For Quick Alerts
ALLOW NOTIFICATIONS  
For Daily Alerts

ಕೆನರಾ ಬ್ಯಾಂಕ್ ನಿಂದ MCLR ಇಳಿಕೆ; ಸಾಲದ ಬಡ್ಡಿ ಆಗಲಿದೆ ಕಡಿಮೆ

By ಅನಿಲ್ ಆಚಾರ್
|

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಶುಕ್ರವಾರ ಮಾಹಿತಿ ನೀಡಿ, ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ಸ್ (MCLR) ಆಧಾರಿತ ದರವನ್ನು 0.05- 0.15ರಷ್ಟು ಕಡಿತ ಮಾಡಲಿದ್ದು, ನವೆಂಬರ್ 7ರಿಂದ ಇದು ಅನ್ವಯ ಆಗಲಿದೆ ಎಂದು ತಿಳಿಸಿದೆ. ಒಂದು ವರ್ಷದ MCLR- ಬೆಂಚ್ ಮಾರ್ಕ್ ಬಹುತೇಕ ಗ್ರಾಹಕ ಸಾಲಗಳು 0.05ರಷ್ಟು ಇಳಿಕೆ ಮಾಡಿ, 7.40 ಪರ್ಸೆಂಟ್ ನಿಂದ 7.35 ಪರ್ಸೆಂಟ್ ಗೆ ಕಡಿತ ಮಾಡಲಿದೆ.

6 ತಿಂಗಳ MCLR ಕೂಡ ಇಳಿಕೆ ಮಾಡಲಾಗಿದೆ. ಅದನ್ನು ಕೂಡ ಅಷ್ಟೇ ಪ್ರಮಾಣದಲ್ಲಿ ಇಳಿಸಿದ್ದು, 7.30 ಪರ್ಸೆಂಟ್ ಗೆ ತರಲಾಗುವುದು. ಇನ್ನು ಇತರ ಸಾಲಗಳ ಪೈಕಿ ನಿತ್ಯ ಹಾಗೂ ಒಂದು ತಿಂಗಳ MCLR ತಲಾ 0.15 ಪರ್ಸೆಂಟ್ ಕಡಿತ ಆಗಲಿದ್ದು, 6.80 ಪರ್ಸೆಂಟ್ ತಲುಪಲಿದೆ. ಇನ್ನು ಮೂರು ತಿಂಗಳ MCLR ಪರಿಷ್ಕೃತವಾಗಿ, 6.95 ಪರ್ಸೆಂಟ್ ಆಗಲಿದೆ. ಸದ್ಯ 7.10 ಪರ್ಸೆಂಟ್ ಇದೆ ಈ ಹೊಸ ದರವು ನವೆಂಬರ್ 7,2020ರಿಂದ ಜಾರಿಗೆ ಬರಲಿದೆ ಎಂದು ಕೆನರಾ ಬ್ಯಾಂಕ್ ಹೇಳಿದೆ.

ಕೆನರಾ ಬ್ಯಾಂಕ್ ನಿಂದ MCLR ಇಳಿಕೆ; ಸಾಲದ ಬಡ್ಡಿ ಆಗಲಿದೆ ಕಡಿಮೆ

ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಗುರುವಾರದಂದು ಘೋಷಣೆ ಮಾಡಿ, ಒಂದು- ಎರಡು- ಮೂರು ವರ್ಷದ MCLR ತಲಾ 0.05 ಪರ್ಸೆಂಟ್ ಕಡಿತ ಮಾಡಿದ್ದು, ಈಗ 7.45% ಆಗಿದೆ. ನಿತ್ಯ ಹಾಗೂ ಒಂದು ತಿಂಗಳ MCLR ತಲಾ 6.85% ಆಗಲಿದೆ. ಅದು ಸದ್ಯಕ್ಕೆ ಕ್ರಮವಾಗಿ 7.05 ಹಾಗೂ 7.35 ಪರ್ಸೆಂಟ್ ಇದೆ. ಈ ಹೊಸ ದರವು ನವೆಂಬರ್ 10, 2020ರಿಂದ ಜಾರಿಗ್ ಬರಲಿದೆ ಎಂದು ಇಂಡಿಯನ್ ಓವರ್ ಸೀಸ್ ಬ್ಯಾಂಕ್ ತಿಳಿಸಿದೆ.

English summary

Canara Bank Cut MCLR Rate; Loan Interest Will Reduce

Canara bank cut MCLR rate. So, interest rate will reduce. Here is the details.
Story first published: Friday, November 6, 2020, 23:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X