ಆದಾಯ ಖೋತಾ ಅನುದಾನವಾಗಿ ತಿಂಗಳ ಕಂತು 6,195 ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರದಿಂದ ಹದಿನಾಲ್ಕು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ. "ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ಆದಾಯ ಹಂಚಿಕೆ ಕೊರತೆಯ ಆರನೇ ಇಎಂಐ ಅನ್ನು 14 ರಾಜ್ಯಗಳಿಗೆ 6,195.08 ಕೋಟಿ ರುಪಾಯಿ ಸರ್ಕಾರವು ಸೆಪ್ಟೆಂಬರ್ 10, 2020ರಂದು ಬಿಡುಗಡೆ ಮಾಡಿದೆ, ಕೊರೊನಾ ಬಿಕ್ಕಟ್ಟಿನ ಮಧ್ಯೆ ಇದರಿಂದ ಹೆಚ್ಚುವರಿ ಸಂಪನ್ಮೂಲ ಒದಗಿಸುತ್ತದೆ" ಎಂದು ಕೇಂದ್ರ ಹಣಕಾಸು ಸಚಿವಾಲಯದ ಟ್ವೀಟ್ ನಲ್ಲಿ ತಿಳಿಸಲಾಗಿದೆ.
ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ್, ಪಶ್ಚಿಮ ಬಂಗಾಲ ಈ ಹದಿನಾಲ್ಕು ರಾಜ್ಯಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಇದೇ ರೀತಿಯ ಮೊತ್ತವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್- ಆಗಸ್ಟ್ ಅವಧಿಗೆ ಬಿಡುಗಡೆ ಮಾಡಲಾಗಿತ್ತು.

ಹಂಚಿಕೆ ನಂತರದ ಆದಾಯ ನಷ್ಟವನ್ನು ತುಂಬಿಕೊಡಲು ಅನುಸರಿಸಬೇಕಾದ ಮಾರ್ಗದ ಬಗ್ಗೆ ಕೇಂದ್ರಕ್ಕೆ ಹಣಕಾಸು ಆಯೋಗವು ಕಾರ್ಯವಿಧಾನ ಸೂಚಿಸಿದೆ.


Click it and Unblock the Notifications