For Quick Alerts
ALLOW NOTIFICATIONS  
For Daily Alerts

ಚೆನ್ನೈ ಕಸ್ಟಮ್ಸ್ ನಿಂದ ರು. 1.14 ಕೋಟಿಯ 2.32 ಕೇಜಿ ಚಿನ್ನ ವಶಕ್ಕೆ

|

ಚೆನ್ನೈ ವಿಮಾನ ನಿಲ್ದಾಣದಲ್ಲಿ 2.32 ಕೇಜಿ ತೂಕದ 1.14 ಕೋಟಿ ಮೌಲ್ಯದ ಚಿನ್ನವನ್ನು ಚೆನ್ನೈ ಏರ್ ಕಸ್ಟಮ್ಸ್ ಇಲಾಖೆಯಿಂದ ಶನಿವಾರ ವಶಪಡಿಸಿಕೊಳ್ಳಲಾಗಿದೆ. ದುಬೈ ವಿಮಾನದಿಂದ 1.16 ಕೇಜಿ ಚಿನ್ನ, ಮತ್ತು ಬಾಕಿ ಚಿನ್ನ ಗುವಾಹತಿಯಿಂದ ಬಂದ ಪ್ರಯಾಣಿಕನಿಂದ 1.16 ಕೇಜಿ ಚಿನ್ನವನ್ನು ಚೆನ್ನೈ ಕಸ್ಟಮ್ಸ್ ವಶಪಡಿಸಿಕೊಂಡಿದೆ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.

 

ಈ ಹಿಂದೆ ಜನವರಿ 24ರಂದು ಚೆನ್ನೈ ಏರ್ ಕಸ್ಟಮ್ಸ್ 1.75 ಕೋಟಿ ರುಪಾಯಿ ಮೌಲ್ಯದ 3.46 ಕೇಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿತ್ತು. ಇದರ ಜತೆಗೆ ದುಬೈನಿಂದ ಬಂದ ಪ್ರಯಾಣಿಕರಿಂದ ಸಿಗರೇಟ್ ಗಳು ಮತ್ತು 2.5 ಲಕ್ಷ ರುಪಾಯಿ ಮೌಲ್ಯದ ಲ್ಯಾಪ್ ಟಾಪ್ ಅನ್ನು ಕೂಡ ವಶಕ್ಕೆ ಪಡೆದಿದ್ದರು. ಎಲ್ಲ ಐವರು ಪ್ರಯಾಣಿಕರನ್ನು ಬಂಧಿಸಲಾಗಿತ್ತು.

 

ಕೊರೊನಾದಿಂದ ವಿಮಾನ ಹಾರಾಟಕ್ಕೆ ನಿರ್ಬಂಧ; ಚಿನ್ನ ಕಳ್ಳ ಸಾಗಣೆಗೆ ಬಿತ್ತು ಬ್ರೇಕ್ಕೊರೊನಾದಿಂದ ವಿಮಾನ ಹಾರಾಟಕ್ಕೆ ನಿರ್ಬಂಧ; ಚಿನ್ನ ಕಳ್ಳ ಸಾಗಣೆಗೆ ಬಿತ್ತು ಬ್ರೇಕ್

ಮತ್ತೊಂದು ಪ್ರಕರಣದಲ್ಲಿ 36.52 ಲಕ್ಷ ರುಪಾಯಿ ಮೌಲ್ಯದ 722 ಗ್ರಾಮ್ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಸುಪರ್ದಿಗೆ ತೆಗೆದುಕೊಂಡು, ವಿಮಾನ ನಿಲ್ದಾಣದಲ್ಲಿ ಒಬ್ಬ ಪ್ರಯಾಣಿಕನನ್ನು ಬಂಧಿಸಿದ್ದಾರೆ.

ಚೆನ್ನೈ ಕಸ್ಟಮ್ಸ್ ನಿಂದ ರು. 1.14 ಕೋಟಿಯ 2.32 ಕೇಜಿ ಚಿನ್ನ ವಶಕ್ಕೆ

ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಆಯುಕ್ತರು ಪತ್ರಿಕಾ ಹೇಳಿಕೆ ನೀಡಿ, ಇಪ್ಪತ್ತೊಂದು ವರ್ಷದ ಮಣಿಕಂದನ್ ಶಂಕರ್ ಎಂಬಾತ ದುಬೈನಿಂದ ಹಿಂತಿರುಗುತ್ತಿದ್ದ. ಆತನಿಂದ 836 ಗ್ರಾಮ್ ತೂಕದ ಮೂರು ಬಂಡಲ್ ಚಿನ್ನದ ಪೇಸ್ಟ್ ವಶಪಡಿಸಿಕೊಂಡಿದ್ದೇವೆ ಎಂದಿದ್ದಾರೆ. ಜತೆಗೆ ಮುಂದಿನ ವಿಚಾರಣೆ ಪ್ರಗತಿಯಲ್ಲಿದೆ.

English summary

Chennai Customs Seized Rs 1.14 Crore Worth Of 2.32 Kg Gold

Chennai customs officials seized Rs 1.14 crore worth of 2.32 Kg gold on Saturday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X