For Quick Alerts
ALLOW NOTIFICATIONS  
For Daily Alerts

ವಿಡಿಯೋಕಾನ್ ಅಧ್ಯಕ್ಷ ವೇಣುಗೋಪಾಲ್ ದೂತ್ ವಿರುದ್ಧ ಸಿಬಿಐ ಎಫ್ ಐಆರ್

|

ಬ್ಯಾಂಕ್ ಗೆ ವಂಚನೆ ಮಾಡಿದ ಪ್ರಕರಣದಲ್ಲಿ ವಿಡಿಯೋಕಾನ್ ಇಂಡಸ್ಟ್ರೀಸ್ ಅಧ್ಯಕ್ಷ ವೇಣುಗೋಪಾಲ್ ದೂತ್ ವಿರುದ್ಧ ಮಂಗಳವಾರ ಸಿಬಿಐ ಪ್ರಕರಣ ದಾಖಲಿಸಿದೆ. ಮೊಜಾಂಬಿಕ್ ನಲ್ಲಿ ಆಸ್ತಿ ಖರೀದಿ ಮಾಡುವ ವೇಳೆಯಲ್ಲಿ ಈ ವಂಚನೆ ನಡೆದಿದೆ ಎಂದು ತನಿಖಾ ಸಂಸ್ಥೆಯ ವರದಿಗಳು ಹೇಳಿವೆ.

ಚಂದಾ ಕೊಚ್ಚಾರ್ ವಿರುದ್ಧ ಸಿಬಿಐನಿಂದ ನೋಟಿಸ್ ಜಾರಿಚಂದಾ ಕೊಚ್ಚಾರ್ ವಿರುದ್ಧ ಸಿಬಿಐನಿಂದ ನೋಟಿಸ್ ಜಾರಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್ ಗಳ ಒಕ್ಕೂಟಕ್ಕೆ ನಷ್ಟ ಆಗಲು ಕಾರಣವಾಗಿದ್ದಕ್ಕೆ ಎಫ್ ಐಆರ್ ದಾಖಲಾಗಿದೆ. ಮೊಜಾಂಬಿಕ್ ನಲ್ಲಿ ತೈಲ ಮತ್ತು ಅನಿಲ ಸಂಪತ್ತು ಖರೀದಿ ವ್ಯವಹಾರದಲ್ಲಿ ವಿಡಿಯೋಕಾನ್ ನಿಂದ ವಂಚನೆ ನಡೆದಿದೆ. ಆ ನಂತರ ಅದನ್ನು ಎಸ್ ಬಿಐ ನೇತೃತ್ವದ ಒಕ್ಕೂಟ ತಮ್ಮ ಸುಪರ್ದಿಗೆ ತೆಗೆದುಕೊಂಡಿವೆ ಎಂದು ಆರೋಪಿಸಲಾಗಿದೆ.

ವಂಚನೆಯಲ್ಲಿ ಬ್ಯಾಂಕ್ ಸಿಬ್ಬಂದಿ ಕೂಡ ಶಾಮೀಲು

ವಂಚನೆಯಲ್ಲಿ ಬ್ಯಾಂಕ್ ಸಿಬ್ಬಂದಿ ಕೂಡ ಶಾಮೀಲು

ಈ ಪ್ರಕರಣವು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಅಧಿಕಾರಿಗಳು ಮತ್ತು ಬ್ಯಾಂಕ್ ಗಳ ಒಕ್ಕೂಟದ ಅಧಿಕಾರಿಗಳ ಪ್ರಾಥಮಿಕ ತನಿಖೆ ಮೇಲೆ ಆಧಾರವಾಗಿದೆ. ದೂರು ದಾಖಲಾಗಿರುವ ಪ್ರಕಾರ, ವಿಡಿಯೋಕಾನ್ ಮೊಜಾಂಬಿಕ್ (ವಿಡಿಯೋಕಾನ್ ಇಂಡಸ್ಟ್ರೀಸ್ ಘಟಕ) ಅಧಿಕಾರಿಗಳ ಜತೆಗೆ ಬ್ಯಾಂಕ್ ನ ಕೆಲವು ಸಿಬ್ಬಂದಿ ಶಾಮೀಲಾಗಿ ಆ ಕಂಪೆನಿಗೆ ಲಾಭ ಮಾಡಿಕೊಟ್ಟಿದ್ದಾರೆ. ಪ್ರಾಥಮಿಕ ತನಿಖೆ ಅನ್ವಯ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ ಮತ್ತು ಐಸಿಐಸಿಐ ನಿಂದ ಲಂಡನ್ ನ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಗೆ 705.45 ಮಿಲಿಯನ್ ಅಮೆರಿಕನ್ ಡಾಲರ್ ಪಾವತಿಸಲಾಗಿದೆ. ಆದರೆ ಮಾರಾಟದ ಬೆಲೆಯಾದ 650 ಮಿಲಿಯನ್ ಅಮೆರಿಕನ್ ಡಾಲರ್ ಮಾತ್ರ ದೂತ್ ನಿಂದ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಗೆ ಪಾವತಿ ಆಗಬೇಕಿತ್ತು ಎಂದು ಎಫ್ ಐಆರ್ ನಲ್ಲಿ ಇದೆ.

ಸಾಲ ನೀಡಿದಾಗಲೇ ಆಸ್ತಿ ವಶಕ್ಕೆ ಪಡೆಯಲಿಲ್ಲ

ಸಾಲ ನೀಡಿದಾಗಲೇ ಆಸ್ತಿ ವಶಕ್ಕೆ ಪಡೆಯಲಿಲ್ಲ

ಈ ಮೊತ್ತವನ್ನು ಬ್ಯಾಂಕ್ ಗಳು 2013ರ ಫೆಬ್ರವರಿಯಲ್ಲೇ ಪಾವತಿಸಿವೆ, ಆದರೆ ಆ ಸ್ವತ್ತುಗಳ ಸುಪರ್ದಿಯನ್ನು 2013ರ ನವೆಂಬರ್ ತನಕ ತೆಗೆದುಕೊಂಡಿಲ್ಲ. ಇದರಿಂದ ಬ್ಯಾಂಕ್ ಗಳಿಗೆ ದೊಡ್ಡ ಮಟ್ಟದ ನಷ್ಟವಾಗಿದೆ. ಈ ಮಧ್ಯೆ ಒಂಬತ್ತು ತಿಂಗಳ ಅವಕಾಶ ಸಿಕ್ಕಿತಲ್ಲಾ, ಅಷ್ಟರಲ್ಲಿ ವಿಡಿಯೋಕಾನ್ ತಪ್ಪಾದ ಬಗೆಯಲ್ಲಿ ಲಾಭ ಮಾಡಿಕೊಂಡಿದೆ. 2013ರ ಫೆಬ್ರವರಿಯಲ್ಲಿ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಗೆ ಪಾವತಿಸಬೇಕಿದ್ದ ಬಾಕಿ ಮೊತ್ತವು 400 ಮಿಲಿಯನ್ ನಿಂದ 530 ಮಿಲಿಯನ್ ಗೆ ಏರಿಕೆ ಆಗಿತ್ತು. ಆಗ ಬ್ಯಾಂಕ್ ಗಳ ಒಕ್ಕೂಟಕ್ಕೆ ಮನವಿ ಮಾಡಿದ ವಿಡಿಯೋಕಾನ್, ಆ ಬಾಕಿ ಮೊತ್ತವನ್ನು ಪಾವತಿ ಮಾಡಿ, ಮೊಜಾಂಬಿಕ್ ನಲ್ಲಿನ ತೈಲ ಮತ್ತು ಅನಿಲದ ಆಸ್ತಿಯ ಸುಪರ್ದಿಯನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿತು. ಈ ಮೊತ್ತವನ್ನು 2013ರ ಫೆಬ್ರವರಿಯಲ್ಲಿ ಪಾವತಿಸಲಾಯಿತು. ಆದರೆ ಆಸ್ತಿ ವಶಕ್ಕೆ ಪಡೆಯಲಿಲ್ಲ. ವಿಡಿಯೋಕಾನ್ ಮಾತ್ರ ಸ್ಟ್ಯಾಂಡರ್ಡ್ ಚಾರ್ಟರ್ಡ್ ನಿಂದ ಸಾಲ ಪಡೆಯುವುದು ಮುಂದುವರಿಸಿತು ಎಂದು ಸಿಬಿಐ ಎಫ್ ಐಆರ್ ನಲ್ಲಿ ಇದೆ.

2019ರಲ್ಲಿ ಸಿಬಿಐನಿಂದ ಪ್ರಾಥಮಿಕ ತನಿಖೆ ಆರಂಭ

2019ರಲ್ಲಿ ಸಿಬಿಐನಿಂದ ಪ್ರಾಥಮಿಕ ತನಿಖೆ ಆರಂಭ

ಎಸ್ ಬಿಐ ನೇತೃತ್ವದ ಬ್ಯಾಂಕ್ ಗಳು ಮೊಜಾಂಬಿಕ್, ಇಂಡೋನೇಷ್ಯಾ ಹಾಗೂ ಬ್ರೆಜಿಲ್ ಆಸ್ತಿಗಳ ಸುಪರ್ದಿಗೆ ಪಡೆದದ್ದು 2013ರ ನವೆಂಬರ್ ನಲ್ಲಿ. ಅದೇ ವೇಳೆಗೆ ವಿಡಿಯೋಕಾನ್ ನಿಂದ ಎಸ್ ಬಿಐಗೆ ಮನವಿ ಮಾಡಲಾಯಿತು, ಸ್ಟ್ಯಾಂಡರ್ಡ್ ಚಾರ್ಟರ್ಡ್ ಗೆ ಬಾಕಿ ಪಾವತಿಸಬೇಕಾಗಿದೆ ಎಂಬ ಕಾರಣಕ್ಕೆ ಹಣವನ್ನು ಕೇಳಲಾಯಿತು. ಇನ್ನು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ನಿಂದ ಪಡೆದ ಸಾಲವನ್ನು ವಿಡಿಯೋಕಾನ್ ಪ್ರವರ್ತಕರು ಅದಾಗಲೇ ತಿಳಿಸಿದ್ದ ಉದ್ದೇಶಕ್ಕೆ ಅಲ್ಲದೆ ಬೇರೆಯದಕ್ಕೆ ಮಾಡಿದ್ದಾರೆ ಎಂದು ಎಫ್ ಐಆರ್ ನಲ್ಲಿದೆ. ಪ್ರಾಥಮಿಕ ತನಿಖೆ 2019ರಲ್ಲಿ ಆರಂಭವಾಗಿದೆ. ಅದು ಐಸಿಐಸಿಐ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ದೂತ್ ಮನೆಯಿಂದ ವಶಪಡಿಸಿಕೊಂಡ ಕೆಲ ದಾಖಲೆಗಳನ್ನು ಆಧರಿಸಿ, ತನಿಖೆ ಆರಂಭಿಸಲಾಗಿತ್ತು.

English summary

CBI Files FIR Against Videocon Chairman Venugopal Dhoot

FIR filed against Videcon industries chairman Venugopal Dhooth in causing wrongful losses to banks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X