ ಕಂಪೆನಿ ಈ ಬಗ್ಗೆ ಹೇಳಿದ್ದು, ನ್ಯಾಯಮಂಡಳಿಯಿಂದ ಒಮ್ಮತವಾಗಿ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದೆ.

 

2007ರಲ್ಲಿ ಕೇರ್ನ್ ಎನರ್ಜಿಯಿಂದ ಭಾರತದಲ್ಲಿ ಲಿಸ್ಟಿಂಗ್ ಕಾರ್ಯ ನಿರ್ವಹಣೆ ಆರಂಭಿಸುವಾಗ ತೆರಿಗೆ ಇಲಾಖೆಯೊಂದಿಗೆ 120 ಕೋಟಿ ಅಮೆರಿಕನ್ ಡಾಲರ್ ತೆರಿಗೆ ವ್ಯಾಜ್ಯ ಇತ್ತು. ಇದೀಗ ಮಧ್ಯಸ್ಥಿಕೆ ವ್ಯಾಜ್ಯ ಇತ್ಯರ್ಥದಲ್ಲಿ ಭಾರತ ಸರ್ಕಾರದ ವಿರುದ್ಧ ಗೆಲುವು ಸಾಧಿಸಿದೆ ಎಂದು ಬುಧವಾರ ತಿಳಿಸಿದೆ.

CIBIL Rank ಪರೀಕ್ಷಿಸಿಕೊಳ್ಳಿ; ಬಿಜಿನೆಸ್ ಸಾಲ ಸಲೀಸು ಮಾಡಿಕೊಳ್ಳಿ

ಯು.ಕೆ.- ಭಾರತ ದ್ವಿಪಕ್ಷೀಯ ಒಪ್ಪಂದದ ಉಲ್ಲಂಘನೆ ಮಾಡಲಾಗಿದೆ ಎಂದು ನ್ಯಾಯಮಂಡಳಿ ಒಮ್ಮತದ ಆದೇಶ ನೀಡಿದೆ. ಕೇರ್ನ್ ಗೆ ಹಾನಿ ಪರಿಹಾರವಾಗಿ 120 ಕೋಟಿ ಅಮೆರಿಕನ್ ಡಾಲರ್ ಹಾಗೂ ಬಡ್ಡಿ ಮತ್ತು ವೆಚ್ಚವನ್ನು ನೀಡುವಂತೆ ತಿಳಿಸಲಾಗಿದೆ. ಅದನ್ನು ಈಗ ಪಾವತಿಸಬೇಕು ಎಂದು ಕಂಪೆನಿ ಹೇಳಿದೆ.

ಭಾರತ ಸರ್ಕಾರ ವಿರುದ್ಧ 8850 ಕೋಟಿ ರು. ಪ್ರಕರಣ ಗೆದ್ದ ಕೇರ್ನ್ ಎನರ್ಜಿ

ಈ ಹಿಂದೆ ವೊಡಾಫೋನ್ ಸಮೂಹ ಕೂಡ ಭಾರತ ಸರ್ಕಾರದ ವಿರುದ್ಧ ಪ್ರಕರಣ ಗೆದ್ದಿತ್ತು. ಆ ಆದೇಶದ ವಿರುದ್ಧ ಇನ್ನೂ ಪ್ರಶ್ನೆ ಮಾಡಬೇಕಿದೆ. ಕೇರ್ನ್ ಎನರ್ಜಿ ಪ್ರಕರಣದಲ್ಲಿ ಕೂಡ ಸರ್ಕಾರವು ಪ್ರಶ್ನೆ ಮಾಡಬಹುದಾಗಿದೆ.

ನ್ಯಾಯಮಂಡಳಿ ನೀಡಿದ ಆದೇಶದ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿದ ನಂತರ ಭಾರತ ಸರ್ಕಾರ ಮುಂದಿನ ತೀರ್ಮಾನವನ್ನು ಕೈಗೊಳ್ಳಬಹುದು ಎಂದು ಮಜುಂದಾರ್ ಅಂಡ್ ಪಾರ್ಟನರ್ಸ್ ಕಾನೂನು ಸಂಸ್ಥೆಯ ತೆರಿಗೆ ವಕೀಲರಾದ ರವಿ ಎಸ್ ರಾಘವನ್ ಅಭಿಪ್ರಾಯ ಪಟ್ಟಿದ್ದಾರೆ.

ಸಮೂಹದ ಪುನರ್ ರಚನೆಗೆ ಸಂಬಂಧಿಸಿದಂತೆ 2006ರಲ್ಲಿ ತೆರಿಗೆ ಇಲಾಖೆಯಿಂದ 10,247 ಕೋಟಿ ರುಪಾಯಿಗೆ ಮುಂದಿಟ್ಟಿದ್ದ ಬೇಡಿಕೆಗೆ 2015ರಲ್ಲಿ ಕೇರ್ನ್ ಎನರ್ಜಿ ವ್ಯಾಜ್ಯ ಹೂಡಿತ್ತು. ಕೇರ್ನ್ ಯು.ಕೆ. ಹೋಲ್ಡಿಂಗ್ಸ್ ಎಂಬುದು ಕೇರ್ನ್ ಎನರ್ಜಿಯ ಪೂರ್ಣ ಪ್ರಮಾಣದ ಅಂಗ ಸಂಸ್ಥೆ. ಭಾರತದಲ್ಲಿ ಪಬ್ಲಿಕ್ ಲಿಸ್ಟಿಂಗ್ ಮುಂಚೆ ಕ್ಯಾಪಿಟಲ್ ಗೇಯ್ನ್ಸ್ 24000 ಕೋಟಿ ರುಪಾಯಿ ಮಾಡಿತ್ತು. ಕೇರ್ನ್ ಇಂಡಿಯಾದಲ್ಲಿ ಕೇರ್ನ್ ಎನರ್ಜಿಯ 69% ಪಾಲಿತ್ತು.

 

2011ರಲ್ಲಿ 9.8% ಷೇರಿನ ಪಾಲನ್ನು ಉಳಿಸಿಕೊಂಡ ಕೇರ್ನ್ ಇಂಡಿಯಾ, ಉಳಿದದ್ದನ್ನು ವೇದಾಂತ ಸಮೂಹಕ್ಕೆ ಮಾರಿತು.

English summary

Cairn Energy Wins Arbitration Against India In 5 Year Old Tax Dispute; Govt Have To Pay 1.2 Billion USD

U.K based Cairn energy wins arbitration against India in 5 year old tax dispute. Indian govt have to pay 1.2 billion USD, interest and cost.
Story first published: Wednesday, December 23, 2020, 15:40 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X