For Quick Alerts
ALLOW NOTIFICATIONS  
For Daily Alerts

Banker's Bank 2022 award: ಬ್ಯಾಂಕರ್ಸ್‌ ಬ್ಯಾಂಕ್ 2022 ಪ್ರಶಸ್ತಿ ಕೆನರಾ ಬ್ಯಾಂಕ್ ತೆಕ್ಕೆಗೆ

|

"ಬ್ಯಾಂಕರ್ಸ್‌ ಬ್ಯಾಂಕ್ 2022 ಪ್ರಶಸ್ತಿ" ಯು ಕೆನರಾ ಬ್ಯಾಂಕ್ ತೆಕ್ಕೆಗೆ ಸೇರಿದೆ. ಜಾಗತಿಕ ಬ್ಯಾಂಕಿಂಗ್ ಸಮ್ಮಿಟ್‌ನಲ್ಲಿ ಕೆನರಾ ಬ್ಯಾಂಕ್‌ಗೆ ಬ್ಯಾಂಕರ್ಸ್‌ ಬ್ಯಾಂಕ್ ಎಂಬ ಪ್ರಶಸ್ತಿ ಲಭ್ಯವಾಗಿದೆ ಎಂದು ಕೆನರಾ ಬ್ಯಾಂಕ್ ಶುಕ್ರವಾರ ಘೋಷಣೆ ಮಾಡಿದೆ. ಇನ್ನು ಕೆನರಾ ಬ್ಯಾಂಕ್ ಈಗಾಗಲೇ ಭಾರತದಲ್ಲಿ ಉತ್ತಮ ಬ್ಯಾಂಕ್ ಎಂದನಿಸಿಕೊಂಡಿದೆ.

 

ಲಂಡನ್‌ನಲ್ಲಿ ನವೆಂಬರ್‌ 29ರಿಂದ ಡಿಸೆಂಬರ್ 1, 2022ರವರೆಗೆ ನಡೆದ ಜಾಗತಿಕ ಬ್ಯಾಂಕಿಂಗ್ ಸಮ್ಮಿಟ್‌ನಲ್ಲಿ ಕೆನರಾ ಬ್ಯಾಂಕ್‌ನ ಎಂಡಿ, ಸಿಇಒ ಎಲ್‌ ವಿ ಪ್ರಭಾಕರ್ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಕೆನರಾ ಬ್ಯಾಂಕ್ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭರ್ಜರಿ ಲಾಭ ಪಡೆದಿದೆ. ಜುಲೈನಿಂದ ಸೆಪ್ಟೆಂಬರ್‌ವರೆಗಿನ 3 ತಿಂಗಳಲ್ಲಿ ಕೆನರಾ ಬ್ಯಾಂಕ್‌ನ ನಿವ್ವಳ ಲಾಭ 2,525 ಕೋಟಿ ರೂಪಾಯಿ ಇದೆ. ಈ ನಡುವೆ ಈ ಪ್ರಶಸ್ತಿಯು ಲಭ್ಯವಾಗಿದ್ದು, ಕೆನರಾ ಬ್ಯಾಂಕ್ ಮಾರುಕಟ್ಟೆ ಮೌಲ್ಯವೂ ಏರುವ ನಿರೀಕ್ಷೆಯಿದೆ. ಈ ಪ್ರಶಸ್ತಿ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

 'ಬ್ಯಾಂಕರ್ಸ್‌ ಬ್ಯಾಂಕ್ 2022 ಪ್ರಶಸ್ತಿ' ಕೆನರಾ ಬ್ಯಾಂಕ್ ತೆಕ್ಕೆಗೆ

ಏನಿದು ಈ ಬ್ಯಾಂಕರ್ಸ್‌ ಬ್ಯಾಂಕ್ ಪ್ರಶಸ್ತಿ?

ಬ್ಯಾಂಕರ್ಸ್‌ ಬ್ಯಾಂಕ್ ಪ್ರಶಸ್ತಿಯು ಬ್ಯಾಂಕಿಂಗ್ ವಲಯದಲ್ಲಿ ಆಸ್ಕರ್ ಪ್ರಶಸ್ತಿಯಂತಹ ಮೌಲ್ಯವನ್ನು ಹೊಂದಿದೆ. ಈ ಪ್ರಶಸ್ತಿ ಲಭ್ಯವಾದ ಬ್ಯಾಂಕ್ ಅತೀ ಉನ್ನತ ಬ್ಯಾಂಕ್ ಎಂದು ಪರಿಗಣಿಸಲಾಗುತ್ತದೆ. ಬ್ಯಾಂಕ್ ಕಳೆದ 12 ತಿಂಗಳಿನಲ್ಲಿ ಉತ್ತಮ ರಿಟರ್ನ್, ಕಾರ್ಯತಂತ್ರ, ಹೊಸ ಅನ್ವೇಷನೆ, ತಂತ್ರಜ್ಞಾನ, ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂಬುವುದರ ಪ್ರತೀಕವಾಗಿದೆ ಈ ಪ್ರಶಸ್ತಿ.

ಬ್ಯಾಂಕಿಂಗ್ ಕ್ಷೇತ್ರದ ಪ್ರಸಿದ್ಧ ಮ್ಯಾಗಜಿನ್ (ನಿಯತಕಾಲಿಕೆ) ಆದ ದೀ ಬ್ಯಾಂಕರ್ ಈ ಪ್ರಶಸ್ತಿಯನ್ನು ನೀಡುತ್ತದೆ. ಈ ಮ್ಯಾಗಜಿನ್ 180ಕ್ಕೂ ಅಧಿಕ ದೇಶಗಳಲ್ಲಿ ಪ್ರಸಿದ್ಧವಾಗಿದೆ. ಫೈನಾನ್ಶಿಯಲ್ ಟೈಮ್ಸ್ (ಎಫ್‌ಟಿ) ಗ್ರೂಪ್ ಈ ಮ್ಯಾಗಜಿನ್ ಅನ್ನು ಪ್ರಕಟಿಸುತ್ತದೆ. ಫೈನಾನ್ಶಿಯಲ್ ಟೈಮ್ಸ್ ಬ್ರಿಟಿಷ್‌ ಮೂಲದ ದೈನಂದಿನ ಪತ್ರಿಕೆಯಾಗಿದ್ದು 1888ರಲ್ಲಿ ಬಿಡುಗಡೆಯಾಗಿದೆ.

ಕೆನರಾ ಬ್ಯಾಂಕ್‌ಗೆ 2ನೇ ತ್ರೈಮಾಸಿಕದಲ್ಲಿ ಲಾಭ

 

ಕೆನರಾ ಬ್ಯಾಂಕ್ ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭರ್ಜರಿ ಲಾಭ ಪಡೆದಿದೆ. 3 ತಿಂಗಳಲ್ಲಿ ಕೆನರಾ ಬ್ಯಾಂಕ್‌ನ ನಿವ್ವಳ ಲಾಭ 2,525 ಕೋಟಿ ರೂಪಾಯಿ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ 1,333 ಕೋಟಿ ರೂ ನಿವ್ವಳ ಲಾಭ ಕೆನರಾ ಬ್ಯಾಂಕ್‌ಗೆ ದಕ್ಕಿತ್ತು. ಅಂದರೆ ಅದರ ಲಾಭದಲ್ಲಿ ಶೇ. 89ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಕೆನರಾ ಬ್ಯಾಂಕ್‌ನ ಒಟ್ಟು ಆದಾಯ 24,932.19 ಕೋಟಿ ರೂ ಆಗಿದೆ. ಹಿಂದಿನ ವರ್ಷದಲ್ಲಿ ಇದೇ ಅವಧಿಯಲ್ಲಿ ಅದರ ಆದಾಯ 21,331.49 ಕೋಟಿ ರೂ ಇತ್ತು. ಕೆನರಾ ಬ್ಯಾಂಕ್‌ನ ಆದಾಯದ ಮಾಹಿತಿ ಪ್ರಕಟವಾಗುತ್ತಿದ್ದಂತೆಯೇ ಅಕ್ಟೋಬರ್ 21ರಂದು ಷೇರುಪೇಟೆಯಲ್ಲಿ ಕಂಪನಿಯ ಷೇರು ಮೌಲ್ಯ ಶೇ. 4ರಷ್ಟು ಹೆಚ್ಚಾಗಿ ಹೋಗಿದೆ. ಅ. 20ರ ಬ್ಯುಸಿನೆಸ್ ಎಂಡ್‌ನಲ್ಲಿ ಕೆನರಾ ಬ್ಯಾಂಕ್‌ನ ಷೇರು 259.3 ರೂಪಾಯಿ ಮಾರಾಟವಾಗಿತ್ತು.

English summary

Canara Bank receives the Banker’s Bank 2022 award, Details here

Canara Bank on Friday announced that it received the “Banker’s Bank of the Year Award 2022” for the India segment at the Global Banking Summit.
Story first published: Saturday, December 3, 2022, 12:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X