For Quick Alerts
ALLOW NOTIFICATIONS  
For Daily Alerts

ಸಾಲಗಳ ಮೇಲಿನ ಬಡ್ಡಿದರ ಕಡಿತಗೊಳಿಸಿದ ಕೆನರಾ ಬ್ಯಾಂಕ್

|

ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಆರ್‌ಬಿಐ ರೆಪೋ ದರ ಕಡಿತಗೊಳಿಸಿದ ಬಳಿಕ, ರೆಪೋ ದರ ಆಧರಿಸಿರುವ ಸಾಲಗಳ ಮೇಲಿನ ಬಡ್ಡಿದರದಲ್ಲಿ (RLLR) 0.75ರಷ್ಟು ಕಡಿಮೆ ಮಾಡಿದೆ. ಈ ಮೂಲಕ ಗ್ರಾಹಕರು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದುಕೊಳ್ಳಬಹುದಾಗಿದ್ದು, ಮಂಗಳವಾರದಿಂದ 7.30 ಪರ್ಸೆಂಟ್ ಬಡ್ಡಿದರದಲ್ಲಿ ಸಾಲ ಸಿಗುತ್ತದೆ.

ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ(ಎಂಸಿಎಲ್ಆರ್)ಆಧಾರಿತ ಸಾಲದ ಬಡ್ಡಿ ದರದಲ್ಲಿಯೂ ಒಂದು ವರ್ಷದ ಮಟ್ಟಿಗೆ 0.35 ಪರ್ಸೆಂಟ್‌ವರೆಗೂ ಇಳಿಕೆ ಮಾಡಿದೆ. ಇದೇ ಸಮಯದಲ್ಲಿ ಬ್ಯಾಂಕ್ ತನ್ನ ಬಡ್ಡಿ ದರವನ್ನು ಆರು ತಿಂಗಳ ಅವಧಿಗೆ 0.30 ಪರ್ಸೆಂಟ್ ಕಡಿಮೆ ಮಾಡಿದೆ.

ಸಾಲಗಳ ಮೇಲಿನ ಬಡ್ಡಿದರ ಕಡಿತಗೊಳಿಸಿದ ಕೆನರಾ ಬ್ಯಾಂಕ್

ಭಾರತೀಯ ರಿಸರ್ವ್‌ ಬ್ಯಾಂಕ್(ಆರ್‌ಬಿಐ) ರೆಪೋ ದರವನ್ನು 0.75 ಪರ್ಸೆಂಟ್ ಕಡಿಮೆ ಮಾಡಿರುವುದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಕೆನರಾ ಬ್ಯಾಂಕ್ ಈ ನಿರ್ಧಾರ ತೆಗೆದುಕೊಂಡಿದೆ.

ಏಪ್ರಿಲ್ 1, 2020ಯಿಂದ ಅನ್ವಯವಾಗುವಂತೆ ಕೆನರಾ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್‌ಗಳು ವಿಲೀನಗೊಂಡಿದೆ. ಈ ವಿಲೀನದ ಬಳಿಕ ಕೆನರಾ ಬ್ಯಾಂಕ್ ನಾಲ್ಕನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ.

English summary

Canara Bank Cuts Interest Rates On Loans Cheaper

canara bank slashes MCLR on loans/advanced across all tenors with effect from april 7 for the amalgamated entity.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X