For Quick Alerts
ALLOW NOTIFICATIONS  
For Daily Alerts

ಆಧಾರ್ ಇಲ್ಲದ ಜಿಎಸ್ ಟಿ ನೋಂದಣಿಗೆ ಹೊಸ ನಿಯಮ

By ಅನಿಲ್ ಆಚಾರ್
|

ಆಧಾರ್ ಇಲ್ಲದಂತೆ ಉದ್ಯಮಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ನೋಂದಣಿ ಆಗಬೇಕು ಎಂದಾದಲ್ಲಿ ಸ್ಥಳ ಪರಿಶೀಲನೆಯನ್ನು ಮಾಡಲೇಬೇಕು ಎಂದು ಸಿಬಿಐಸಿ (ಸೆಂಟ್ರಲ್ ಬೋರ್ಡ್ ಆಫ್ ಇನ್ ಡೈರೆಕ್ಟ್ ಟ್ಯಾಕ್ಸಸ್ ಅಂಡ್ ಕಸ್ಟಮ್ಸ್) ಹೊಸ ನಿಯಮಾವಳಿಗಳು ತಿಳಿಸಿವೆ.

ಹೊಸದಾಗಿ ಜಿಎಸ್ ಟಿ ನೋಂದಣಿ ಮಾಡಬೇಕು ಎಂದಿದ್ದಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್ ಗಳನ್ನು ರೂಪಿಸಲಾಗಿದೆ. ಉದ್ಯಮ ನೋಂದಣಿಗೆ ಆಧಾರ್ ಖಾತ್ರಿಗೊಳಿಸದಿದ್ದಲ್ಲಿ ಅಥವಾ ವಿಫಲವಾಗಿದ್ದಲ್ಲಿ ಆವರಣದ ಪರಿಶೀಲನೆ ನಡೆಸಬೇಕು. ಒಂದು ವೇಳೆ ಕಷ್ಟವಾದಲ್ಲಿ ಅಧಿಕಾರಿಗಳು ಹೆಚ್ಚುವರಿ ದಾಖಲಾತಿಗಳನ್ನು ಕೇಳಬಹುದು.

ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ನಕಲಿ ಇನ್ ವಾಯ್ಸ್; 25ಕ್ಕೂ ಹೆಚ್ಚು ಬಂಧನಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಗೆ ನಕಲಿ ಇನ್ ವಾಯ್ಸ್; 25ಕ್ಕೂ ಹೆಚ್ಚು ಬಂಧನ

ಜಿಎಸ್ ಟಿ ನೋಂದಣಿಗೂ ಮುನ್ನ ಆ ಸಂಸ್ಥೆಯ ಸಾಚಾತನ ಖಾತ್ರಿ ಪಡಿಸುವ ಸಲುವಾಗಿ ಹಾಗೂ ನಕಲಿ ಇನ್ ವಾಯ್ಸ್ ಗಳನ್ನು ಪರಿಶೀಲಿಸಲು ಮತ್ತು ಟ್ಯಾಕ್ಸ್ ಕ್ರೆಡಿಟ್ ಗಳ ವಂಚನೆಗಳನ್ನು ತಡೆಯುವ ಸಲುವಾಗಿ ಈ ನಿರ್ಧಾರ ಮಾಡಲಾಗಿದೆ. ಇನ್ನು ಹೊಸದಾಗಿ ವ್ಯಾಪಾರ ಮಾಡುವವರಿಗೆ ಸಮಸ್ಯೆ ಆಗಬಾರದು ಎಂಬ ಕಡೆಯೂ ಗಮನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಧಾರ್ ಇಲ್ಲದ ಜಿಎಸ್ ಟಿ ನೋಂದಣಿಗೆ ಹೊಸ ನಿಯಮ

ನಕಲಿ ಇನ್ ವಾಯ್ಸ್ ಗಳು ಹಾಗೂ ತೆರಿಗೆ ಕ್ರೆಡಿಟ್ ಗಳ ವಂಚನೆಯು ಜಿಎಸ್ ಟಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ದೇಶದಾದ್ಯಂತ ನಡೆದ ಕಾರ್ಯಾಚರಣೆಯಲ್ಲಿ ಜಿಎಸ್ ಟಿ ಗುಪ್ತಚರ ವಿಭಾಗದವರು 994 ಪ್ರಕರಣಗಳನ್ನು 3161 ಸಂಸ್ಥೆಗಳ ವಿರುದ್ಧ ದಾಖಲಿಸಿ, 92 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ಯಾಂಕ್ ಗಳಿಂದ ಸಾಲ ಪಡೆಯುವ ಸಲುವಾಗಿ ಆಗದಂಥ ವ್ಯವಹಾರಗಳನ್ನು ಸಹ ತೋರಿಸುವಂಥ ಪದ್ಧತಿ ಇದೆ. ಜಿಎಸ್ ಟಿ ಹಾಗೂ ಆದಾಯ ತೆರಿಗೆ ತಪ್ಪಿಸಲು ಮತ್ತು ಕಂಪೆನಿಯಿಂದ ಅನುದಾನವನ್ನು ಬೇರೆಡೆ ಹರಿಸುವುದಕ್ಕೆ ನಕಲಿ ಇನ್ ವಾಯ್ಸ್ ಬಳಸಲಾಗುತ್ತದೆ. ಇದರ ಜತೆಗೆ ಜಿಎಸ್ ಟಿ ರೀಫಂಡ್ ಅನ್ನು ತಪ್ಪಾದ ದಾರಿಯಲ್ಲಿ ಬಳಸಲು ಸಹ ಇದನ್ನು ಉಪಯೋಗಿಸಲಾಗುತ್ತದೆ. ಇದನ್ನು ತಡೆಯುವ ಉದ್ದೇಶ ಸರ್ಕಾರಕ್ಕೆ ಇದ್ದು, ಅದಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

English summary

CBIC Made Physical Verification Compulsory For GST Registration Without Aadhaar

New rules introduced by central government, CBIC made physical verification compulsory for GST registration without Aadhaar. Here is the details.
Story first published: Sunday, November 29, 2020, 23:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X