For Quick Alerts
ALLOW NOTIFICATIONS  
For Daily Alerts

48,000 ಕೋಟಿ ರು. ಮೌಲ್ಯದ 83 ತೇಜಸ್ LCA ಖರೀದಿ ಒಪ್ಪಂದ ಅಂತಿಮ

|

48,000 ಕೋಟಿ ರುಪಾಯಿ ಮೌಲ್ಯದ 83 ತೇಜಸ್ ಎಲ್ ಸಿಎ (ಲೈಟ್ ಕಂಬ್ಯಾಟ್ ಏರ್ ಕ್ರಾಫ್ಟ್) ಅನ್ನು ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನಿಂದ ಖರೀದಿ ಮಾಡುವ ಒಪ್ಪಂದವನ್ನು ಕೇಂದ್ರ ಸರ್ಕಾರವು ಬುಧವಾರ ಅಂತಿಮಗೊಳಿಸಿದೆ.

ಈ ಒಪ್ಪಂದವನ್ನು ರಕ್ಷಣಾ ಸಚಿವಾಲಯದ ಪ್ರಧಾನ ನಿರ್ದೇಶಕ (ಖರೀದಿ) ವಿ.ಎಲ್. ಕಾಂತಾ ರಾವ್ ಅವರು ಎಚ್ ಎಎಲ್ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್. ಮಾಧವನ್ ಗೆ ಹಸ್ತಾಂತರ ಮಾಡಿದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ- 2021ರ ಉದ್ಘಾಟನಾ ಕಾರ್ಯಕ್ರಮದ ವೇಳೆ ಈ ಒಪ್ಪಂದವನ್ನು ಅಂತಿಮಗೊಳಿಸಲಾಯಿತು. ಈ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಈ ಸಂದರ್ಭದಲ್ಲಿ ಹಾಜರಿದ್ದರು.

HAL ಉದ್ಯೋಗಿಗಳಿಂದ ಏಪ್ರಿಲ್ 20ರಿಂದ ಕೆಲಸ ಆರಂಭ: ಷರತ್ತು ಅನ್ವಯHAL ಉದ್ಯೋಗಿಗಳಿಂದ ಏಪ್ರಿಲ್ 20ರಿಂದ ಕೆಲಸ ಆರಂಭ: ಷರತ್ತು ಅನ್ವಯ

ಎಚ್ ಎಎಲ್ ತಯಾರಿಸಿರುವ ಒಂದು ಎಂಜಿನ್ ನ ಮಲ್ಟಿ ರೋಲ್ ಸೂಪರ್ ಸಾನಿಕ್ ಯುದ್ಧ ವಿಮಾನ ತೇಜಸ್. ಇದು ಎಂಥ ಕಠಿಣ ಸವಾಲಿನ ಪರಿಸ್ಥಿತಿಯಲ್ಲೂ ಕಾರ್ಯ ನಿರ್ವಹಿಸುತ್ತದೆ.

48,000 ಕೋಟಿ ರು. ಮೌಲ್ಯದ 83 ತೇಜಸ್ LCA ಖರೀದಿ ಒಪ್ಪಂದ ಅಂತಿಮ

ಕಳೆದ ತಿಂಗಳು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ 73 ತೇಜಸ್ Mk- IA, 10 ಎಲ್ ಸಿಎ ತೇಜಸ್ Mk-I ತರಬೇತಿ ವಿಮಾನವನ್ನು ಎಚ್ ಎಎಲ್ ನಿಂದ ಖರೀದಿ ಮಾಡಲು ಒಪ್ಪಿಗೆ ಸೂಚಿಸಲಾಗಿತ್ತು.

English summary

Central Government Seals Rs 48000 Crore Worth Of Tejas LCA Procurement Deal With HAL

Union government on Wednesday sealed Rs 48,000 crore worth of Tejas LCA procurement with HAL. Here is the details.
Story first published: Wednesday, February 3, 2021, 15:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X