For Quick Alerts
ALLOW NOTIFICATIONS  
For Daily Alerts

ಕಚ್ಚಾತೈಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣವೇನು!?

|

ನವದೆಹಲಿ, ಅಕ್ಟೋಬರ್ 20: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗರಿಷ್ಠ ಮಟ್ಟಕ್ಕೆ ತಲುಪುತ್ತಿದೆ. ಕಲ್ಲಿದ್ದಲು ಮತ್ತು ವಿದ್ಯುತ್ ಕೊರತೆ ಸಮಸ್ಯೆಯ ನಡುವೆ 2018ರ ನಂತರ ಮೊದಲ ಬಾರಿಗೆ ಕಚ್ಚಾತೈಲದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡು ಬಂದಿದೆ.

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಈಗಾಗಲೇ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಪೆಟ್ರೋಲ್ ಕೆಲವು ರಾಜ್ಯಗಳಲ್ಲಿ ಈಗಾಗಲೇ 110ರ ಗಡಿಗೆ ಸಮೀಪಿಸಿದ್ದರೆ ಡೀಸೆಲ್ ದರ 100 ರೂಪಾಯಿ ಗಡಿ ದಾಟಿ ಹೋಗಿದೆ. ಈ ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆಯೇ ಎಂಬ ಆತಂಕ ಸೃಷ್ಟಿಯಾಗಿದೆ.

2 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಏರಿಕೆ: ಅ. 20ರ ರೇಟ್ ಇಲ್ಲಿದೆ2 ದಿನಗಳ ಬಳಿಕ ಪೆಟ್ರೋಲ್, ಡೀಸೆಲ್ ದರ ಏರಿಕೆ: ಅ. 20ರ ರೇಟ್ ಇಲ್ಲಿದೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆಯ ಹಿಂದಿನ ಅಸಲಿಗೆ ಕಾರಣಗಳೇನು?, ಕಚ್ಚಾತೈಲ ಬೆಲೆ ಏರಿಕೆಯು ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು?, ದೇಶದಲ್ಲಿ ಇಂಧನ ಬೆಲೆ ಮತ್ತಷ್ಟು ಗಗನಮುಖಿ ಆಗುತ್ತದೆಯೇ ಎಂಬುದರ ಕುರಿತು ಮುಂದೆ ತಿಳಿಯೋಣ.

ಇಂಧನ ಬೆಲೆ ಏರಿಕೆ ಆಗಿರುವುದು ಏಕೆ?

ಇಂಧನ ಬೆಲೆ ಏರಿಕೆ ಆಗಿರುವುದು ಏಕೆ?

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ವಿಶ್ವದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದ್ದಂತೆ ಜಾಗತಿಕ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆ ಬ್ರೆಂಟ್ ಕಚ್ಚಾತೈಲದ ಬೆಲೆ ಈ ವಾರದ ಆರಂಭದಲ್ಲಿ ಪ್ರತಿ ಬ್ಯಾರೆಲ್‌ಗೆ 85 ಡಾಲರ್ ಅನ್ನು ಮೀರಿದೆ. ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಏರಿಕೆಯ ಹೊರತಾಗಿಯೂ ಪ್ರಮುಖ ತೈಲ ಉತ್ಪಾದನಾ ದೇಶಗಳು ಕಚ್ಚಾತೈಲ ಪೂರೈಕೆಯನ್ನು ಮಾಡುತ್ತಿವೆ. ಒಂದು ವರ್ಷದ ಹಿಂದೆ ಪ್ರತಿ ಬ್ಯಾರೆಲ್‌ಗೆ 42.5 ಡಾಲರ್ ಆಗಿದ್ದು, ಈ ಬೆಲೆಗೆ ಹೋಲಿಸಿದರೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಬಹುಪಾಲು ಡಬಲ್ ಆಗಿದೆ.

ಹೆಚ್ಚುವರಿಯಾಗಿ 4 ಲಕ್ಷ ಬ್ಯಾರಲ್ ಕಚ್ಚಾತೈಲ ಉತ್ಪಾದನೆ

ಹೆಚ್ಚುವರಿಯಾಗಿ 4 ಲಕ್ಷ ಬ್ಯಾರಲ್ ಕಚ್ಚಾತೈಲ ಉತ್ಪಾದನೆ

ತೈಲ ಉತ್ಪಾದಿಸುವ OPEC+ ದೇಶಗಳ ಗುಂಪು ತನ್ನ ಇತ್ತೀಚಿನ ಸುತ್ತಿನ ಸಭೆಗಳಲ್ಲಿ ಹೆಚ್ಚುವರಿ ಕಚ್ಚಾತೈಲ ಉತ್ಪಾದಿಸುವ ಬಗ್ಗೆ ಚರ್ಚೆ ನಡೆಸಿವೆ. ನವೆಂಬರ್‌ನಲ್ಲಿ ತಿಂಗಳಲ್ಲಿ ಒಟ್ಟು ಕಚ್ಚಾತೈಲ ಪೂರೈಕೆಯನ್ನು 4,00,000 ಬ್ಯಾರೆಲ್‌ಗಳಷ್ಟು ಹೆಚ್ಚಿಸುವುದಾಗಿ ದೃಢಪಡಿಸಿವೆ. ಅಗ್ರ ತೈಲ ಉತ್ಪಾದಿಸುವ ದೇಶಗಳಾದ ಸೌದಿ ಅರೇಬಿಯಾ, ರಷ್ಯಾ, ಇರಾಕ್, ಯುಎಇ ಮತ್ತು ಕುವೈತ್-ಉತ್ಪಾದನೆಯ ಉಲ್ಲೇಖದ ಮಟ್ಟಕ್ಕಿಂತ ನವೆಂಬರ್‌ನಲ್ಲಿ ಹೆಚ್ಚಳದ ನಂತರವೂ ಶೇ.14ರಷ್ಟು ಕಡಿಮೆಯಾಗಿರುತ್ತದೆ.

2020ರಲ್ಲಿ ಕಚ್ಚಾತೈಲ ಉತ್ಪಾದನೆ ಕಡಿತಕ್ಕೆ ಒಪ್ಪಿಗೆ

2020ರಲ್ಲಿ ಕಚ್ಚಾತೈಲ ಉತ್ಪಾದನೆ ಕಡಿತಕ್ಕೆ ಒಪ್ಪಿಗೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ 2020ರಲ್ಲಿ OPEC+ ರಾಷ್ಟ್ರಗಳು ಕಚ್ಚಾತೈಲ ಉತ್ಪಾದನೆ ಮತ್ತು ಪೂರೈಕೆಯ ಪ್ರಮಾಣಯನ್ನು ಕಡಿತಗೊಳಿಸುವುದಕ್ಕೆ ಒಪ್ಪಿಗೆ ಸೂಚಿಸಿತ್ತು. ಆದರೆ ಬೇಡಿಕೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಕಚ್ಚಾತೈಲ ಉತ್ಪಾದನೆ ವೇಗವು ನಿಧಾನಗತಿಯಲ್ಲಿದೆ. ಭಾರತ ಮತ್ತು ಇತರ ತೈಲ ಆಮದು ರಾಷ್ಟ್ರಗಳು ತೈಲ ಪೂರೈಕೆಯನ್ನು ವೇಗವಾಗಿ ಹೆಚ್ಚಿಸಲು OPEC+ ಗೆ ಕರೆ ನೀಡಿವೆ. ಕಚ್ಚಾ ತೈಲ ಬೆಲೆ ಏರಿಕೆಯು ಜಾಗತಿಕ ಆರ್ಥಿಕತೆಯ ಚೇತರಿಕೆಗೆ ಧಕ್ಕೆ ತರಬಹುದು ಎಂದು ರಾಷ್ಟ್ರಗಳು ವಾದಿಸಿದೆ.

ನೈಸರ್ಗಿಕ ಅನಿಲ ವಿತರಣೆಯಲ್ಲಿ ಸಾರ್ವಕಾಲಿಕ ದಾಖಲೆ

ನೈಸರ್ಗಿಕ ಅನಿಲ ವಿತರಣೆಯಲ್ಲಿ ಸಾರ್ವಕಾಲಿಕ ದಾಖಲೆ

ಏಷ್ಯಾಕ್ಕೆ ನೈಸರ್ಗಿಕ ಅನಿಲ ವಿತರಣೆಯು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು ಪ್ರತಿ ಮೆಟ್ರಿಕ್ ಮಿಲಿಯನ್ ಬ್ರಿಟಿಷ್ ಥರ್ಮಲ್ ಯುನಿಟ್ (MMBTU)ಗೆ 56.3 ಡಾಲರ್ ಅನ್ನು ತಲುಪಿದೆ ಎಂದು SP ಗ್ಲೋಬಲ್ ಪ್ಲಾಟ್ಸ್ ಹೇಳಿದೆ. ಐಡಾ ಚಂಡಮಾರುತದಿಂದ ಉಂಟಾದ ಅಡೆತಡೆ ಮತ್ತು ಯುರೋಪಿನಲ್ಲಿ ಹೆಚ್ಚುತ್ತಿರುವ ಬೇಡಿಕೆಯ ನಡುವೆ ರಷ್ಯಾದಿಂದ ನಿರೀಕ್ಷಿತ ಪ್ರಮಾಣದ ನೈಸರ್ಗಿಕ ಅನಿಲ ಪೂರೈಕೆ ಆಗುತ್ತಿಲ್ಲ. ಇದರಿಂದ ಚಳಿಗಾಲದ ಹೊತ್ತಿಗೆ ಯುಎಸ್ನಲ್ಲಿ ನೈಸರ್ಗಿಕ ಅನಿಲದ ಕೊರತೆ ಹೆಚ್ಚಾಗುವ ಸಾಧ್ಯತೆಗಳಿವೆ.

ಕಲ್ಲಿದ್ದಲು ಕೊರತೆ ಸೃಷ್ಟಿಸಿದ ಅವಾಂತರಗಳು

ಕಲ್ಲಿದ್ದಲು ಕೊರತೆ ಸೃಷ್ಟಿಸಿದ ಅವಾಂತರಗಳು

ಚೀನಾ ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲು ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಇನ್ನೊಂದು ಕಡೆಯಲ್ಲಿ ಚೀನಾದಾದ್ಯಂತ ಕಾರ್ಖಾನೆಗಳು ವಿದ್ಯುತ್ ಕಡಿತವನ್ನು ಎದುರಿಸುತ್ತಿದೆ. ಜಾಗತಿಕ ಬೇಡಿಕೆಯಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿರುವುದರಿಂದ ಇಂಡೋನೇಷಿಯಾದಲ್ಲಿ ಕಳೆದ ಮಾರ್ಚ್ ನಲ್ಲಿ ಪ್ರತಿ ಟನ್‌ಗೆ 60 ಡಾಲರ್ ಇದ್ದ ಬೆಲೆಯು ಅಕ್ಟೋಬರ್ ವೇಳೆಗೆ ಪ್ರತಿ ಟನ್‌ಗೆ 200 ಡಾಲರ್ ಗೆ ಏರಿಕೆಯಾಗಿದೆ.

ಕಚ್ಚಾತೈಲ ಬೆಲೆ ಏರಿಕೆ ಪರಿಣಾಮ ಭಾರತದ ಮೇಲೆ ಬೀಳುತ್ತಾ?

ಕಚ್ಚಾತೈಲ ಬೆಲೆ ಏರಿಕೆ ಪರಿಣಾಮ ಭಾರತದ ಮೇಲೆ ಬೀಳುತ್ತಾ?

ಭಾರತದಲ್ಲಿ 2021ರ ಆರಂಭದಿಂದಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿಯಮಿತವಾಗಿ ಏರಿಕೆಯಾಗುತ್ತಿದ್ದು, ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿ ಆಗಿದೆ. ನವದೆಹಲಿಯಲ್ಲಿ ಕಳೆದ ಮೂರು ವಾರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 4.65 ರೂ ಹೆಚ್ಚಾಗಿದ್ದು, ಪ್ರತಿ ಲೀಟರ್‌ಗೆ 105.84 ರೂ. ಆಗಿದೆ. ಅದೇ ರೀತಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 5.75 ರೂ.ಗೆ ಏರಿಕೆಯಾಗಿದ್ದು 94.6 ರೂಪಾಯಿಗೆ ತಲುಪಿದೆ.

ಪೆಟ್ರೋಲ್ ಬಳಕೆ ಏರಿಕೆ, ಡೀಸೆಲ್ ಬಳಕೆ ಇಳಿಕೆ!

ಪೆಟ್ರೋಲ್ ಬಳಕೆ ಏರಿಕೆ, ಡೀಸೆಲ್ ಬಳಕೆ ಇಳಿಕೆ!

ಭಾರತವು ಪೆಟ್ರೋಲ್ ಬಳಕೆಯಲ್ಲಿ ತ್ವರಿತ ಚೇತರಿಕೆ ಕಂಡಿದ್ದು, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗೆ ಸಂಬಂಧಿಸಿದಂತೆ ನಿರ್ಬಂಧಗಳ ನಂತರ ಸೆಪ್ಟೆಂಬರ್‌ನಲ್ಲಿ ಪೆಟ್ರೋಲ್ ಬಳಕೆ ಶೇ.9ರಷ್ಟು ಹೆಚ್ಚಳವಾಗಿದ್ದು, ಡೀಸೆಲ್ ಬಳಕೆ 2020ರ ಮಟ್ಟಕ್ಕಿಂತ ಶೇ.6.5ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಲ್ಲಿ ಶೇಕಡಾ 38 ರಷ್ಟು ಡೀಸೆಲ್ ಪಾಲು ಹೊಂದಿದೆ. ಇದು ಕೈಗಾರಿಕೆ ಮತ್ತು ಕೃಷಿಯಲ್ಲಿ ಬಳಸುವ ಪ್ರಮುಖ ಇಂಧನವಾಗಿದೆ. "ಭಾರತದಲ್ಲಿ ಮುಂಬರುವ ಹಬ್ಬದ ದಿನಗಳಲ್ಲಿ ಆರ್ಥಿಕ ಚೇತರಿಕೆಯನ್ನು ವೇಗಗೊಳಿಸಲು ಮತ್ತು ಡೀಸೆಲ್ ಬಳಕೆ ಹೆಚ್ಚಾಗಲಿದ್ದು, ಬೇಡಿಕೆಯೂ ಹೆಚ್ಚುವ ನಿರೀಕ್ಷೆಯಿದೆ," ಎಂದು ಎಸ್ & ಪಿ ಗ್ಲೋಬಲ್ ಪ್ಲಾಟ್ಸ್ ಅನಾಲಿಟಿಕ್ಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ದೇಶದಲ್ಲಿ ನೈಸರ್ಗಿಕ ಅನಿಲ ಬೆಲೆ ಏರಿಕೆ

ದೇಶದಲ್ಲಿ ನೈಸರ್ಗಿಕ ಅನಿಲ ಬೆಲೆ ಏರಿಕೆ

ಹೆಚ್ಚಿನ ಅಂತರಾಷ್ಟ್ರೀಯ ಅನಿಲ ಬೆಲೆಗಳು ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲದ ಬೆಲೆಯಲ್ಲಿ ಪರಿಷ್ಕರಣೆಗೆ ಕಾರಣವಾಗಿದೆ. ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಕೋಶವು (ಪಿಪಿಎಸಿ) ನಾಮನಿರ್ದೇಶನದ ಅಡಿಯಲ್ಲಿ ಸರ್ಕಾರಿ ಸ್ವಾಮ್ಯದ ONGC ಮತ್ತು ಆಯಿಲ್ ಇಂಡಿಯಾ ಉತ್ಪಾದಿಸುವ ನೈಸರ್ಗಿಕ ಅನಿಲದ ಬೆಲೆಯನ್ನು ಹಿಂದಿನ ಆರು ತಿಂಗಳ ಅವಧಿಯಲ್ಲಿ ಪ್ರತಿ MMBTUಗೆ 1.79 ಡಾಲರ್ ನಿಂದ 2.9 ಡಾಲರ್ ಗೆ ನಿಗದಿಪಡಿಸಿತು. ಪಿಪಿಎಸಿ ಆಳದ ನೀರು, ಹೆಚ್ಚಿನ ಒತ್ತಡ ಮತ್ತು ತಾಪಮಾನಗಳಿಂದ ಹೊರ ತೆಗೆದ ಗ್ಯಾಸ್‌ಗೆ ಕಳೆದ ಆರು ತಿಂಗಳ ಹಿಂದೆ ಪ್ರತಿ MMBTUಗೆ 3.62 ಡಾಲರ್ ಇದ್ದು, ಈಗ ಅದರ ಬೆಲೆ ಪ್ರತಿ MMBTUಗೆ 6.13 ಡಾಲರ್ ಆಗಿದೆ.

ಗ್ಯಾಸ್ ಬೆಲೆಯಲ್ಲಿನ ಹೆಚ್ಚಳವು ಸಾರಿಗೆ ಇಂಧನವಾಗಿ ಬಳಸುವ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ಮತ್ತು ಅಡುಗೆ ಇಂಧನವಾಗಿ ಬಳಸುವ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್ ಜಿ) ಎರಡರ ಬೆಲೆಯ ಏರಿಕೆಯಾಗಿದೆ. ಸಿಎನ್ಜಿಯ ಬೆಲೆಯು ಈ ತಿಂಗಳಲ್ಲಿ ಪ್ರತಿ ಕೆಜಿಗೆ 4.56 ರೂ.ಗಳಿಂದ ರಾಷ್ಟ್ರೀಯ ರಾಜಧಾನಿಯಲ್ಲಿ 49.8 ರೂ.ಗಳಿಗೆ ಹೆಚ್ಚಾಗಿದೆ. ಮತ್ತು ಪಿಎನ್ಜಿಯ ಪ್ರತಿ ಪಿಎಂಜಿಗೆ ಪ್ರತಿ ರೂ. 4.2 ರಷ್ಟು ಏರಿಕೆಯಾಗಿದ್ದು, 35.11 ರೂಪಾಯಿ ತಲುಪಿದೆ.

 

English summary

Causes Behind Soaring Fuel Prices and Their Impact on India; Explained in Kannada

Here We explaining the key causes behind soaring fuel prices and their impact on India. Read on.
Story first published: Wednesday, October 20, 2021, 10:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X