For Quick Alerts
ALLOW NOTIFICATIONS  
For Daily Alerts

2020-21ರಲ್ಲಿ ಪರೋಕ್ಷ ತೆರಿಗೆ ಸಂಗ್ರಹ ಶೇಕಡಾ 12.3ರಷ್ಟು ಹೆಚ್ಚಳ: 10.71 ಲಕ್ಷ ಕೋಟಿ ರೂ.

|

2020-21ರ ಹಣಕಾಸು ವರ್ಷದಲ್ಲಿ ನಿವ್ವಳ ಪರೋಕ್ಷ ತೆರಿಗೆ ಸಂಗ್ರಹವು ವಾರ್ಷಿಕವಾಗಿ ಶೇಕಡಾ 12.3ರಷ್ಟು ಹೆಚ್ಚಳವಾಗಿ 10.71 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಈ ಮೂಲಕ ಪರಿಷ್ಕೃತ ಅಂದಾಜುಗಳಲ್ಲಿ ನಿಗದಿಪಡಿಸಿದ್ದ ಗುರಿಯನ್ನೂ ಕೂಡ ಮೀರಿದೆ ಎಂದು ಹಣಕಾಸು ಸಚಿವಾಲಯ ಮಂಗಳವಾರ ತಿಳಿಸಿದೆ.

ಪರೋಕ್ಷ ತೆರಿಗೆಯು ಜಿಎಸ್‌ಟಿ, ಕಸ್ಟಮ್ಸ್‌ ಮತ್ತು ಅಬಕಾರಿ ಸುಂಕವನ್ನು ಒಳಗೊಂಡಿದ್ದು, 2019-20ರಲ್ಲಿ 9.54 ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗಿತ್ತು. 2020-21ರ ಪರಿಷ್ಕೃತ ಅಂದಾಜು (ಆರ್‌ಇ) ಯಲ್ಲಿ 9.89 ಲಕ್ಷ ಕೋಟಿಗೆ ರೂಪಾಯಿಗೆ ಗುರಿ ನಿಗದಿಪಡಿಸಲಾಗಿದೆ. ಆದರೆ ಈ ಗುರಿಯನ್ನೂ ಮೀರಿ ತೆರಿಗೆ ಸಂಗ್ರಹಗೊಂಡಿದೆ.

2020-21ರಲ್ಲಿ ಪರೋಕ್ಷ ತೆರಿಗೆ ಸಂಗ್ರಹ ಶೇಕಡಾ 12.3ರಷ್ಟು ಹೆಚ್ಚಳ

ಕಳೆದ ಹಣಕಾಸು ವರ್ಷದಲ್ಲಿ(2020-21) ಜಿಎಸ್‌ಟಿ ನಿವ್ವಳ ತೆರಿಗೆ ಸಂಗ್ರಹವು 5.48 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಆದರೆ ಇದು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇಕಡಾ 8ರಷ್ಟು ಇಳಿಕೆಗೊಂಡಿದೆ. 2019-20ರಲ್ಲಿ 5.99 ಲಕ್ಷ ಕೋಟಿ ತೆರಿಗೆ ಆದಾಯ ಸಂಗ್ರಹವಾಗಿತ್ತು.

ಇನ್ನು ಕಸ್ಟಮ್‌ ಆದಾಯವು 2020-21ರಲ್ಲಿ 1.32 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ(1.09 ಲಕ್ಷ ಕೋಟಿ) ಶೇಕಡಾ 21ರಷ್ಟು ಬೆಳವಣಿಗೆ ಸಾಧಿಸಿದೆ.

ಜೊತೆಗೆ ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆ ಶೇಕಡಾ 59.2ರಷ್ಟು ಹೆಚ್ಚಾಗಿದ್ದು, 2.45 ಲಕ್ಷ ಕೋಟಿಯಿಂದ 3.91 ಲಕ್ಷ ಕೋಟಿ ರೂಪಾಯಿಗೆ ಏರಿಕೆಗೊಂಡಿದೆ. ಕಳೆದ ಆರು ತಿಂಗಳಿನಲ್ಲಿ ಜಿಎಸ್‌ಟಿ ಆದಾಯ ಸಂಗ್ರಹವು ಸತತವಾಗಿ 1 ಲಕ್ಷ ಕೋಟಿ ರೂಪಾಯಿ ದಾಟಿದೆ.

English summary

Central Indirect Tax Collection Up 12.3 Percent In FY21

The central government’s indirect tax collections rose by more than 12 per cent at Rs 10.71 trillion during Financial Year (FY) 2020-21
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X