For Quick Alerts
ALLOW NOTIFICATIONS  
For Daily Alerts

ವಿಜಯಾ ಬ್ಯಾಂಕ್ ಗೆ ಬರಸಿಡಿಲಿನಂತೆ ಅಪ್ಪಳಿಸಿದ ಹೈಕೋರ್ಟ್ ಆದೇಶ

|

ಮೂಲ್ಕಿ ಸುಂದರರಾಮ ಶೆಟ್ಟಿಯವರ ನೇತೃತ್ವದಲ್ಲಿ ಪ್ರಾರಂಭವಾದ, ಕರ್ನಾಟಕ ಮೂಲದ ವಿಜಯಾ ಬ್ಯಾಂಕ್‌, ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡದ ಜೊತೆ 01.04.2020ರಂದು ಅಧಿಕೃತವಾಗಿ ವಿಲೀನಗೊಳ್ಳಲಿದೆ. ಲಾಭದಲ್ಲಿದ್ದ ವಿಜಯಾ ಬ್ಯಾಂಕ್ ಅನ್ನು ನಷ್ಠದಲ್ಲಿದ್ದ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಳಿಸುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.

ವಿಜಯಾ ಬ್ಯಾಂಕ್ ಜೊತೆ ದೇನಾ ಬ್ಯಾಂಕ್ ಕೂಡಾ ಮರ್ಜ್ ಆಗುತ್ತಿರುವುದು ತಿಳಿದಿರುವ ವಿಚಾರ. 01.04.2017ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ, ಕರ್ನಾಟಕದ ಮತ್ತೊಂದು ಹೆಮ್ಮೆಯ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಕೂಡಾ ವಿಲೀನಗೊಂಡಿತ್ತು.

ಈ ಮಹಾ ಬ್ಯಾಂಕ್ ಗಳ ವಿಲೀನದ ನಂತರ, 45.85 ಲಕ್ಷ ಕೋಟಿ ಮೌಲ್ಯದ ವ್ಯವಹಾರಗಳೊಂದಿಗೆ ಸ್ಟೇಟ್ ಬ್ಯಾಂಕ್ ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿಕೊಂಡಿದೆ. ವಿಜಯಾ ಬ್ಯಾಂಕ್ ಜೊತೆಗಿನ ವಿಲೀನದಿಂದ, ಬ್ಯಾಂಕ್ ಆಫ್ ಬರೋಡಾ, ಐಸಿಐಸಿಸಿ ಬ್ಯಾಂಕ್ ಅನ್ನು ಹಿಂದಕ್ಕೆ ತಳ್ಲಿ ಮೂರನೇ ಸ್ಥಾನದಲ್ಲಿದೆ. ಎಚ್ ಡಿ ಎಫ್ ಸಿ ಎರಡನೇ ಸ್ಥಾನದಲ್ಲಿದೆ.

 

ಪ್ಲೀಸ್, ಪ್ಲೀಸ್ ಹಣ ವಾಪಸ್ ತಗೊಳ್ಳಿ : ವಿಜಯ್ ಮಲ್ಯ

ಉತ್ತಮವಾಗಿ ಮತ್ತು ಪ್ರಗತಿಪಥದಲ್ಲಿದ್ದ ವಿಜಯಾ ಬ್ಯಾಂಕ್ ಅನ್ನು ವಿಲೀನಗೊಳಿಸಿದ್ದು ಒಂದೆಡೆಯಾದರೆ, ಹೈಕೋರ್ಟ್ ಆದೇಶವೊಂದು, ಬ್ಯಾಂಕ್ ಆಫ್ ಬರೋಡಾ ಸಮೂಹ ಬ್ಯಾಂಕುಗಳ ಬುಡವನ್ನೇ ಅಲ್ಲಾಡಿಸಿದೆ.

ಕೋಲ್ಕತ್ತಾ ಉಚ್ಚನ್ಯಾಯಾಲಯ

ಕೋಲ್ಕತ್ತಾ ಉಚ್ಚನ್ಯಾಯಾಲಯ

"ಬೇಷರತ್ ಬ್ಯಾಂಕ್ ಗ್ಯಾರಂಟಿಯ ಪಾವತಿಯ ವಿಚಾರದಲ್ಲಿ ಬ್ಯಾಂಕ್ ಆಫ್ ಬರೋಡಾ ಅವ್ಯವಸ್ಥೆಯಿಂದ ಕಾರ್ಯನಿರ್ವಹಿಸುತ್ತಿದೆ" ಎಂದು ಕೋಲ್ಕತ್ತಾ ಉಚ್ಚನ್ಯಾಯಾಲಯ ಕಿಡಿಕಾರಿದ್ದು. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ, ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸೂಚಿಸಿದ್ದು ಒಂದು ಕಡೆ.

ರಿಸರ್ವ್ ಬ್ಯಾಂಕ್ ಗೆ ನೀಡಿದ ಆದೇಶ

ರಿಸರ್ವ್ ಬ್ಯಾಂಕ್ ಗೆ ನೀಡಿದ ಆದೇಶ

ನ್ಯಾಯಾಲಯ, ರಿಸರ್ವ್ ಬ್ಯಾಂಕ್ ಗೆ ನೀಡಿದ ಆದೇಶದಲ್ಲಿ ಬ್ಯಾಂಕ್ ಆಫ್ ಬರೋಡಾಗೆ ನೀಡಿದ ಲೈಸೆನ್ಸ್ ಅನ್ನು ರದ್ದುಪಡಿಸುವಂತೆ ಸೂಚಿಸಿರುವುದು, ಬಹುದೊಡ್ಡ ಆಘಾತವಾಗಿದೆ. ನ್ಯಾಯಮೂರ್ತಿಗಳಾದ ಜ.ಸಂಜೀಬ್ ಮುಖರ್ಜಿ ಮತ್ತು ಜ.ಕೌಶಿಕ್ ಚಂದ್ರ ಇದ್ದ ನ್ಯಾಯಪೀಠ ಈ ಆದೇಶವನ್ನು ನೀಡಿದೆ.

ಮಾರ್ಚ್‌ ತಿಂಗಳಲ್ಲಿ 3 ದಿನ ಬ್ಯಾಂಕ್ ಮುಷ್ಕರ, 5 ದಿನ ಬ್ಯಾಂಕ್ ಸೇವೆ ಬಂದ್?

ಇಂಡಿಯನ್ ಆಯಿಲ್ ಕಾರ್ಪೋರೇಶನ್
 

ಇಂಡಿಯನ್ ಆಯಿಲ್ ಕಾರ್ಪೋರೇಶನ್

ಐಓಸಿ (ಇಂಡಿಯನ್ ಆಯಿಲ್ ಕಾರ್ಪೋರೇಶನ್) ಸಲ್ಲಿಸಿದ್ದ ಆಕ್ಷೇಪಣೆ ಅರ್ಜಿಯ ವಿಚಾರಣೆ ವೇಳೆ, ಕೋಲ್ಕತ್ತಾ ಹೈಕೋರ್ಟ್ ಮೇಲಿನ ಆದೇಶವನ್ನು ನೀಡಿದೆ. ಸಿಂಪ್ಲೆಕ್ಸ್ ಪ್ರಾಜೆಕ್ಟ್ಸ್ ಸಂಸ್ಥೆಯ ಪರವಾಗಿ ಐಓಸಿ 6.97 ಕೋಟಿ ರೋಪಾಯಿಯ ಬ್ಯಾಂಕ್ ಗ್ಯಾರಂಟಿಯನ್ನು ನೀಡಿತ್ತು. ಈ ಹಣವನ್ನು ಬಿಡುಗಡೆ ಮಾಡುವಲ್ಲಿ ಬ್ಯಾಂಕ್ ಆಫ್ ಬರೋಡಾ ವಿಫಲಗೊಂಡಿತ್ತು.

ವಿಜಯಾ ಬ್ಯಾಂಕ್ ಗೆ ಬರಸಿಡಿಲಿನಂತೆ ಅಪ್ಪಳಿಸಿದ ಹೈಕೋರ್ಟ್ ಆದೇಶ

ವಿಜಯಾ ಬ್ಯಾಂಕ್ ಗೆ ಬರಸಿಡಿಲಿನಂತೆ ಅಪ್ಪಳಿಸಿದ ಹೈಕೋರ್ಟ್ ಆದೇಶ

ಐಓಸಿ ಪ್ರಕಾರ, ಸಿಂಪ್ಲೆಕ್ಸ್ ಸಂಸ್ಥೆ ತನ್ನ ಜೊತೆಗಿನ ಒಪ್ಪಂದದ ಪ್ರಕಾರ ನಡೆದುಕೊಂಡಿಲ್ಲ. ಬ್ಯಾಂಕ್ ಆಫ್ ಬರೋಡಾ ಒಂದು ರಾಷ್ಟ್ರೀಕೃತ ಬ್ಯಾಂಕ್ ರೀತಿಯಲ್ಲಿ ಕಾರ್ಯ ನಿರ್ವಹಿಸಿಲ್ಲ. ಹಾಗಾಗಿ, ಬ್ಯಾಂಕಿನ ಲೈಸೆನ್ಸ್ ಅನ್ನು ರದ್ದುಗೊಳಿಸಬೇಕೆಂದು, ಕೋಲ್ಕತ್ತಾ ನ್ಯಾಯಾಲಯದಲ್ಲಿ ಐಓಸಿ ವಾದಿಸಿತ್ತು.

English summary

Calcutta HC Directs RBI To Consider Steps To Cancellation Of License Of Bank Of Baroda

Calcutta High Court Directs Reserve Bank of India To Consider Steps To Cancellation Of License Of Bank Of Baroda.
Story first published: Monday, February 17, 2020, 11:14 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more