For Quick Alerts
ALLOW NOTIFICATIONS  
For Daily Alerts

ದೀಪಾವಳಿ ಸಂದರ್ಭದಲ್ಲಿ ಹಾಲ್ ಮಾರ್ಕ್ ಆಭರಣಗಳನ್ನೇ ಖರೀದಿಸಿ!

|

ನವದೆಹಲಿ, ನವೆಂಬರ್ 3: ದೀಪಾವಳಿ, ದಂತೆರಸ್ ಹಬ್ಬಗಳ ಸಂದರ್ಭದಲ್ಲಿ ಚಿನ್ನದ ಖರೀದಿ ಜೋರಾಗುವ ನಿರೀಕ್ಷೆಯಿದೆ. ಈ ನಡುವೆ ಹಾಲ್ ಮಾರ್ಕ್ ಯುಕ್ತ ಚಿನ್ನಾಭರಣಗಳನ್ನೇ ಖರೀದಿಸಿ ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್(ಬಿಐಎಸ್) ಗ್ರಾಹಕರಿಗೆ ಸೂಚಿಸಿದೆ.

 

ಕೇಂದ್ರ ಗ್ರಾಹಕ ವ್ಯವಹಾರ ಖಾತೆಯಡಿಯಲ್ಲಿರುವ ಬಿಐಎಸ್ ದೇಶದ ವಿವಿಧೆಡೆ ಹಾಲ್ ಮಾರ್ಕ್ ಕುರಿತಂತೆ ಜಾಗೃತಿ ಅಭಿಯಾನ ಕಾಲ ಕಾಲಕ್ಕೆ ನಡೆಸುತ್ತಿದ್ದು, ಈ ಕುರಿತಂತೆ ಬಂದಿರುವ ದೂರುಗಳನ್ನು ಸ್ವೀಕರಿಸಿ ಪರಿಹರಿಸುತ್ತಿದೆ.

 

ಚಿನ್ನದ ಆಭರಣಗಳ ಅಡಮಾನ ಅಥವಾ ಮಾರಾಟಕ್ಕೆ ಹಾಲ್‌ಮಾರ್ಕ್ ಅಗತ್ಯವಿದೆಯೇ?ಚಿನ್ನದ ಆಭರಣಗಳ ಅಡಮಾನ ಅಥವಾ ಮಾರಾಟಕ್ಕೆ ಹಾಲ್‌ಮಾರ್ಕ್ ಅಗತ್ಯವಿದೆಯೇ?

ದೀಪಾವಳಿ ಸಂದರ್ಭದಲ್ಲಿ ಚಿನ್ನದ ಖರೀದಿ ಶುಭ ಎಂದು ಪರಿಗಣಿಸಲಾಗುತ್ತಿದ್ದು, ಗ್ರಾಹಕರು ಬೆಲೆ ಏರಿಳಿತದ ನಡುವೆಯೂ ಆಭರಣ ಖರೀದಿಗೆ ಮುಂದಾಗುತ್ತಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಹಾಲ್ ಮಾರ್ಕ್ ಆಭರಣಗಳನ್ನೇ ಖರೀದಿಸಿ!

ಹಾಲ್‌ಮಾರ್ಕಿಂಗ್‌ನ ವೇಗದ ಕುರಿತು ಮಾತನಾಡಿದ ಬಿಐಎಸ್ ಮಹಾ ನಿರ್ದೇಶಕರು, 19 ಆಗಸ್ಟ್ 2021 ರಂದು ತಯಾರಕರು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ಗ್ರಾಹಕರ ಗುಂಪುಗಳು, ಎಎಚ್‌ಸಿಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಆಭರಣ ಉದ್ಯಮಗಳ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಗ್ರಾಹಕರ ವ್ಯವಹಾರಗಳ ಸಚಿವರು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದ್ದಾರೆ. ಎಚ್ ಯು ಐ ಡಿ ಆಧಾರಿತ ಹಾಲ್‌ಮಾರ್ಕಿಂಗ್ ಯೋಜನೆಗೆ ಸಂಪೂರ್ಣ ಬೆಂಬಲ ಸಿಗುತ್ತಿದೆ.

ಎಎಚ್‌ಸಿ ಹೊಂದಿರುವ 256 ಜಿಲ್ಲೆಗಳಲ್ಲಿ ಮಾತ್ರ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಲಾಗಿದೆ. ಹಾಲ್‌ಮಾರ್ಕಿಂಗ್‌ಗೆ 20, 23 ಮತ್ತು 24 ಕ್ಯಾರೆಟ್ ಚಿನ್ನದ ಆಭರಣಗಳನ್ನು ಅನುಮತಿಸಲಾಗಿದೆ.

ಭಾರತೀಯ ಮಾನದಂಡವನ್ನು ತಿದ್ದುಪಡಿ ಮಾಡಲಾಗಿದ್ದು, ಒಂದೇ ರೀತಿಯ ಶುದ್ಧತೆಯ ಸಣ್ಣ ಮಿಶ್ರಣಗಳಿಗೂ ಹಾಲ್‌ಮಾರ್ಕಿಂಗ್ ಅನ್ನು ಅನುಮತಿಸುತ್ತದೆ.

ದೀಪಾವಳಿ ಸಂದರ್ಭದಲ್ಲಿ ಹಾಲ್ ಮಾರ್ಕ್ ಆಭರಣಗಳನ್ನೇ ಖರೀದಿಸಿ!

ನೋ ಟ್ರ್ಯಾಕಿಂಗ್, ಆತಂಕ ಬೇಡ: ಬಿಐಎಸ್, ಆಭರಣಗಳ ಬಿ-ಟಿ-ಬಿ ಚಲನೆಯನ್ನು ಟ್ರ್ಯಾಕಿಂಗ್ ಮಾಡುತ್ತಿದೆ ಮತ್ತು ಆಭರಣ ವ್ಯಾಪಾರಿಗಳು ಬಿಐಎಸ್ ಪೋರ್ಟಲ್‌ನಲ್ಲಿ ಮಾರಾಟದ ವಿವರಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಎಂಬುದು ಸಂಪೂರ್ಣ ತಪ್ಪು ಮಾಹಿತಿ ಹರಿದಾಡುತ್ತಿದ್ದು, ಹಲವೆಡೆ ಪ್ರತಿಭಟನೆ ಕೂಡಾ ಹಮ್ಮಿಕೊಳ್ಳಲಾಗಿತ್ತು.

ಆಭರಣ ವ್ಯಾಪಾರಿಗಳು ಅಂತಹ ಯಾವುದೇ ವಿವರ ನೀಡಬೇಕಾದ ಅವಶ್ಯಕತೆ ಇಲ್ಲ. ಎಚ್ ಯು ಐ ಡಿ- ಆಧಾರಿತ ಹಾಲ್‌ಮಾರ್ಕಿಂಗ್ ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗಿದೆ

ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರುತ್ತದೆ, ಗ್ರಾಹಕರು ತಮ್ಮ ಹಣಕ್ಕೆ ಸರಿಯಾದ ಆಭರಣವನ್ನು ಪಡೆಯುವ ಹಕ್ಕನ್ನು ಖಾತ್ರಿಪಡಿಸುತ್ತದೆ

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ವೆಬ್‌ಸೈಟ್‌ನ ಪ್ರಕಾರ, ಬಿಐಎಸ್ ಮಾನ್ಯತೆ ಪಡೆದ ಆಭರಣಕಾರರು ಪಾವತಿಸಬೇಕಾದ ಚಿನ್ನಾಭರಣಗಳು / ಕಲಾಕೃತಿಗಳಿಗೆ ಹಾಲ್‌ಮಾರ್ಕಿಂಗ್ ಶುಲ್ಕಗಳು ಪ್ರತಿ ಆಭರಣಕ್ಕೆ 35 ರೂ. ನಷ್ಟಿದ್ದು, ಒಂದು ಸರಕುಗೆ ಕನಿಷ್ಠ ಸೇವೆಗಳ ತೆರಿಗೆ ಮತ್ತು ಅನ್ವಯವಾಗುವ ಇತರ ಸುಂಕಗಳು ಹೆಚ್ಚುವರಿವಾಗಿ 200 ರೂ. ಅನ್ವಯಿಸುತ್ತದೆ. ಆಭರಣಗಳ ತೂಕ ಏನೇ ಇರಲಿ, ಹಾಲ್‌ಮಾರ್ಕಿಂಗ್ ಬೆಲೆಗಳು ಚಿನ್ನದ ಆಭರಣಗಳಿಗೆ ಪ್ರತಿ ತುಂಡಿಗೆ 35 ಪಾಯಿ ಪ್ಲಸ್‌ ಜಿಎಸ್‌ಟಿ ಮತ್ತು ಬೆಳ್ಳಿ ಆಭರಣಗಳಿಗೆ 25 ರೂಪಾಯಿ ಪ್ಲಸ್‌ ಜಿಎಸ್‌ಟಿ ಆಗಿದೆ.

ಬಿಐಎಸ್ ಮಾರ್ಕ್ ಜೊತೆಗೆ 6 ಅಂಕಿಗಳ ಆಲ್ಫಾನ್ಯೂಮರಿಕ್ ಕೂಡಾ ಇರಲಿದ್ದು, ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ಬಿಐಎಸ್ ಹೇಳಿದೆ. ಹಾಲ್‌ಮಾರ್ಕ್‌ ಕಾಯ್ದೆಯು ಆಭರಣ ವ್ಯಾಪಾರಿಗಳು ಗ್ರಾಹಕರಿಗೆ ಮಾರಾಟ ಮಾಡುವ ಚಿನ್ನಕ್ಕೆ ಮಾತ್ರ ಅನ್ವಯಿಸುತ್ತದೆ. ಗ್ರಾಹಕರು ತಮ್ಮ ಚಿನ್ನಾಭರಣಗಳು, ನಾಣ್ಯಗಳು ಅಥವಾ ಇನ್ಯಾವುದೇ ಚಿನ್ನದ ವಸ್ತುಗಳನ್ನು ಮಾರಾಟ ಮಾಡುವ ಮೊದಲು ಹಾಲ್‌ಮಾರ್ಕ್‌ ಮಾಡಿಸುವ ಅಗತ್ಯವಿಲ್ಲ. ಹೀಗಾಗಿ ಹಾಲ್‌ಮಾರ್ಕ್ ಇಲ್ಲದ ಆಭರಣಗಳನ್ನು ಸಂಗ್ರಹಿಸುವ ಅಥವಾ ಬಳಸಿಕೊಳ್ಳುವ ವ್ಯಕ್ತಿಗಳಿಗೆ ಇದರಿಂದ ಯಾವುದೇ ಪರಿಣಾಮವಿಲ್ಲ. ಆದರೆ ಈ ಹಾಲ್‌ಮಾರ್ಕ್ ಇದ್ದರೆ ಗ್ರಾಹಕರು ತಮ್ಮ ಆಭರಣಗಳನ್ನು ಅದರ ಶುದ್ಧತೆಗೆ ಅನುಗುಣವಾಗಿ ಮಾರುಕಟ್ಟೆ ಮೌಲ್ಯಕ್ಕೆ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ಹಾಲ್‌ಮಾರ್ಕ್ ಇಲ್ಲದಿದ್ದರೂ ಮಾರಾಟ ಮಾಡಲು ಸಾಧ್ಯವಿದೆ. ಇನ್ನೊಂದು ವಿಚಾರ ಗಮನಿಸಿ ನಿಮ್ಮ ಚಿನ್ನದಲ್ಲಿ ಹಾಲ್‌ಮಾರ್ಕ್‌ ಇಲ್ಲ ಎಂದು ಆಭರಣ ವ್ಯಾಪಾರಿ ಚಿನ್ನ ವಿನಿಮಯ ಮಾಡಿಕೊಳ್ಳಲು ನಿರಾಕರಿಸಿದರೆ ಗ್ರಾಹಕರು ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು.

English summary

Centre urges Consumers to buy only hallmarked jewellery during festival

The Bureau of Indian Standards(BIS) of the Consumer Affairs Department has urged consumer to buy only hallmarked jewellery during festival season.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X