For Quick Alerts
ALLOW NOTIFICATIONS  
For Daily Alerts

ಜರ್ಮನಿಯಿಂದ ಹಂದಿ ಮಾಂಸ/ಉತ್ಪನ್ನ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಿದ ಚೀನಾ

|

ಕಳೆದ ವಾರ ಕಾಡು ಹಂದಿಯಲ್ಲಿ ಆಫ್ರಿಕನ್ ಹಂದಿ ಜ್ವರದ ಮೊದಲ ಪ್ರಕರಣವನ್ನು ದೃಢಪಡಿಸಿದ ನಂತರ ಚೀನಾವು ಜರ್ಮನಿಯಿಂದ ಹಂದಿ ಮಾಂಸ ಮತ್ತು ಹಂದಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿದೆ.

 

ಚೀನಾದ ಮೂರನೇ ಅತಿದೊಡ್ಡ ಹಂದಿಮಾಂಸ ಸರಬರಾಜುದಾರನಾದ ಜರ್ಮನಿಯ ಆಮದನ್ನು ನಿರ್ಬಂಧಿಸುವ ಕ್ರಮವು ಚೀನಾಕ್ಕೆ ಮಾಂಸದ ಅಭೂತಪೂರ್ವ ಕೊರತೆಯನ್ನು ಎದುರಿಸುವಂತೆ ಮಾಡಿದೆ.

 

ಚೀನಾದ ಕಸ್ಟಮ್ಸ್ ಸಂಸ್ಥೆ ಮತ್ತು ಅದರ ಕೃಷಿ ಸಚಿವಾಲಯವು ಘೋಷಿಸಿದ ನಿಷೇಧವನ್ನು ಬೀಜಿಂಗ್ ಇತಿಹಾಸದಲ್ಲಿ ಬಹಳ ಅಪರೂಪದ ಪ್ರಕರಣವೆಂದು ಪರಿಗಣಿಸಲಾಗಿದೆ. ಈ ಕ್ರಮವು ಅಮೆರಿಕಾ, ಸ್ಪೇನ್, ಕೆನಡಾ ಮತ್ತು ಬ್ರೆಜಿಲ್‌ನಂತಹ ಇತರ ಪ್ರಮುಖ ಪೂರೈಕೆದಾರರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಜರ್ಮನಿಯಿಂದ ಹಂದಿ ಮಾಂಸ ಆಮದನ್ನು ನಿಲ್ಲಿಸಿದ ಚೀನಾ

ಚೀನಾ ವಿಶ್ವದಲ್ಲೇ ಹಂದಿ ಮಾಂಸವನ್ನು ಖರೀದಿಸುವವರಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಮೊದಲ ಆರು ತಿಂಗಳಲ್ಲಿ ತನ್ನದೇ ಆದ ಉತ್ಪಾದನೆಯು ಶೇಕಡಾ 20 ರಷ್ಟು ಕುಸಿದ ನಂತರ ಈ ವರ್ಷ ದಾಖಲೆಯ ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತಿದೆ.

ಜರ್ಮನಿಯು ಜನವರಿ ಮತ್ತು ಏಪ್ರಿಲ್ 2020 ರ ನಡುವೆ 424 ಮಿಲಿಯನ್ ಯುರೋಗಳಷ್ಟು (501.6 ಮಿಲಿಯನ್ ಡಾಲರ್) ಮೌಲ್ಯದ 1,58,000 ಟನ್ ಹಂದಿಮಾಂಸವನ್ನು ಚೀನಾಕ್ಕೆ ರಫ್ತು ಮಾಡಿದೆ. ಇದು 2019ಕ್ಕೆ ಹೋಲಿಸಿದರೆ ಈ ವರ್ಷ ಎರಡು ಪಟ್ಟು ಹೆಚ್ಚಾಗಿದೆ ಎಂದು ಜರ್ಮನಿಯ ರಾಷ್ಟ್ರೀಯ ಅಂಕಿ ಅಂಶ ಕಚೇರಿ ತಿಳಿಸಿದೆ.

ಇನ್ನು ತಮ್ಮ ಹಂದಿ ಮಾಂಸವನ್ನು ಆಮದು ಮಾಡಿಕೊಳ್ಳುವುದನ್ನು ರಾಷ್ಟ್ರವ್ಯಾಪಿ ನಿಷೇಧಿಸುವುದನ್ನು ತಪ್ಪಿಸುವಂತೆ ಜರ್ಮನಿಯ ರೈತರು ಶುಕ್ರವಾರ ಚೀನಾವನ್ನು ಒತ್ತಾಯಿಸಿದ್ದಾರೆ.

English summary

China Bans Import Of German Pig Products After First Case Of African Swine Fever Reported

China announced on Saturday a ban on the import of pork and pig products from Germany after it confirmed its first case of African swine fever in a wild boar last week.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X