For Quick Alerts
ALLOW NOTIFICATIONS  
For Daily Alerts

ಗೋಧಿ ರಫ್ತಿನ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ

|

ಕೇಂದ್ರ ಸರ್ಕಾರವು ಮೇ 13ರಂದು ಹೊರಡಿಸಲಾದ ಗೋಧಿ ರಫ್ತು ನಿಷೇಧದ ಆದೇಶವನ್ನು ಸಡಿಲಗೊಳಿಸಿದೆ. ಕಸ್ಟಮ್ಸ್ ಇಲಾಖೆಯ ವ್ಯವಸ್ಥೆಗಳಲ್ಲಿ ನೋಂದಾಯಿಸಲಾದ ಮತ್ತು ಮೇ 13 ರ ಮೊದಲು ಪರೀಕ್ಷೆಗೆ ಹಸ್ತಾಂತರಿಸಲಾದ ರಫ್ತು ಸರಕುಗಳನ್ನು ಅನುಮತಿಸಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಮೇ 17 ರಂದು ತಿಳಿಸಿದೆ.

ಈಜಿಪ್ಟ್ ಸರ್ಕಾರವು ಅನುಮತಿ ನೀಡುವಂತೆ ಮಾಡಿದ ಮನವಿಯ ನಂತರ ಈಜಿಪ್ಟ್‌ಗೆ ಹೋಗುವ ಗೋಧಿ ರವಾನೆಗೆ ಸರ್ಕಾರವು ಅನುಮತಿ ನೀಡಿತು. ಇದು ಈಗಾಗಲೇ ಕಾಂಡ್ಲಾ ಬಂದರಿನಲ್ಲಿ ರವಾನೆಗೆ ಸಿದ್ದವಾಗುತ್ತಿದೆ. 61,500 ಮೆಟ್ರಿಕ್ ಟನ್ ಗೋಧಿ ರವಾನೆಯ ಬಹುಭಾಗವನ್ನು ಈಗಾಗಲೇ ಈಜಿಪ್ಟ್‌ಗೆ ಸಾಗಿಸಲು ಸಿದ್ಧ ಮಾಡಲಾಗಿದೆ.

ತಕ್ಷಣದಿಂದ ಜಾರಿಗೆ ಬರುವಂತೆ ಗೋಧಿ ರಫ್ತು ನಿಷೇಧತಕ್ಷಣದಿಂದ ಜಾರಿಗೆ ಬರುವಂತೆ ಗೋಧಿ ರಫ್ತು ನಿಷೇಧ

ಸರ್ಕಾರವು ಈಗ ರಫ್ತುದಾರರಿಗೆ ಬಾಕಿ 17,160 ಮೆಟ್ರಿಕ್ ಟನ್‌ಗಳನ್ನು ಸಾಗಾಟ ಮಾಡಲು ಅನುಮತಿ ನೀಡಿದೆ. ಆದ್ದರಿಂದ ಸಂಪೂರ್ಣ ರವಾನೆಯು ಕಾಂಡ್ಲಾದಿಂದ ಈಜಿಪ್ಟ್‌ಗೆ ಆಗಲಿದೆ. ಈ ಎಲ್ಲಾ ಬೆಳವಣಿಗೆಯ ನಂತರ ಈಗ ಕೇಂದ್ರ ಸರ್ಕಾರವು ಗೋಧಿ ರಫ್ತಿನ ಮೇಲಿನ ನಿರ್ಬಂಧವನ್ನು ಕೊಂಚ ಸಡಿಲಿಕೆ ಮಾಡಿದೆ.

ಗೋಧಿ ರಫ್ತಿನ ಮೇಲಿನ ನಿರ್ಬಂಧ ಸಡಿಲಿಸಿದ ಕೇಂದ್ರ ಸರ್ಕಾರ

ಕಳೆದ ವಾರದ ನಿಷೇಧದ ಆದೇಶದ ಹಿಂದಿನ ಉದ್ದೇಶವನ್ನು ಪುನರುಚ್ಚರಿಸಿದ ಸಚಿವಾಲಯವು, ಆಹಾರದ ಕೊರತೆಯನ್ನು ಎದುರಿಸುತ್ತಿರುವ ಇತರ ದೇಶಗಳಿಗೆ ಸಹಾಯ ಮಾಡುವುದರಿಂದ ಪೂರೈಕೆದಾರರಾಗಿ ಭಾರತದ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲಿದೆ. ಹಾಗೆಯೇ ಭಾರತದ ಆಹಾರ ಭದ್ರತೆಯನ್ನು ಕೂಡಾ ಖಚಿತಪಡಿಸಲಾಗುತ್ತದೆ. ಹಣದುಬ್ಬರ ನಿಯಂತ್ರಣ ಮಾಡಲಾಗುತ್ತದೆ ಎಂದು ಸರ್ಕಾರವು ಭರವಸೆ ನೀಡಿದೆ. ಗೋಧಿ ಸರಬರಾಜು ಸಂಗ್ರಹಣೆಯನ್ನು ತಡೆಗಟ್ಟಲು ಗೋಧಿ ಮಾರುಕಟ್ಟೆಗೆ ಸ್ಪಷ್ಟ ನಿರ್ದೇಶನವನ್ನು ನೀಡುವ ಗುರಿಯನ್ನು ಈ ಆದೇಶವು ಹೊಂದಿದೆ ಎಂದು ಸಚಿವಾಲಯ ಸೇರಿಸಿದೆ.

bದೇಶದ ಒಟ್ಟಾರೆ ಆಹಾರ ಭದ್ರತೆಯನ್ನು ನಿರ್ವಹಿಸಲು ಸರ್ಕಾರವು ಗೋಧಿ ರಫ್ತನ್ನು ಈ ಕೂಡಲೇ ಜಾರಿಗೆ ಬರುವಂತೆ ನಿರ್ಬಂಧಿಸಿತ್ತು. ದೇಶದಲ್ಲಿ ಆಹಾರ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಪ್ರಯತ್ನದಲ್ಲಿ ಸರ್ಕಾರವು "ನಿಷೇಧಿತ" ವರ್ಗದ ಅಡಿಯಲ್ಲಿ ಗೋಧಿ ರಫ್ತನ್ನು ತಂದಿತ್ತು.

ಮೇ ಅಥವಾ ಅದಕ್ಕೂ ಮೊದಲು ಐಎಲ್‌ಒಸಿ ಅಥವಾ ರಫ್ತಿನ ಒಪ್ಪಂದ ನಡೆದಿದ್ದರೆ ಮಾತ್ರ ಮೇ 13ರ ಒಳಗೆ ರಫ್ತಿಗೆ ಅವಕಾಶ ನೀಡಲಾಗುವುದು. ಇಲ್ಲವಾದರೆ ಗೋಧಿ ರಫ್ತಿಗೆ ಅವಕಾಶವಿಲ್ಲ ಎಂದು ಅಧಿಸೂಚನೆಯಲ್ಲಿ ಉಲ್ಲೇಖ ಮಾಡಲಾಗಿತ್ತು. ಈಗ ಕಸ್ಟಮ್ಸ್ ಇಲಾಖೆಯ ವ್ಯವಸ್ಥೆಗಳಲ್ಲಿ ನೋಂದಾಯಿಸಲಾದ ಮತ್ತು ಮೇ 13 ರ ಮೊದಲು ಪರೀಕ್ಷೆಗೆ ಹಸ್ತಾಂತರಿಸಲಾದ ರಫ್ತು ಸರಕುಗಳನ್ನು ಅನುಮತಿಸಲು ಸರ್ಕಾರ ಆದೇಶಿಸಿದೆ.

English summary

Centre Government Eases Restrictions on Wheat Export

Centre Government Eases Restrictions on Wheat Export. Government announces relaxation in curbs in wheat export.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X