For Quick Alerts
ALLOW NOTIFICATIONS  
For Daily Alerts

ಮಕ್ಕಳ ಶಿಕ್ಷಣ ಭತ್ಯೆಯಡಿ ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಮತ್ತೆ ವೇತನ ಹೆಚ್ಚಳ

|

ಕೇಂದ್ರ ಸರ್ಕಾರದ ಉದ್ಯೋಗಿಗಳು ಸೇರಿದಂತೆ ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಕೇಂದ್ರ ಸರ್ಕಾರವು ಇತ್ತೀಚೆಗೆ ಹೆಚ್ಚಳ ಮಾಡಿದೆ. ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಶೇಕಡ 17 ರಿಂದ ಶೇಕಡ 28 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯಲಿದ್ದಾರೆ. ಹಾಗೆಯೇ ಮನೆ ಬಾಡಿಗೆ ಭತ್ಯೆಯು ಶೇಕಡ 24 ರಿಂದ ಶೇಕಡ 27 ಏರಿಕೆಯಾಗಿದೆ. ಹಾಗೆಯೇ ಇನ್ನು ಉದ್ಯೋಗಿಗಳ ಬೇಡಿಕೆಯಂತೆ ಕೇಂದ್ರ ಸರ್ಕಾರವು ಜುಲೈ ತಿಂಗಳಿನಲ್ಲಿ ಡಿಎಯನ್ನು ಇನ್ನೂ ಶೇಕಡ ಮೂರರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಇನ್ನು ಈ ನಡುವೆ ಉದ್ಯೋಗಿಗಳಿಗೆ ಮಕ್ಕಳ ಶಿಕ್ಷಣ ಭತ್ಯೆ (ಸಿಇಎ) ನೀಡಬೇಕು ಎಂಬ ಆಗ್ರಹದಂತೆ ಉದ್ಯೋಗಿಗಳಿಗೆ ಮತ್ತೆ ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರವು ಘೋಷಣೆ ಮಾಡಿದೆ.

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ: ಡಿಎ ಹೆಚ್ಚಳವಾದಂತೆ ಆಗಲಿದೆ ವೇತನ ಹೆಚ್ಚಳಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಸಿಹಿಸುದ್ದಿ: ಡಿಎ ಹೆಚ್ಚಳವಾದಂತೆ ಆಗಲಿದೆ ವೇತನ ಹೆಚ್ಚಳ

ಕೊರೊನಾ ವೈರಸ್‌ ಸಾಂಕ್ರಾಮಿಕದ ಕಾರಣದಿಂದಾಗಿ ಮಕ್ಕಳ ಶಿಕ್ಷಣ ಭತ್ಯೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಕೇಂದ್ರ ಸರ್ಕಾರದ ಉದ್ಯೋ‌ಗಿಗಳು ಈಗ ಮಕ್ಕಳ ಶಿಕ್ಷಣ ಭತ್ಯೆಗಾಗಿ ಅರ್ಜಿ ಸಲ್ಲಿಸಬಹುದು.

 ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಮತ್ತೆ ವೇತನ ಹೆಚ್ಚಳ

ಲಾಕ್‌ಡೌನ್‌ ಕಾರಣದಿಂದಾಗಿ ಶಾಲೆಗಳು ಮುಚ್ಚಲಾಗಿದ್ದ ಕಾರಣದಿಂದಾಗಿ ಮಕ್ಕಳ ಶಿಕ್ಷಣ ಭತ್ಯೆಯನ್ನು ಸ್ಥಗಿತ ಮಾಡಲಾಗಿತ್ತು. ಆದರೆ ಈಗ ಶಾಲೆಗಳನ್ನು ಮತ್ತೆ ಆರಂಭ ಮಾಡಲಾಗಿರುವ ಹಿನ್ನೆಲೆ ಕೇಂದ್ರ ಸರ್ಕಾರವು ಈಗ ಮತ್ತೆ ಈ ಅರ್ಜಿ ಸಲ್ಲಿಕೆಯನ್ನು ಆರಂಭ ಮಾಡಲು ನಿರ್ಧಾರ ಮಾಡಿದೆ. ಅದರಂತೆ ಕೇಂದ್ರ ಸರ್ಕಾರದ ಉದ್ಯೋಗಿಗಳು ಮಕ್ಕಳ ಶಿಕ್ಷಣ ಭತ್ಯೆಗಾಗಿ ಈಗ ಮತ್ತೆ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹಿಂದೆ ಮಕ್ಕಳ ಶಿಕ್ಷಣ ಭತ್ಯೆಯು ತಿಂಗಳಿಗೆ ರೂಪಾಯಿ 2,250 ಆಗಿತ್ತು. ಆದರೆ ಏಳನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಕೇಂದ್ರ ಸರ್ಕಾರದ ಉದ್ಯೋಗಿಗಳ ಮಕ್ಕಳಿಗೆ ಈಗ ಮಕ್ಕಳ ಶಿಕ್ಷಣ ಭತ್ಯೆಗೆ ಅರ್ಜಿ ಸಲ್ಲಿಸಿದ ಬಳಿಕ ತಿಂಗಳಿಗೆ ರೂಪಾಯಿ 4,500 ದೊರೆಯಲಿದೆ.

ಕುಟುಂಬ ಸದಸ್ಯರಿಗೆ ಈ ಮಾಹಿತಿಗಳನ್ನು ನೀವು ತಿಳಿಸಿರಲೇಬೇಕು..ಕುಟುಂಬ ಸದಸ್ಯರಿಗೆ ಈ ಮಾಹಿತಿಗಳನ್ನು ನೀವು ತಿಳಿಸಿರಲೇಬೇಕು..

ಈ ಬಗ್ಗೆ ಹೊರಡಿಸಿರುವ ನೋಟಿಸ್‌ನಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು, "ಮಕ್ಕಳ ಶಿಕ್ಷಣ ಭತ್ಯೆಯನ್ನು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಮಕ್ಕಳ ಉದ್ಯೋಗದ ಅಗತ್ಯ ದಾಖಲೆಗಳನ್ನು ಒದಗಿಸಿದ ನಂತರ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಉದ್ಯೋಗಿಗಳು ಇಮೇಲ್‌ ಪ್ರತಿ, ಮಕ್ಕಳ ಫಲಿತಾಂಶದ ಎಸ್‌ಎಮ್‌ಎಸ್‌ ಅಥವಾ ಫಲಿತಾಂಶ ಪ್ರಮಾಣ ಪತ್ರದ ಪ್ರತಿ ಅಥವಾ ಶುಲ್ಕ ಪಾವತಿ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಿ ಈ ಮಕ್ಕಳ ಶಿಕ್ಷಣ ಭತ್ಯೆಯನ್ನು ಪಡೆಯಬಹುದಾಗಿದೆ. ಈ ಮಕ್ಕಳ ಶಿಕ್ಷಣ ಭತ್ಯೆಯು 2020 ಮಾರ್ಚ್‌ವರೆಗೆ ಹಾಗೂ 2021 ಮಾರ್ಚ್‌ವರೆಗಿನ ಶಿಕ್ಷಣಕ್ಕೆ ಮಾತ್ರ ಅನ್ವಯವಾಗಲಿದೆ," ಎಂದು ಸ್ಪಷ್ಟಪಡಿಸಿದೆ.

ಇದರ ಪ್ರಕಾರವಾಗಿ ಮಕ್ಕಳಿಗೆ ಎರಡು ಶೈಕ್ಷಣಿಕ ವರ್ಷದ ಶಿಕ್ಷಣ ಭತ್ಯೆಯನ್ನು ಕೇಂದ್ರ ಸರ್ಕಾರವು ನೀಡಲಿದೆ. ತಿಂಗಳಿಗೆ 4,500 ರೂಪಾಯಿಯಂತೆ ಎರಡು ವರ್ಷದ ಹಣವನ್ನು ಕೇಂದ್ರ ಸರ್ಕಾರ ಶಿಕ್ಷಣ ಭತ್ಯೆಯಾಗಿ ನೀಡಲಿದೆ.

"ಇನ್ನು ಹಲವಾರು ಕೇಂದ್ರ ಸರ್ಕಾರದ ಉದ್ಯೋಗಿಗಳು ಕೊರೊನಾ ವೈರಸ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ತಮ್ಮ ಮಕ್ಕಳಿಗೆ ಫಲಿತಾಂಶವು ಎಸ್‌ಎಮ್‌ಎಸ್‌ ಅಥವಾ ಇಮೇಲ್‌ ಮೂಲಕ ಬಂದಿಲ್ಲ. ಹಾಗೆಯೇ ಮಕ್ಕಳಿಗೆ ಫಲಿತಾಂಶ ಪ್ರಮಾಣ ಪತ್ರವೂ ಕೂಡಾ ಲಭಿಸಿಲ್ಲ. ಇನ್ನು ಮಕ್ಕಳ ಶಿಕ್ಷಣ ಶುಲ್ಕವನ್ನು ಕೊರೊನಾ ವೈರಸ್‌ ಸಾಂಕ್ರಾಮಿಕದ ಕಾರಣದಿಂದಾಗಿ ಆನ್‌ಲೈನ್‌ ಮೂಲಕ ನಾವು ಪಾವತಿ ಮಾಡಿದ್ದೇವೆ. ಇದರಿಂದಾಗಿ ನಮಗೆ ಮಕ್ಕಳ ಶಿಕ್ಷಣ ಭತ್ಯೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ," ಎಂದು ಕೂಡಾ ಇಲಾಖೆಯು ಈ ಸಂದರ್ಭದಲ್ಲೇ ಉಲ್ಲೇಖ ಮಾಡಿದೆ.

ಇನ್ನು ಮಕ್ಕಳು ಅವಳಿ ಜವಳಿ ಆಗಿದ್ದರೆ, ಎರಡನೇ ಮಗುವಿಗೂ ಈ ಮಕ್ಕಳ ಶಿಕ್ಷಣ ಭತ್ಯೆ ಲಭಿಸಲಿದೆ ಎಂಬುವುದನ್ನು ನಾವು ಈಗ ಸ್ಮರಿಸಬಹುದು.

English summary

Central Government Again Hikes Salary Under 7th Pay Commission

Now the government again declared that the employees might have a salary hike because of the Child Education Allowance (CEA) claim.
Story first published: Sunday, September 5, 2021, 15:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X