For Quick Alerts
ALLOW NOTIFICATIONS  
For Daily Alerts

ಇ ಪಾಸ್ ಪೋರ್ಟ್ ಗೆ ಅರ್ಜಿ ಹಾಕಲು ಸಿದ್ಧರಾಗಿ! ಏನಿದರ ವಿಶೇಷ ಗೊತ್ತಾ?

|

ಭಾರತದ ನಾಗರಿಕರು ಸದ್ಯದಲ್ಲೇ ಚಿಪ್ ಇರುವ ಎಲೆಕ್ಟ್ರಾನಿಕ್ ಪಾಸ್ ಪೋರ್ಟ್ ಗೆ ಅರ್ಜಿ ಹಾಕಬಹುದು. ಎಲೆಕ್ಟ್ರಾನಿಕ್ ಪಾಸ್ ಪೋರ್ಟ್ ತಯಾರಿಗೆ ಅಗತ್ಯ ಇರುವ ವಸ್ತುಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಬುಧವಾರ ಹೇಳಿದ್ದಾರೆ. ಚಿಪ್ ಇರುವ ಇ ಪಾಸ್ ಪೋರ್ಟ್ ನಿಂದ ಭಸ್ರತಾ ಉದ್ದೇಶ ಮತ್ತಷ್ಟು ಬಲಗೊಳ್ಳಲಿದೆ.

ಪಾಸ್ ಪೋರ್ಟ್ ಸೇವಾ ದಿವಸ್ ಸಂದರ್ಭದಲ್ಲಿ ಮಾತನಾಡಿದ ಜೈಶಂಕರ್, ಭಾರತದ ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರ ತೆರೆಯಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಸದ್ಯಕ್ಕೆ 488 ಲೋಕಸಭಾ ಕ್ಷೇತ್ರದಲ್ಲಿ ಪಾಸ್ ಪೋರ್ಟ್ ಕಚೇರಿ ಇದೆ ಎಂದು ಹೇಳಿದ್ದಾರೆ.

ಏನಿದು ಇ ಪಾಸ್ ಪೋರ್ಟ್?

ಏನಿದು ಇ ಪಾಸ್ ಪೋರ್ಟ್?

ಇ ಪಾಸ್ ಪೋರ್ಟ್ ನಲ್ಲಿ ಎಲೆಕ್ಟ್ರಾನಿಕ್ ಚಿಪ್ ಇರುತ್ತದೆ. ಅದರಲ್ಲಿ ಪಾಸ್ ಪೋರ್ಟ್ ನ ಡೇಟಾ ಪೇಜ್ ನಲ್ಲಿ ಮುದ್ರಣವಾಗಿರುವ ಮಾಹಿತಿ ಇರುತ್ತದೆ. ಪ್ರಯಾಣಿಕರ ಬಯೋಮೆಟ್ರಿಕ್ ಮಾಹಿತಿ ಕೂಡ ಚಿಪ್ ನಲ್ಲಿ ಸಂಗ್ರಹ ಆಗಿರುತ್ತದೆ. ಇಮಿಗ್ರೇಷನ್ ಕೌಂಟರ್ ಗಳ ಇಷ್ಟುದ್ದ ಸಾಲಿನಲ್ಲಿ ನಿಲ್ಲುವ ಅಗತ್ಯ ಇರುವುದಿಲ್ಲ. ಹೊಸ ಇ ಪಾಸ್ ಪೋರ್ಟ್ ಅನ್ನು ಕೆಲವೇ ನಿಮಿಷದಲ್ಲಿ ಸ್ಕ್ಯಾನ್ ಮಾಡಬಹುದು.

ತೂಕ ಹಾಗೂ ದಪ್ಪ ಎರಡೂ ಹೆಚ್ಚು

ತೂಕ ಹಾಗೂ ದಪ್ಪ ಎರಡೂ ಹೆಚ್ಚು

ಆದರೆ, ಮಾಮೂಲಿ ಪಾಸ್ ಪೋರ್ಟ್ ಗಿಂತ ಇ ಪಾಸ್ ಪಾರ್ಟ್ ತೂಕ ಸ್ವಲ್ಪ ಹೆಚ್ಚಿರುತ್ತದೆ ಹಾಗೂ ದಪ್ಪನಾಗಿರುತ್ತದೆ. ಹೀಗೆ ಚಿಪ್ ಇರುವ ಪಾಸ್ ಪೋರ್ಟ್ ಗಳು ಪರಿಚಯಿಸುವುದರಿಂದ ಇವುಗಳನ್ನು ನಕಲು ಮಾಡುವುದನ್ನು ತಡೆಯಬಹುದು ಎಂಬುದು ಕೇಂದ್ರಸರ್ಕಾರದ ನಂಬಿಕೆ. ಯಾರಾದರೂ ಆ ಚಿಪ್ ಬದಲಾಯಿಸಲು ಯತ್ನಿಸಿದಲ್ಲಿ ಗುರುತು ಸಾಬೀತು ಮಾಡುವುದು ಸಾಧ್ಯವಾಗಲ್ಲ.

120 ದೇಶಗಳಿಂದ ಇ ಪಾಸ್ ಪೋರ್ಟ್ ಬಳಕೆ

120 ದೇಶಗಳಿಂದ ಇ ಪಾಸ್ ಪೋರ್ಟ್ ಬಳಕೆ

ಇನ್ನು ಇದು ಹೇಗೆ ರೂಪುಗೊಂಡಿರುತ್ತದೆ ಅಂದರೆ, ಪಾಸ್ ಪೋರ್ಟ್ ದತ್ತಾಂಶವನ್ನು ಎಲ್ಲೋ ಇದ್ದು, ಅಳಿಸಿ ಹಾಕಲು ಸಾಧ್ಯವಿಲ್ಲ. ಯುನೈಟೆಡ್ ಕಿಂಗ್ ಡಮ್, ಯುನೈಟೆಡ್ ಸ್ಟೇಟ್ಸ್, ಜರ್ಮನಿ ಸೇರಿದಂತೆ ಕನಿಷ್ಠ 120 ದೇಶಗಳು ಬಯೋಮೆಟ್ರಿಕ್ ಎಲೆಕ್ಟ್ರಾನಿಕ್ ಪಾಸ್ ಪೊರ್ಟ್ ಅನ್ನು ಹೊಂದಿವೆ.

English summary

Central Government Plan To Introduce E Passport; What Are The Features?

Central government plans to introduce chip based e passport. Here is an explainer about features.
Story first published: Wednesday, June 24, 2020, 20:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X